ಭಾನುವಾರ ಹಮ್ಮಿಕೊಂಡಿದ್ದ ನಮ್ಮ ಕೊಪ್ಪ ಸ್ವಚ್ಛ ಕೊಪ್ಪ ಅಭಿಯಾನದಲ್ಲಿ ಕಂದಾಯ, ಆರೋಗ್ಯ, ಆರ್.ಡಿ.ಪಿ.ಆರ್, ಕೊಪ್ಪ ಗ್ರಾಮಾಂತರ ಗ್ರಾಪಂ, ಹರಂದೂರು ಹಾಗೂ ಬಿಂತ್ರವಳ್ಳಿ ಗ್ರಾಪಂ, ಪಟ್ಟಣ ಪಂಚಾಯಿತಿ, ಪೊಲೀಸ್ ಇಲಾಖೆ, ರೋಟರಿ, ಜೆಸಿಐ, ಸೈಕಲ್ ಗ್ರೂಪ್, ಲಗೋರಿ ಗ್ರೂಪ್, ಸರ್ಕಾರಿ ನೌಕರರ ಸಂಘಗಳು ಭಾಗವಹಿಸಿದ್ದವು. ತಾಪಂ ಇಒ ನವೀನ್ ಕುಮಾರ್, ಪಪಂ ಮುಖ್ಯಾಧಿಕಾರಿ ಕುರಿಯಾಕೋಸ್, ಆರೋಗ್ಯ ಇಲಾಖೆಯ ಸುಧಾಕರ್, ರೋಟರಿ ಕ್ಲಬ್‌ನ ಡಾ. ಉದಯ್‌ಕುಮಾರ್ ಇತರರಿದ್ದರು.