ಮಹಿಳೆಯರು ಎಲ್ಲ ರಂಗದಲ್ಲೂ ಯಶಸ್ಸು

ಎನ್.ಆರ್.ಪುರ ತಾಲೂಕು ಹೊನ್ನೇಕೊಡಿಗೆ ಗ್ರಾಪಂ ಹಂತುವಾನಿಯಲ್ಲಿ ಹೊನ್ನೇಕೊಡಿಗೆ ಸಂಜೀವಿನಿ ಒಕ್ಕೂಟದ ಸ್ಫೂರ್ತಿ ಮಹಿಳಾ ಸ್ವಸಹಾಯ ಸಂಘದ ಎಣ್ಣೆ ಗಾಣದ ಯಂತ್ರ ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಪಾಲ್ಗೊಂಡಿದ್ದರು. ಶಬಿ ಮರಿಯಮ್ಮ, ಹೇಮಾವತಿ, ನಿಶ್ಚಿತಾ, ಸುಬ್ರಹ್ಮಣ್ಯ, ಶೈನಿ, ಕವನಾ ಇತರರಿದ್ದರು.
ಎನ್.ಆರ್.ಪುರ ತಾಲೂಕು ಹೊನ್ನೇಕೊಡಿಗೆ ಗ್ರಾಪಂ ಹಂತುವಾನಿಯಲ್ಲಿ ಹೊನ್ನೇಕೊಡಿಗೆ ಸಂಜೀವಿನಿ ಒಕ್ಕೂಟದ ಸ್ಫೂರ್ತಿ ಮಹಿಳಾ ಸ್ವಸಹಾಯ ಸಂಘದ ಎಣ್ಣೆ ಗಾಣದ ಯಂತ್ರ ಉದ್ಘಾಟನೆ ಸಮಾರಂಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ ಪಾಲ್ಗೊಂಡಿದ್ದರು. ಶಬಿ ಮರಿಯಮ್ಮ, ಹೇಮಾವತಿ, ನಿಶ್ಚಿತಾ, ಸುಬ್ರಹ್ಮಣ್ಯ, ಶೈನಿ, ಕವನಾ ಇತರರಿದ್ದರು.
Published on
ಎನ್.ಆರ್.ಪುರ: ಮಹಿಳೆಯರಿಗೆ ಕೊಟ್ಟ ಎಲ್ಲ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳವಾರ ಹೊನ್ನೇಕೊಡಿಗೆ ಗ್ರಾಪಂ ವ್ಯಾಪ್ತಿಯ ಹಂತುವಾನಿಯಲ್ಲಿ ಹೊನ್ನೇಕೊಡಿಗೆ ಸಂಜೀವಿನಿ ಒಕ್ಕೂಟದ ಸ್ಫೂರ್ತಿ ಮಹಿಳಾ ಸ್ವಸಹಾಯ ಸಂಘದವರು 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಎಣ್ಣೆ ಗಾಣದ ಯಂತ್ರ ಉದ್ಘಾಟಿಸಿ ಮಾತನಾಡಿದರು. ಕೊಬ್ಬರಿ ಎಣ್ಣೆಯಲ್ಲೂ ಕಲಬೆರಕೆ ಕಂಡುಬಂದಿದೆ. ಸಂಜೀವಿನಿ ಒಕ್ಕೂಟದಲ್ಲಿ ಎರಡನೇ ಎಣ್ಣೆ ಗಾಣ ಪ್ರಾರಂಭವಾಗಿದೆ. ಬಹಳ ವರ್ಷಗಳ ಹಿಂದೆ ಮಹಿಳೆಯರು ನಾಲ್ಕು ಗೋಡೆಯ ಒಳಗೆ ಸೀಮಿತವಾಗಿದ್ದರು. ಇಂದಿರಾ ಗಾಂಧಿ ಕಾಲದಿಂದ ಮಹಿಳೆಯರಿಗೆ ಸಮಾನತೆ ಬಂದಿದೆ. ಈಗ ಮಹಿಳೆಯರು ಎಲ್ಲ ರಂಗದಲ್ಲೂ ಯಶಸ್ಸು ಕಂಡಿದ್ದಾರೆ. ರಾಜಕೀಯ, ಕ್ರೀಡೆ, ಗಗನ ಯಾತ್ರೆಯಲ್ಲೂ ಸಾಧನೆ ಮಾಡಿದ್ದಾರೆ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ವಿವಿಧ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ತಂದಿದ್ದರು. ಮುಂದೆ ಶಾಸನಸಭೆಯಲ್ಲೂ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಬರಬಹುದು ಎಂದರು.
ಹೊನ್ನೇಕೊಡಿಗೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಬಿ ಮರಿಯಮ್ಮ, ಕಾರ್ಯದರ್ಶಿ ಹೇಮಾವತಿ, ಖಜಾಂಚಿ ನಿಶ್ಚಿತಾ, ಎನ್‌ಆರ್‌ಎಲ್ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಹ್ಮಣ್ಯ, ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ ಶೈನಿ, ಕವನಾ, ಕೃಷಿಯೇತರ ವ್ಯವಸ್ಥಾಪಕಿ ವಿನುತಾ, ಗ್ರಾಪಂ ಅಧ್ಯಕ್ಷೆ ವೀಣಾ, ಉಪಾಧ್ಯಕ್ಷೆ ಕೆ.ವಿ.ಚಾಂದಿನಿ, ಗ್ರಾಪಂ ಸದಸ್ಯ ಕೆ.ಎನ್.ಮಂಜುನಾಥ್, ಅಶೋಕ್, ತಾಪಂ ಮಾಜಿ ಸದಸ್ಯೆ ಮೀನಾಕ್ಷಿ ಕಾಂತರಾಜ್, ಪಿಸಿಎಆರ್‌ಡಿ ಬ್ಯಾಂಕ್ ನಿರ್ದೇಶಕ ದೇವಂತರಾಜ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net