ಸಮೀಪದ ಆಸ್ಪತ್ರೆ ಆವರಣದಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು. ಶ್ರೀಕೃಷ್ಣ ಗಂಧೋತ್ಸವ ಮತ್ತು ನಾಣ್ಯಗಳಿಂದ ರಜತಾಭಿಷೇಕ ನಡೆಸಲಾಗಿದ್ದ ನಾಣ್ಯಗಳನ್ನು ಶ್ರೀ ಸ್ವಾಮಿಯ ಹೆಸರಿನಲ್ಲಿ ನೆರೆದಿರುವ ಭಕ್ತಾದಿಗಳಿಗೆ ದಾಸೋಹದಲ್ಲಿ ನೀಡಲಾಯಿತು. ಈ ಬಾರಿ ಅಡುಗೆ ಅನಿಲದ ಸಮಸ್ಯೆ ಎದುರಾಗಿದ್ದರಿಂದ ಸೌದೆ ಒಲೆಯಲ್ಲಿ ಅಡುಗೆ ಸಿದ್ಧಪಡಿಸಲಾಗಿತ್ತು. ರಥೋತ್ಸವದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಭದ್ರಾವತಿ, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ ಮುಂತಾದ ಊರುಗಳಿಂದ ಭಕ್ತರು ಆಗಮಿಸಿದ್ದರು.