ಹಳ್ಳಿಗಳ ಉದ್ಧಾರದಿಂದ ದೇಶದ ಅಭಿವೃದ್ಧಿ

ಗೊಂಡೇದಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತ್ಯುತ್ಸವವನ್ನು ಮಾಜಿ ಶಾಸಕ ಡಿ.ಎಸ್.ಸುರೇಶ್ ಉದ್ಘಾಟಿಸಿದರು. ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಡಾ.ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಜಿ.ಎಚ್. ಶ್ರೀನಿವಾಸ್, ಡಾ.ಗೊ.ರು.ಚ, ಬಿ.ಎಸ್.ರಾಜು ಇತರರಿದ್ದರು.
ಗೊಂಡೇದಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತ್ಯುತ್ಸವವನ್ನು ಮಾಜಿ ಶಾಸಕ ಡಿ.ಎಸ್.ಸುರೇಶ್ ಉದ್ಘಾಟಿಸಿದರು. ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಡಾ.ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಜಿ.ಎಚ್. ಶ್ರೀನಿವಾಸ್, ಡಾ.ಗೊ.ರು.ಚ, ಬಿ.ಎಸ್.ರಾಜು ಇತರರಿದ್ದರು.
Published on
ತರೀಕೆರೆ:  ಊರಿನಲ್ಲಿ ನೆಲೆ ಕಂಡುಕೊಂಡಿರುವವರು ಮಾತ್ರವಲ್ಲ, ಉದ್ಯೋಗ ಅರಸಿ ಬೇರೆಡೆ ಹೋಗಿ ಬದುಕು ರೂಪಿಸಿಕೊಂಡಿರುವವರು ಸಹ ಹುಟ್ಟೂರಿನ ಮೇಲೆ ಸದಾ ಅಭಿಮಾನ ಹೊಂದಿರಬೇಕು ಎಂದು ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಹೇಳಿದರು.
ಅಜ್ಜಂಪುರ ತಾಲೂಕಿನ ಗೊಂಡೇದಹಳ್ಳಿ ಗ್ರಾಮದಲ್ಲಿ ಗಿರಿಯಾಪುರ ಕೇಂದ್ರ ಬಡಗನಾಡು ಶ್ರೀ ಹೇಮರೆಡ್ಡಿ ವೀರಶೈವ ಜನಾಂಗ ಸಂಘ ಮತ್ತು ಗೊಂಡೇದಹಳ್ಳಿ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತ್ಯುತ್ಸವ ಹಾಗೂ ಧಾರ್ಮಿಕ ಸಮಾವೇಶದಲ್ಲಿ ಮಾತನಾಡಿ, ಹಳ್ಳಿಗಳ ಉದ್ಧಾರದಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ಯುವಜನತೆ ಇದನ್ನು ಗಮನದಲ್ಲಿಟ್ಟು ಮುಂದಿನ ಹೆಜ್ಜೆ ಇಡಬೇಕು. 
ಪ್ರಸ್ತುತ ವ್ಯಕ್ತಿ ಪ್ರತಿಷ್ಠೆಯಿಂದ ಜಗತ್ತು ಯುದ್ಧದಿಂದ ಕುದಿಯುತ್ತಿದೆ. ಎಲ್ಲೋ ನಡೆಯುವ ಕದನದಿಂದ ಮತ್ತೆಲ್ಲೋ ಅದರ ಬಿಸಿ ತಟ್ಟುತ್ತಿದೆ. ಯುದ್ಧ ಸಾವು - ನೋವು ಸೃಷ್ಟಿಸುವುದೊಂದೇ ಅಲ್ಲ, ವಿನಾಶಕ್ಕೂ ಕಾರಣವಾಗಲಿದೆ. ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾತ್ವಿಕ ಸಮಾಜ ನಿರ್ಮಾಣದ ಕಡೆ ಒತ್ತು ನೀಡಬೇಕು. ಆಗ ಜಗತ್ತೇ ಶಾಂತ ಸ್ಥಿತಿಗೆ ಮರಳಲಿದೆ ಎಂದು ಹೇಳಿದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಸಮಾಜಕ್ಕೆ ತಾಳ್ಮೆ, ಸಮಾನತೆಯ ಸಂದೇಶ ಸಾರಿದ್ದಾರೆ. ಸರ್ಕಾರ ಮಹಿಳೆಯರಿಗೆ ಗ್ಯಾರಂಟಿ ಯೋಜನೆ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ನೆರವಾಗಿದ್ದು ಸಾಕಷ್ಟು ಬದಲಾವಣೆ ಕಾಣಬಹುದಾಗಿದೆ ಎಂದು ಹೇಳಿದರು.
ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಾನವೀಯ ಮೌಲ್ಯ ಬೆಳಗಿ ಮನುಕುಲಕ್ಕೆ ಸನ್ಮಾರ್ಗ ತೋರಿದ್ದಾರೆ. ಅವರ ಆದರ್ಶ ಬದುಕು ಇಂದಿನ ಸೀ ಸಮೂಹಕ್ಕೆ ಮಾದರಿಯಾಗಬೇಕು ಎಂದು ಆಶಿಸಿದರು.
ಯಡಿಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆ ಶಿಲಾ ಮಠದ ಡಾ.ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಹುಣಸಘಟ್ಟ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಧಾರ್ಮಿಕ ಸಮಾವೇಶದ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು.
ಧಾರ್ಮಿಕ ಸಮಾವೇಶದಲ್ಲಿ ಹಿರಿಯ ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಅವರನ್ನು ಹುಟ್ಟೂರಿನ ಜನತೆ ಅಭಿಮಾನದಿಂದ ಅಭಿನಂದಿಸಿದರು. ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ಗಿರಿಯಾಪುರ ಕೇಂದ್ರ ಬಡಗನಾಡು ಶ್ರೀ ಹೇಮರೆಡ್ಡಿ ವೀರಶೈವ ಜನಾಂಗ ಸಂಘದ ಗೌರವಾಧ್ಯಕ್ಷ ಮುರುಗೇಶ್, ಅಧ್ಯಕ್ಷ ಹೇಮಂತ್‌ಕುಮಾರ್, ಕಾರ್ಯದರ್ಶಿ ಶಿವಲಿಂಗಮೂರ್ತಿ, ಗೊಂಡೇದಹಳ್ಳಿ ಘಟಕ ಅಧ್ಯಕ್ಷ ನೀಲಕಂಠಪ್ಪ, ಗೊ.ರು.ಚ ಗ್ರಾಮ ವಿಕಾಸ ಪ್ರತಿಷ್ಠಾನ ಅಧ್ಯಕ್ಷ ಚಿಕ್ಕ ಕರಿಯಪ್ಪ, ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಆಚರಣಾ ಸಮಿತಿ ಅಧ್ಯಕ್ಷ ಜಿ.ಪಿ.ಜಯಪ್ರಸಾದ್, ಕಾರ್ಯದರ್ಶಿ ಜಿ.ಬಿ.ದಕ್ಷಿಣಮೂರ್ತಿ, ಕೋಶಾಧಿಕಾರಿ ಜಿ.ಎಂ.ಅಮಿತ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net