ರೈತರ ಅಭಿವೃದ್ಧಿಗಾಗಿ ವಿವಿಧ ಯೋಜನೆ

ಬೀರೂರಿನ ಮಾರ್ಕೆಟ್ ರಸ್ತೆಯ ಪಿಎಸಿಎಸ್‌ನಲ್ಲಿ ನೂತನ ಇ-ಸ್ಟಾೃಂಪ್ ಯೋಜನೆಯನ್ನು ಮಾರ್ಗದ ಎಂ.ಬಿ.ಗಿರೀಶ್ ಉದ್ಘಾಟಿಸಿದರು. ಎಚ್.ವೆಂಕಟಗಿರಿಯಪ್ಪ, ಮಾರ್ಗದ ಮಧು, ಕಾಂತರಾಜ್, ತಿಮ್ಮೇಗೌಡ, ಜಗದೀಶ್, ಕುಮಾರ್, ಎ.ಬಿ.ಮಂಜುಳಾ ರಾಜಪ್ಪ, ಆರ್.ಶಾಂಭವಿ ಇತರರಿದ್ದರು.
ಬೀರೂರಿನ ಮಾರ್ಕೆಟ್ ರಸ್ತೆಯ ಪಿಎಸಿಎಸ್‌ನಲ್ಲಿ ನೂತನ ಇ-ಸ್ಟಾೃಂಪ್ ಯೋಜನೆಯನ್ನು ಮಾರ್ಗದ ಎಂ.ಬಿ.ಗಿರೀಶ್ ಉದ್ಘಾಟಿಸಿದರು. ಎಚ್.ವೆಂಕಟಗಿರಿಯಪ್ಪ, ಮಾರ್ಗದ ಮಧು, ಕಾಂತರಾಜ್, ತಿಮ್ಮೇಗೌಡ, ಜಗದೀಶ್, ಕುಮಾರ್, ಎ.ಬಿ.ಮಂಜುಳಾ ರಾಜಪ್ಪ, ಆರ್.ಶಾಂಭವಿ ಇತರರಿದ್ದರು.
Published on
ಬೀರೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಇ-ಸ್ಟಾೃಂಪ್ ವ್ಯವಸ್ಥೆಯು ಕೃಷಿ ಸಾಲಗಳು ಮತ್ತು ಇತರ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳಿಗೆ ಸಹಾಯಕವಾಗಿದೆ ಎಂದು ಪಿಎಸಿಎಸ್ ಅಧ್ಯಕ್ಷ ಮಾರ್ಗದ ಎಂ.ಬಿ.ಗಿರೀಶ್ ತಿಳಿಸಿದರು.
ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿರುವ ಸಂಘದ ಆವರಣದಲ್ಲಿ ಬುಧವಾರ ಇ-ಸ್ಟಾೃಂಪ್ ಯೋಜನೆ ಜಾರಿಗೊಳಿಸಿ ಮಾತನಾಡಿದರು. ಇ-ಸ್ಟಾೃಂಪ್ ವ್ಯವಸ್ಥೆಯನ್ನು ಪಿಎಸಿಎಸ್‌ನಲ್ಲಿ ಕಲ್ಪಿಸಿರುವುದರಿಂದ ವ್ಯವಹಾರ ಸುಲಭವಾಗುತ್ತದೆ. ಇದು ಡಿಜಿಟಲ್ ಮತ್ತು ಭದ್ರತೆಯ ವೈಶಿಷ್ಟ್ಯ ಹೊಂದಿದೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಈ ಸಂಬಂಧ ಸರ್ವಸದಸ್ಯರ ಸಭೆಯಲ್ಲಿ ಚರ್ಚಿಸಿ ಸರ್ವಾನುಮತದಿಂದ ಯೋಜನೆಯ ಅನುಷ್ಠಾನ ಮಾಡಲಾಗಿದೆ. ಸಂಘದಲ್ಲಿ ಸಾಲದ ಒಪ್ಪಂದಗಳು, ಅಡಮಾನ ಪತ್ರಗಳು, ಷೇರುಗಳ ವರ್ಗಾವಣೆಯಂತಹ ಇತ್ಯಾದಿ ಕೆಲಸಗಳಿಗೆ ಇ-ಸ್ಟಾೃಂಪ್‌ಗಳನ್ನು ಬಳಸಬೇಕು. ಅಂತಹ ಸಂದರ್ಭಗಳಲ್ಲಿ ಕೃಷಿಕರು ಅಲೆದಾಡಬಾರದು ಎಂಬ ದೂರದೃಷ್ಟಿಯಿಂದ ಈ ಸೇವೆಯನ್ನು ಜಾರಿಗೊಳಿಸಲಾಗಿದೆ. ಮುಂದೆ ರೈತರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ತರುವ ಆಶಯ ವ್ಯಕ್ತಪಡಿಸಿದರು. ಇದರಿಂದ ರೈತರಿಗೆ ಆಗುವ ವಂಚನೆಗಳು ಕಡಿಮೆಯಾಗುತ್ತವೆ. ರೈತರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪಿಎಸಿಎಸ್ ಉಪಾಧ್ಯಕ್ಷೆ ಎಚ್.ವೆಂಕಟಗಿರಿಯಪ್ಪ, ನಿರ್ದೇಶಕರಾದ ಮಾರ್ಗದ ಮಧು, ಕಾಂತರಾಜ್, ತಿಮ್ಮೇಗೌಡ, ಜಗದೀಶ್, ಕುಮಾರ್, ಎ.ಬಿ.ಮಂಜುಳಾ ರಾಜಪ್ಪ, ಆರ್.ಶಾಂಭವಿ, ಕೆ.ಆರ್.ರಂಗಪ್ಪ, ಎನ್.ಮೋಹನ್, ಕೆ.ಆರ್.ಷಣ್ಮುಖ ಹಾಗೂ ನಿರ್ವಹಣಾ ಅಧಿಕಾರಿ ಗಿರೀಶ್, ಎ.ಎನ್.ಕಾವ್ಯಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net