ಸರ್ಕಾರ ನೀಡುವ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಿ

ತುದಿಪೇಟೆ ಪಿಎಂಶ್ರೀ ಸರ್ಕಾರಿ ಶಾಲೆಗೆ ಮೊದಲ ದಿನ ಆಗಮಿಸಿದ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಲಾಯಿತು.
ತುದಿಪೇಟೆ ಪಿಎಂಶ್ರೀ ಸರ್ಕಾರಿ ಶಾಲೆಗೆ ಮೊದಲ ದಿನ ಆಗಮಿಸಿದ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಲಾಯಿತು.
Published on
ತರೀಕೆರೆ: ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡಿ ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪುರಸಭೆ ಉಪಾಧ್ಯಕ್ಷೆ ಗೀತಾ ಹೇಳಿದರು.
ತುದಿಪೇಟೆ ಪಿಎಂಶ್ರೀ ಸರ್ಕಾರಿ ಶಾಲೆಯಲ್ಲಿ ತರಗತಿ ಪ್ರಾರಂಭೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣದ ಜತೆಗೆ ಬಿಸಿಯೂಟ, ಶುಲ್ಕ ವಿನಾಯಿತಿ, ಶೋ ಸಾಕ್ಸ್ ವಿತರಣೆ ಇನ್ನಿತರ ಸವಲತ್ತು ಒದಗಿಸಲಾಗಿದೆ. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವ ಮೂಲಕ ಮಕ್ಕಳ ಕೊರತೆಯಿಂದ ಶಾಲೆಗೆ ಬೀಗ ಬೀಳುವುದನ್ನು ತಪ್ಪಿಸಬೇಕು ಎಂದರು.
ಬಿಇಒ ಎ.ಎಚ್.ಪರಶುರಾಮಪ್ಪ ಮಾತನಾಡಿ, ತರೀಕೆರೆ ಶೈಕ್ಷಣಿಕ ವಲಯದ ಹಿರೇಕಾನವಂಗಲ, ಬೇಲೇನಹಳ್ಳಿ ಸೇರಿ ಒಟ್ಟು 33 ಶಾಲೆಗಳಲ್ಲಿ ದ್ವಿಭಾಷಾ ಕಲಿಕೆ ಆರಂಭಿಸಲಾಗಿದೆ. ಈಗಾಗಲೇ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಸಲಾಗಿದ್ದು, ಶೂ ಸಾಕ್ಸ್ ವಿತರಣೆ ಬಾಕಿ ಉಳಿದಿದೆ. ಸದ್ಯದಲ್ಲೇ ಅದನ್ನು ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಮೊದಲ ದಿನ ಶಾಲೆಗೆ ಆಗಮಿಸಿದ ಮಕ್ಕಳಿಗೆ ಹೂವು ನೀಡಿ ಸ್ವಾಗತಿಸಲಾಯಿತು. ಸಿಹಿ ಹಂಚಿ ಅವರೊಂದಿಗೆ ಸಂಭ್ರಮಿಸಿದರು. ಸಮಾರಂಭದಲ್ಲಿ ಸಮವಸ ಮತ್ತು ಪಠ್ಯಪುಸ್ತಕವನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಮಹೇಂದ್ರ, ಶಿಕ್ಷಕರು, ಶಿಕ್ಷಕಿಯರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net