ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆ ಸಮೀಪದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಂತರಿಕ ಗುಣಮಟ್ಟದ ಭರವಸಾ ಕೋಶ ಕನ್ನಡ ವಿಭಾಗದಿಂದ ಆಯೋಜಿಸಿದ್ಧ ತಳಸಮುದಾಯದ ವಚನಕಾರ್ತಿಯರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನುz್ದೆÃಶಿಸಿ ಲೇಖಕಿ ಡಿ.ನಳಿನಾ ಮಾತನಾಡಿದರು. ಡಾ.ಮೂಡಲಗಿರಿಯಯ್ಯ, ದೀಕ್ಷಿತ್ ಕುಮಾರ್, ಎ.ಡಿ.ಪ್ರಶಾಂತ್, ಎಸ್.ಎಸ್.ಪ್ರೇಮ್‌ದೀಪ್, ಟಿ.ಮಾಲಾ ಮತ್ತಿತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಯುವಜನತೆ ವಿದ್ಯಾರ್ಥಿ ದೆಸೆಯಲ್ಲೇ ವಚನಗಳು ಹಾಗೂ ವಚನಕಾರ್ತಿಯರ ಜೀವನ ಚರಿತ್ರೆ ಓದುವ ಹವ್ಯಾಸ ಬೆಳೆಸಿ
ತಳಸಮುದಾಯದ ವಚನಕಾರ್ತಿಯರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ
ವಚನಕಾರ್ತಿಯರ ವಚನಗಳು ಅಂತರ ಸ್ಪರ್ಶಿ ಹೃದಯಕ್ಕೆ ಕೈಹಾಕುವಂತಿತ್ತು
ಚಿಕ್ಕಮಗಳೂರು:ವಚನಗಳು ಮಾನವನ ಜೀವನದಲ್ಲಿ ಮಾನವೀಯ ಜೀವ ದ್ರವ್ಯ ತುಂಬುವ ಸಾಧನ. ಯುವಜನತೆ ವಿದ್ಯಾರ್ಥಿ ದೆಸೆಯಲ್ಲೇ ವಚನಗಳು ಹಾಗೂ ವಚನಕಾರ್ತಿಯರ ಜೀವನ ಚರಿತ್ರೆ ಓದುವ ಹವ್ಯಾಸ ಬೆಳೆಸಿಕೊಂಡು ಸಾಧಕರಾಗಬೇಕು ಎಂದು ಲೇಖಕಿ ಡಿ.ನಳಿನಾ ತಿಳಿಸಿದರು.
ನಗರದ ಮಲ್ಲಂದೂರು ರಸ್ತೆ ಸಮೀಪದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಂತರಿಕ ಗುಣಮಟ್ಟದ ಭರವಸಾ ಕೋಶ ಕನ್ನಡ ವಿಭಾಗದಿಂದ ಆಯೋಜಿಸಿದ್ಧ ತಳಸಮುದಾಯದ ವಚನಕಾರ್ತಿಯರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಕ್ಕಮಹಾದೇವಿ, ಅಕ್ಕಮ್ಮ, ಸೂಳೆ ಸಂಕವ್ವ, ರೇವಮ್ಮೆ, ರೇಚವ್ವೆ, ಲಕ್ಷö್ಮಮ್ಮ, ಮಸಣಮ್ಮ, ರೇಕಮ್ಮ, ಅಕ್ಕ ನಾಗಮ್ಮ ಸೇರಿದಂತೆ ೫೦ಕ್ಕೂ ಹೆಚ್ಚು ತಳಸಮುದಾಯದ ವಚನಕಾರ್ತಿಯರು ತಮ್ಮ ಜೀವನ ಶೈಲಿಯನ್ನು ವಚನಗಳ ಮೂಲಕ ಸಮಾಜಕ್ಕೆ ಪರಿಚಯಿಸಿ ಜೀವನ ಪದ್ಧತಿ ತಿಳಿಸಿಕೊಟ್ಟಿದ್ದಾರೆ ಎಂದರು.
ಹಿAದಿನ ವಚನಕಾರ್ತಿಯರ ವಚನಗಳು ಅಂತರ ಸ್ಪರ್ಶಿ ಹೃದಯಕ್ಕೆ ಕೈಹಾಕುವಂತಿತ್ತು. ಜಾತಿ, ಮತ ತ್ಯಜಿಸುವ ಜೊತೆಗೆ ಸಂಘರ್ಷ ಹಾಗೂ ಸವಾಲುಗಳನ್ನು ಎದುರಿಸುವ ಆತ್ಮಶಕ್ತಿ ತುಂಬಿಸುತ್ತಿದ್ದವು. ಇಂದಿನ ಆಧುನಿಕ ಜಗತ್ತಿಗೆ ವಚನಕಾರ್ತಿಯರ ಸಂದೇಶ ಮುಖ್ಯವಾಗಿದ್ದು ಸಮಾಜದ ಏಳಿಗೆಗೆ ಸ್ಪೂರ್ತಿಯಾಗಲಿವೆ ಎಂದು ತಿಳಿಸಿದರು.
ಪೂರ್ವಿಕರ ಕಾಲದಲ್ಲಿ ದುಡಿಮೆಯ ಒಂದಿಷ್ಟು ಪಾಲನ್ನು ಜನಸಾಮಾನ್ಯರಿಗೆ ದಾಸೋಹದ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿದ್ದರು. ಇಂದಿನ ದಿನಮಾನದಲ್ಲಿ ಹೋಟಲ್‌ಗಳು ನಿರ್ಮಾಣಗೊಂಡು ದಾಸೋಹವನ್ನು ಉದ್ದಿಮೆಯಾಗಿ ಪರಿವರ್ತಿಸುವ ಮೂಲಕ ಸೇವಾಕಾರ್ಯ ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜು ಪ್ರಾಚಾರ್ಯ ಡಾ.ಮೂಡಲಗಿರಿಯಯ್ಯ, ಅಕ್ಕಮಹಾದೇವಿ ಜನ್ಮದಿನದಂದು ತಳಸಮುದಾಯ ವಚನಕಾರ್ತಿಯರ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಹೊಸ ಹುರುಪು ಮೂಡಿಸಿದೆ. ವಚನಗೀತೆ ಅನುಕರಣೆ ಜೊತೆಗೆ ವಸ್ತು ನಿಷ್ಟೆ ವಿಚಾರ ಕಲಿತುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹನ್ನೇರಡನೇ ಶತಮಾನದಲ್ಲಿ ವಚನಕಾರರು ವೈಜ್ಞಾನಿಕ ಕಾಲಘಟ್ಟದಲ್ಲಿ ವಚನಗಳ ಮೂಲಕ ಸಾಧನೆ ಮಾಡಿದ್ದಾರೆ. ಅದೇ ರೀತಿ ತಳಮಟ್ಟದ ಮಹಿಳಾ ವಚನಕಾರ್ತಿಯರು ಜೀವನದ ಬದುಕನ್ನೇ ವಚನ ಸಾಹಿತ್ಯದ ಮೂಲಕ ಪರಿವರ್ತಿಸಿ, ಮುಂದಿನ ಪೀಳಿಗೆಗೆ ಕಟ್ಟಿಕೊಡುವ ಕಾರ್ಯ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಏಸಿ ಸಂಚಾಲಕ ದೀಕ್ಷಿತ್‌ಕುಮಾರ್, ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸರಾದ ಎ.ಡಿ.ಪ್ರಶಾಂತ್, ಎಸ್.ಎಸ್.ಪ್ರೇಮ್‌ದೀಪ್, ಟಿ.ಮಾಲಾ ಮತ್ತಿತರರಿದ್ದರು.