ಸುಮನಿತಾ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ Sumanita selected for state

ರಾಜ್ಯ ಮಟ್ಟಕ್ಕೆ ಸುಮನಿತಾ ಆಯ್ಕೆ
ರಾಜ್ಯ ಮಟ್ಟಕ್ಕೆ ಸುಮನಿತಾ ಆಯ್ಕೆ
Published on: 

ಜಯಪುರ: ಬಾಳೆಹೊನ್ನೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ 17 ವಯೋಮಾನದೊಳಗಿನ ಮಕ್ಕಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಹೇರೂರು ಪ್ರೌಢಶಾಲೆ 10ನೇ ತರಗತಿಯ ಸುಮನಿತಾ 200 ಮೀಟರ್, 400 ಮೀಟರ್ ಹಾಗೂ 400*4 ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಸುಮನಿತಾ ಜಯಪುರದ ಮಣಿ ಹಾಗೂ ಸುಮಿತ್ರಾ ದಂಪತಿಯ ಪುತ್ರಿ. ಇನ್ನು ಲೋಕನಾಥಪುರ ಸರ್ಕಾರಿ ಪ್ರೌಢಶಾಲೆ ಹತ್ತನೇ ತರಗತಿ ವಿದ್ಯಾರ್ಥಿ ಸುಜಿತ್ ಹೆಗ್ಗಡೆ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, 4*100 ರಿಲೇಯಲ್ಲಿ ಪ್ರಥಮ ಸ್ಥಾನ ಹಾಗೂ ಇನ್ನೋರ್ವ ವಿದ್ಯಾರ್ಥಿ ಮುರಳಿ 4*400 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.