VIDEO| ಇಂಥಾ ಅಂಪೈರ್​ ನೀವು ಎಲ್ಲೂ ನೋಡಿರಲ್ಲ: ವಾವ್​ ಎನಿಸುವ ವಿಡಿಯೋ ಇದು!

Umpire
Published on

ಚಿಕ್ಕೋಡಿ: ನೀವೆಲ್ಲ ಅಂತಾರಾಷ್ಟ್ರೀಯ ಕ್ರಿಕೇಟ್ ಟೂರ್ನಿ, ಟಿ20 ಟೂರ್ನಿ ನೋಡೇ ಇರ್ತಿರಿ.. ಬೌಲರ್​ ವಿಕೆಟ್ ಪಡೆದು ಸಂಭ್ರಮಿಸಿದ್ರೆ, ಬ್ಯಾಟ್ಸಮ್ಯಾನ್ ಶತಕ ಸಿಡಿಸಿ ಸಂಭ್ರಮಿಸುತ್ತಾರೆ. ಆದರೆ ಇತ್ತೀಚಿಗೆ ಬೆಳಗಾವಿಯ ಗೋಕಾಕದಲ್ಲಿ‌ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಅಂಪೈರ್ ನೀಡುವ ಸಿಗ್ನಲ್​ ಫುಲ್ ಧೂಳೆಬ್ಬಿಸಿದೆ.

ವಿಕೆಟ್ ಬಿದ್ದರೆ ಮತ್ತು ಬ್ಯಾಟ್ಸಮನ್ ಬೌಂಡರಿ ಅಥವಾ ಸಿಕ್ಸರ್ ಬಾರಿಸಿದ್ರೆ ಅಂಪೈರ್ ಡಾನ್ಸ್ ಮಾಡುತ್ತ ಮೈದಾನಲ್ಲೆಲ್ಲಾ ಓಡಾಡಿ ಡಿಸಿಸನ್​ ನೀಡುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಗೋಕಾಕದಲ್ಲಿ ಇತ್ತಿಚಿಗೆ ಕೊಂಚಿಕೊರಮ ಸಮಾಜದವರು ಏರ್ಪಡಿಸಿದ ಟೆನ್ನಿಸ್ ಬಾಲ್ ಕ್ರಿಕೇಟ್ ಟೂರ್ನಿಗೆ ಅಂಪೈರ್ ಆಗಿ ಆಗಮಿಸಿದ್ದ ಮಹಾರಾಷ್ಟ್ರದ ಧನ್ಯಸಕಾತ್ ಎಂಬ ಅಂಪೈರ್ ಈ ರೀತಿ ಡಾನ್ಸಿಂಗ್ ಡಿಸಿಸನ್ ನೀಡಿದ್ದು ಸದ್ಯ ಡಿಸಿಸನ್ ಡ್ಯಾನ್ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್ ಆಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net