ಮಲಗಿದ್ದ ದಂಪತಿಗೆ ಬೆಂಕಿ ಇಟ್ಟು ಕೊಲೆ ಮಾಡಿದ್ದ ಆರೋಪಿಗಳು ಅಂದರ್​..!

Accused Arrest
Published on

ಚಿಕ್ಕೋಡಿ: ಮಲಗಿದ್ದ ದಂಪತಿಗೆ ಬೆಂಕಿ ಇಟ್ಟು ಕೊಲೆ ಮಾಡಿದ ಆರೋಪಿಗಳನ್ನು ಐಗಳಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಾವಿಯ ನೀರಿನ ಪಾಳೆಗೋಸ್ಕರ ಹತ್ತಿದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು. ಮಹಾದೇವ ಮಾದರ್ ಹಾಗೂ ರೇಖಾ ಮಹಾದೇವ ಮಾದರ್ ದಂಪತಿ ಮನೆಯಲ್ಲಿ ಮಲಗಿರುವಾಗ ಕಳೆದ 10ರಂದು ತಡರಾತ್ರಿ 2 ಗಂಟೆಗೆ ದುಷ್ಕರ್ಮಿಗಳು ಮನೆಗೆ ಬೆಂಕಿ ಇಟ್ಟಿದ್ದರು.

ದುಷ್ಕೃತ್ಯದಿಂದ ತೀವ್ರವಾಗಿ ಗಾಯಗೊಂಡಿದ್ದ ಪತಿ ಮಹಾದೇವ ಹಾಗೂ ಪತ್ನಿ ರೇಖಾ ಮಾದರ ಚಿಕಿತ್ಸೆ ಫಲಿಸದೆ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ರೇಷನ್​ನಲ್ಲಿ ಸೀಮೆ ಎಣ್ಣೆ ಪಡೆದು ಕೃತ್ಯ ಎಸಗಿದ್ದಾರೆನ್ನಲಾಗಿದೆ.

ಇದೀಗ ಆರೋಪಿಗಳಾದ ಶಂಕರ್ ಮಾದರ, ಸದಾಶಿವ ಮಾದರ ಹಾಗೂ ಸುನೀಲ ಮಾದರ್​ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಮಹದೇವ ಸೊಸೆ ಶಿಲ್ಪಾ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಐಗಳಿ ಪೊಲೀಸರು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net