ಸಣ್ಣ ಕಥೆಯಲ್ಲಿ ಮೌಲ್ಯಗಳು ಅಡಕ

ಅಜ್ಜಂಪುರ ಪಟ್ಟಣದ ಶೆಟ್ರು ಸಿದ್ದಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಸಂವಾದ ಮಾಸಿಕ ಸರಣಿಯಲ್ಲಿ ಹ.ಪುಟ್ಟಸ್ವಾಮಿ, ಅಪೂರ್ವ, ಬಿಪಿನ್‌ಕುಮಾರ್, ಡಿ.ಶಿವಮೂರ್ತಿ, ಲಕ್ಷ್ಷ್ಮಣ್ ಇತರರಿದ್ದರು.
ಅಜ್ಜಂಪುರ ಪಟ್ಟಣದ ಶೆಟ್ರು ಸಿದ್ದಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಸಾಹಿತ್ಯ ಸಂವಾದ ಮಾಸಿಕ ಸರಣಿಯಲ್ಲಿ ಹ.ಪುಟ್ಟಸ್ವಾಮಿ, ಅಪೂರ್ವ, ಬಿಪಿನ್‌ಕುಮಾರ್, ಡಿ.ಶಿವಮೂರ್ತಿ, ಲಕ್ಷ್ಷ್ಮಣ್ ಇತರರಿದ್ದರು.
Published on
ತರೀಕೆರೆ: ಸಾಹಿತಿ ಬೆಸಗರಹಳ್ಳಿ ರಾಮಣ್ಣನವರ ಧರ್ಮ ಸಣ್ಣ ಕಥೆಯಲ್ಲಿ ಧರ್ಮದ ಮೌಲ್ವಿಕತೆಯ ವಿಶಿಷ್ಟ ಆಯಾಮವನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಸತ್ಯ, ಪ್ರಾಮಾಣಿಕತೆ, ಇತರ ಮೌಲ್ಯಗಳು ಇಲ್ಲಿ ಆತ್ಮಸಾಕ್ಷಿಯಾಗಿ ನ್ಯಾಯದ ಪರ ನಿಲ್ಲುತ್ತವೆ ಎಂದು ನಿವೃತ್ತ ಉಪನ್ಯಾಸಕ ಹ.ಪುಟ್ಟಸ್ವಾಮಿ ಹೇಳಿದರು.
ಅಜ್ಜಂಪುರ ಪಟ್ಟಣದ ಶೆಟ್ರು ಸಿದ್ದಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿಯಿಂದ ಆಯೋಜಿಸಿದ್ದ ಸಾಹಿತ್ಯ ಸಂವಾದ ಮಾಸಿಕ ಸರಣಿಯಲ್ಲಿ ಮಾತನಾಡಿದ ಅವರು, ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಜಾರಿಗೆ ಬಂದ ಸಂದರ್ಭದಲ್ಲಿ ನಡೆದ ಕುತೂಹಲಕಾರಿ ಸನ್ನಿವೇಶಗಳನ್ನು ಸಾಹಿತಿ ಬೆಸಗರಹಳ್ಳಿ ರಾಮಣ್ಣ ಹಲವು ಕಥೆೆಗಳಲ್ಲಿ ಅಮೋಘವಾಗಿ ಚಿತ್ರಿಸಿದ್ದಾರೆ ಎಂದರು.
ಸಾಹಿತಿ ಅಪೂರ್ವ ಮಾತನಾಡಿ, ಒಂದು ಸಾಹಿತ್ಯ ಕೃತಿ ಓದಿ, ಅದರ ಆನಂದ ಸಭೆಯಲ್ಲಿ ಹಂಚಿಕೊಳ್ಳುವುದೇ ಸವಾಲು. ನಿವೃತ್ತ ಉಪನ್ಯಾಸಕ ಹ.ಪುಟ್ಟಸ್ವಾಮಿ ಅಂಥ ಸವಾಲುಗಳನ್ನು ಗೆದ್ದು ಕೇಳುಗರೂ ಕಥೆಯ ಓದಿನಲ್ಲಿ ಒಳಗೊಳ್ಳುವಂತೆ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು. 
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಸಮಿತಿ ಅಧ್ಯಕ್ಷ ಬಿಪಿನ್‌ಕುಮಾರ್ ಮಾತನಾಡಿ, ಮನ ಮೆಚ್ಚಿದ ಪುಸ್ತಕ ಸಾಹಿತ್ಯ ಸರಣಿಯ ಉದ್ದೇಶವೇ ಪುಸ್ತಕ ಓದುವ ಹವ್ಯಾಸ ಬೆಳೆಸುವುದಾಗಿದೆ. ಈ ದಿಸೆಯಲ್ಲಿ ಪ್ರತಿ ತಿಂಗಳ ಮೊದಲ ಶನಿವಾರ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
 ಅಜ್ಜಂಪುರ ತಾಲೂಕು ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಡಿ.ಶಿವಮೂರ್ತಿ, ಉಪಾಧ್ಯಕ್ಷ ಲಕ್ಷ್ಮಣ್, ಪ್ರಾಧ್ಯಾಪಕ ಡಾ. ಎನ್.ಎಲ್.ಆನಂದ್, ನಿವೃತ್ತ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಯಮೂರ್ತಿ, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ.ಪಿ.ರಾಜಣ್ಣ, ಪ್ರಮುಖರಾದ ಹೇಮಂತ್‌ಕುಮಾರ್, ಕೆಎವೈಸಿ ಸ್ವಾಮಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net