ವಿಜೃಂಭಣೆಯ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ

ಸಂಸೆ ಶ್ರೀ ಸರ್ವಸಿದ್ಧಿ ಮಹಾಗಣಪತಿ ಸ್ವಾಮಿ ಜೀರ್ಣಾಷ್ಠಬಂಧ ಮತ್ತು ಹಾಗೂ ಬ್ರಹ್ಮ ಕುಂಭಾಭಿಷೇಕ ಮಹೋತ್ಸವದಲ್ಲಿ  ಅರ್ಚಕ ವೆಂಕಟೇಶ್ ರಾವ್ ಬರಗೋಡು ಅವರನ್ನು ಸನ್ಮಾನಿಸಲಾಯಿತು. ಪಿ.ಎನ್.ರಾವುನ್ನಿ, ಶ್ರೀಮತಿ ರಾಜಲಕ್ಷ್ಮಿ ಜಿ ಜೋಷಿ, ಜೀವನ್ ಇದ್ದರು.
ಸಂಸೆ ಶ್ರೀ ಸರ್ವಸಿದ್ಧಿ ಮಹಾಗಣಪತಿ ಸ್ವಾಮಿ ಜೀರ್ಣಾಷ್ಠಬಂಧ ಮತ್ತು ಹಾಗೂ ಬ್ರಹ್ಮ ಕುಂಭಾಭಿಷೇಕ ಮಹೋತ್ಸವದಲ್ಲಿ ಅರ್ಚಕ ವೆಂಕಟೇಶ್ ರಾವ್ ಬರಗೋಡು ಅವರನ್ನು ಸನ್ಮಾನಿಸಲಾಯಿತು. ಪಿ.ಎನ್.ರಾವುನ್ನಿ, ಶ್ರೀಮತಿ ರಾಜಲಕ್ಷ್ಮಿ ಜಿ ಜೋಷಿ, ಜೀವನ್ ಇದ್ದರು.
Published on
ಕಳಸ: ಸಂಸೆ ಶ್ರೀ ಸರ್ವಸಿದ್ಧಿ ಮಹಾಗಣಪತಿ ಸ್ವಾಮಿ, ಶ್ರೀ ಆಂಜನೇಯ ಸ್ವಾಮಿ ಮತ್ತು ಶ್ರೀ ಚೌಡಿ ದೇವಿ ಅವರ ಜೀರ್ಣಾಷ್ಠಬಂಧ ಮತ್ತು ಹಾಗೂ ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆ ಪೂಜೆ, ಪ್ರಧಾನ ಹೋಮ, ಶಿಖರ ಪ್ರತಿಷ್ಠೆ, ಕುಂಭಾಭಿಷೇಕ ಮತ್ತು ಚತುರ್ಥಿ ಗಣಪತಿ ಹವನ, ಪೂರ್ಣಾಹುತಿ, ಮಹಾಪೂಜೆ, ಮಹಾಮಂಗಳಾರತಿ ಕಾರ್ಯಕ್ರಮಗಳು ನೆರವೇರಿತು. ಪೂವಾರ್ಂಗ ಧಾರ್ಮಿಕ ಯಜ್ಞ ವಿಧಿ ವಿಧಾನಗಳು, ಶಿಖರ ಪ್ರತಿಷ್ಠೆ ಮತ್ತು ಕುಂಭಾಭಿಷೇಕಗಳು ನೆರವೇರಿತು. ಹೊರನಾಡಿನ ಧರ್ಮಕರ್ತ ಪೂಜ್ಯ ಡಾ.ಜಿ.ಭೀಮೇಶ್ವರ ಜೋಷಿ ಇವರ ಅಮೃತ ಹಸ್ತದಿಂದ ಸರ್ವ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಹೊರನಾಡಿನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ, ದೇವರ ಸನ್ನಿಧಿಗೆ ಬಂದಾಗ ನಾವು ಮುಗುವಾಗಿರಬೇಕು. ಮಗುವನ್ನು ತಾಯಿ ಎತ್ತಿ ಮುದ್ದಾಡಿಸಿ ತನ್ನ ಬಯಕೆಗಳನ್ನು ಪೂರೈಸುವಂತೆ ದೇವರ ಮುಂದೆ ನಿಂತಾಗ ದೇವರು ಸರ್ವ ರೀತಿಯಲ್ಲಿ ಸಂರಕ್ಷಿಸಿ ಕಾಪಾಡಿ ಅನುಗ್ರಹಿಸುತ್ತಾರೆ. ದೇವಸ್ಥಾನದ ಭವ್ಯತೆ ಮತ್ತು ಶ್ರೇಷ್ಠತೆಯನ್ನು ಜನಮಾನಸಕ್ಕೆ ತಲುಪಿಸುವ ಕೆಲಸ ಅಲ್ಲಿಯ ಅರ್ಚಕರಿಂದ ಆಗಬೇಕು. ಅರ್ಚಕ ಎಷ್ಟು ಪ್ರಮಾಣಿಕತೆಯಿಂದ ಇರುತ್ತಾನೋ ಅದು ದೇವರಿಗೂ ಭಕ್ತನಿಗೂ ಪ್ರಮುಖ ಕೊಂಡಿಯಾಗಿರುತ್ತದೆ ಎಂದು ಹೇಳಿದರು.
ದೀರ್ಘಕಾಲ ಅರ್ಚಕರಾಗಿ ಕರ್ತವ್ಯ ನಿರ್ವಹಿಸಿದ ವೆಂಕಟೇಶ್ ರಾವ್ ಬರಗೋಡು ಇವರನ್ನು ಗೌರವಿಸಲಾಯಿತು. ವಸುಪ್ರದ ಪ್ಲಾಂಟೇಷನ್ಸ್ ಲಿಮಿಟೆಡ್ ಅಧ್ಯಕ್ಷ ಪಿ.ಎನ್.ರಾವುನ್ನಿ, ಹೊರನಾಡಿನ ಶ್ರೀಮತಿ ರಾಜಲಕ್ಷ್ಮಿ ಜಿ ಜೋಷಿ, ಜೀವನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net