More

    ದಾರಿಹೋಕರು ನೀಡುವ ಜಂಕ್​ ಫುಡ್​ ತಿಂದು ಬೊಜ್ಜು ಬೆಳೆಸಿಕೊಂಡು ಪರದಾಡುತ್ತಿರುವ ಕೋತಿ!

    ಬ್ಯಾಂಕಾಕ್​: ಕುರುಕಲು ತಿಂಡಿ ಮಾನವನಿಗೆ ಮಾತ್ರವಲ್ಲ ಪ್ರಾಣಿಗಳಿಗೂ ತುಂಬಾ ಅಪಾಯಕಾರಿ ಎಂಬುದಕ್ಕೆ ಥಾಯ್ಲೆಂಡ್​ನ ಕೋತಿಯೊಂದು ಉದಾಹರಣೆಯಾಗಿದೆ. ಮಾರುಕಟ್ಟೆ ಏರಿಯಾದಲ್ಲಿ ದಾರಿಹೋಕರು ನೀಡುವ ಕುರುಕಲು ತಿನಿಸುಗಳನ್ನು ತಿಂದು ಬೊಜ್ಜು ಬೆಳೆಸಿಕೊಂಡಿರುವ ಮಂಗ ಇದೀಗ ಭಾರಿ ಸಮಸ್ಯೆಯನ್ನು ಎದುರಿಸುತ್ತಿದೆ.

    ಮೂರು ವರ್ಷದ ಮಂಗವನ್ನು “ಗಾಡ್ಜಿಲ್ಲಾ” ಎಂದು ಕರೆಯಲಾಗುತ್ತದೆ. ಗಾಡ್ಜಿಲ್ಲಾ ಈ ತಿಂಗಳ ಆರಂಭದಲ್ಲಿ ಬ್ಯಾಂಕಾಕ್​ನ ಮಿನ್​ ಬರಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿತು. ಅದು ಕುಳಿತುಕೊಳ್ಳುತ್ತಿದ್ದ ಅಂಗಡಿ ಮುಂದೆ ಜಮಾಯಿಸುತ್ತಿದ್ದ ದಾರಿಹೋಕರು ತಾವು ತೆಗೆದುಕೊಂಡ ತಿನಿಸನ್ನು ಕೋತಿಗೂ ಸಹ ನೀಡುತ್ತಿದ್ದರು. ತಿಂದು ತಿಂದು ಇದೀಗ ಹೊಟ್ಟೆ ಊದಿಸಿಕೊಂಡು ಯಾತನೆ ಅನುಭವಿಸುತ್ತಿದೆ.

    ಇದನ್ನೂ ಓದಿರಿ: ಶುರುವಾಯ್ತು ಒಬ್ಳೇ ಹೆಂಡ್ತಿ ಚಾಲೆಂಜ್​! ಸತ್ಯಹರಿಶ್ಚಂದ್ರ ಯಾರಪ್ಪಾ ಸವಾಲ್​ ಹಾಕಿದ ಸಚಿವ..

    ಯಾರಾದರು ಪರಿಚಿತ ಪ್ರವಾಸಿಗರೂ ಕೋತಿಯ ಬೆನ್ನನ್ನು ಉಜ್ಜಲು ಬಂದಾಗ ಅದು ಟೇಬಲ್​ ಮೇಲಿನ ಕುಶಾನ್​ ಮೇಲೆ ಹೋಗಿ ಬೀಳುತ್ತದೆ. ಆದರೆ, ಕೋತಿ ತನ್ನ ಮೊದಲಿನ ರೀತಿಯ ಲವಲವಿಕೆಯನ್ನು ಕಳೆದುಕೊಂಡಿದೆ.

    ಅಂಗಡಿ ಮಾಲೀಕ ಮನೋಪ್​ ಎಂಬುವರು ಈ ಹಿಂದಿನ ಅಂಗಡಿ ಮಾಲೀಕರಿಂದ ಗಾಡ್ಜಿಲ್ಲಾವನ್ನು ದತ್ತು ಪಡೆದರಂತೆ. ಕೋತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ. ಆದರೆ, ಅದರ ಗಾತ್ರವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಅಚ್ಚರಿಯೆಂದರೆ ತನ್ನ ಆಹಾರವನ್ನು ಹೇಗೆ ಪಡೆದುಕೊಳ್ಳಬೇಕೆಂಬುದು ಅದಕ್ಕೆ ತಿಳಿದಿಲ್ಲ. ಯಾರಾದರೂ ಕೊಟ್ಟರೆ ಮಾತ್ರ ಸ್ವೀಕರಿಸುತ್ತದೆ ಎಂದು ಹೇಳಿದ್ದಾರೆ.

    ಬಲೂನ್​ನಂತೆ ಊದಿಕೊಂಡಿರುವ ಗಾಡ್ಜಿಲ್ಲಾ ಸದ್ಯ 20 ಕೆಜಿ ತೂಕವಿದ್ದಾನೆ. ಅದರ ಅಂಕಲ್​ ಫ್ಯಾಟಿ 27 ಕೆಜಿ ತೂಗುತಿದ್ದ. ಅಂಕಲ್​ ಫ್ಯಾಟಿ 2017ರಲ್ಲಿ ಥಾಯ್ಲೆಂಡ್​ನಲ್ಲಿ ದಾರಿಹೋಕರ ನೀಡುವ ಜಂಕ್​ ಫುಡ್​ ತಿಂದು ದಪ್ಪಗಾಗಿದ್ದ, ಬಳಿಕ ಅದನ್ನು ಶಿಬಿರವೊಂದಕ್ಕೆ ಕಳುಹಿಸಿಕೊಡಲಾಗಿತ್ತು. ಆ ಬಳಿಕ ಇದ್ದಕ್ಕಿದ್ದಂತೆ ಫ್ಯಾಟಿ ಮಾಯವಾಗಿದ್ದ. ಬಳಿಕ ಮೃತಪಟ್ಟಿರಬಹುದು ಎಂದು ನಂಬಲಾಯಿತು.

    ಇದನ್ನೂ ಓದಿರಿ: ಪಬ್​ನಲ್ಲಿ ಯುವತಿಯ ಭುಜ ಕಚ್ಚಿ ವಿಕೃತಿ ಮೆರೆದ ಕಾಮುಕ: ಕೃತ್ಯಕ್ಕೂ ಮುನ್ನ ಈತನ ಸಂಚು ಭಯಾನಕ!

    ಮನೋಪ್​ ಅವರು ಗಾಡ್ಜಿಲ್ಲಾಗೆ ಪ್ರತಿದಿನ ವ್ಯಾಯಾಮವನ್ನು ಮಾಡಿಸುತ್ತಾರೆ. ಆದರೆ, ಯಾವುದೇ ಪರಿಣಾಮ ಬೀರಿಲ್ಲ. ಅಪರಿಚಿತರು ಗಾಡ್ಜಿಲ್ಲಾವನ್ನು ಮುಟ್ಟಿದರೆ ಅದಕ್ಕೆ ತುಂಬಾ ಕೋಪ ಬರುತ್ತದೆ. ಅವನ ಪರಿಚಯದವರು ಕೊಟ್ಟ ತಿಂಡಿಯನ್ನು ಅದು ತಿನ್ನುತ್ತದೆ. ಯಾರೇ ಕೊಟ್ಟರು ಅದು ಸ್ವೀಕರಿಸುವುದಿಲ್ಲ. ಇದೀಗ ಗಾಡ್ಜಿಲ್ಲಾ ಎಲ್ಲರ ಕೇಂದ್ರ ಬಿಂದುವಾಗಿದೆ. ಮಾಲೀಕನಿಗೆ ಮಾತ್ರ ಅದರ ತೂಕ ಇಳಿಸುವುದೇ ಸವಾಲಿನ ಕೆಲಸವಾಗಿದೆ. (ಏಜೆನ್ಸೀಸ್​)

    ಅಬ್ಬಾಜಾನ್​ ಬನ್ನಿ… ಶರಣಾಗಿ… ಶೂಟ್​ ಮಾಡಲ್ಲ… ನಾಲ್ಕು ವರ್ಷದ ಕಂದನ ಮಾತು ಕೇಳದೇ ಸತ್ತ ಉಗ್ರ!

    ಚೆನ್ನಾಗಿದೆ ಅಂತಾ ಪುಟ್ಟ ಪ್ರಾಣಿಯ ಜತೆ ಪೋಸ್​ ಕೊಟ್ಟ ಮಹಿಳೆ ಅದರ ಹಿನ್ನೆಲೆ ತಿಳಿದು ಬೆಚ್ಚಿಬಿದ್ದಳು!

    ಪೊಲೀಸರಿಗೆ ₹200 ದಂಡ ಕೊಡದೇ ವಕೀಲರಿಗೆ ₹10 ಸಾವಿರ ಫೀಸ್‌ ಕೊಟ್ಟು ಕೇಸ್‌ ಗೆದ್ದ ಉದ್ಯಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts