ಮಂಗಳವಾರ ಸಂಜೆ 5ಕ್ಕೆ ಸರ್ವಾಲಂಕೃತ ರಥದಲ್ಲಿ ಉತ್ಸವ ಮೂರ್ತಿಯ ಗಿರಿ ಪ್ರದಕ್ಷಿಣೆ, ರಾತ್ರಿ 8ಕ್ಕೆ ಮೆಟ್ಟಿಲು ಪೂಜೆಯೊಂದಿಗೆ ಶ್ರೀ ಶಿವ ಸುಬ್ರಹ್ಮಣ್ಯ ಸ್ವಾಮಿ ಉತ್ಸವಮೂರ್ತಿಯನ್ನು ಮಹಾಮಂಟಪಕ್ಕೆ ಆಹ್ವಾನಿಸಲಾಯಿತು. ರಾತ್ರಿ 12ಕ್ಕೆ ಹಾಲು, ಮೊಸರು, ತುಪ್ಪ, ಎಳನೀರು, ಬಿಲ್ವಪತ್ರೆ, ತಿರುಮಂಜುನಂ, ಪಂಚಾಮೃತ ಸೇರಿ 16 ವಿಧದ ಸುಗಂಧ ದ್ರವ್ಯದೊಂದಿಗೆ ಶ್ರೀಸ್ವಾಮಿಗೆ ಅಭಿಷೇಕ ನೆರವೇರಿಸಲಾಯಿತು.