ಪರಿಸ್ಥಿತಿ ಗಂಭೀರತೆ ಅರಿತ ತಹಸೀಲ್ದಾರ್ ಶಾರದಾ ಅವರು, ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಪಂಚಾಯಿತಿ ಸದಸ್ಯರೊಂದಿಗೆ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬೇಲಿ ಹಾಕಿದ ವ್ಯಕ್ತಿಗಳೊಂದಿಗೆ ಮಾತನಾಡಿದ ತಹಸೀಲ್ದಾರರು, ಕುಡಿಯುವ ನೀರಿಗೆ ತೊಂದರೆ ಮಾಡುವುದು ಅಪರಾಧ. ಒಂದು ವೇಳೆ ಭೂಮಿ ನಿಮ್ಮದಾಗಿದ್ದರೆ ಸೂಕ್ತ ದಾಖಲೆಗಳನ್ನು ಒದಗಿಸಿ, ಅಲ್ಲಿಯವರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಬೇಲಿ ತೆರವುಗೊಳಿಸಿ ಎಂದು ಮನವಿ ಮಾಡಿದರು. ಆದರೆ ಖಾಸಗಿ ವ್ಯಕ್ತಿಗಳು ಬೇಲಿತೆರವಿಗೆ ಒಪ್ಪಲಿಲ್ಲ.