ಮೂಡಿಗೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮಾದಕದ್ರವ್ಯ ವ್ಯಸನಮುಕ್ತಿ ಮತ್ತು ನಿರ್ಮೂಲನೆ ಕಾರ್ಯಕ್ರಮವನ್ನು ಪಿಎಸ್‌ಐ ಹರ್ಷವರ್ಧನ್ ಉದ್ಘಾಟಿಸಿದರು. ಮಹೇಶ್, ಬಿ.ಕೆ.ದಿನೇಶ್, ವಿನೋದ್‌ಕುಮಾರ್ ಶೆಟ್ಟಿ, ಎಚ್.ಕೆ.ಯೋಗೀಶ್, ಎಚ್.ಎ.ಆದರ್ಶ, ದೀಪಕ್ ದೊಡ್ಡಯ್ಯ, ಸಂತೋಷ್, ಬಿಂದು ಲೋಕೇಶ್ ಇತರರಿದ್ದರು.
Published on:
Copied
Follow Us
ಮೂಡಿಗೆರೆ: ಶಾಲಾ ಕಾಲೇಜುಗಳ ಬಳಿ ಅಥವಾ ಇತರ ಸ್ಥಳಗಳಲ್ಲಿ ಮಾದಕದ್ರವ್ಯ ಮಾರಾಟ ಮತ್ತು ಸೇವನೆ ಸಂಪೂರ್ಣ ನಿಷೇಧಿಸಲಾಗಿದೆ. ಅಂಥ ಪ್ರಕರಣಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೂಡಿಗೆರೆ ಪಿಎಸ್‌ಐ ಹರ್ಷವರ್ಧನ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರೋಟರಿ ಸಂಸ್ಥೆಯಿಂದ ಮಂಗಳವಾರ ಏರ್ಪಡಿಸಿದ್ದ ಮಾದಕದ್ರವ್ಯ ವ್ಯಸನಮುಕ್ತಿ ಮತ್ತು ನಿರ್ಮೂಲನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾದಕದ್ರವ್ಯ ಸೇವನೆ ಮತ್ತು ಮಾರಾಟದಿಂದ ಯುವಜನತೆ ಹಾಳಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಮುಂದಾಗಬೇಕು. ಮಾದಕ ವಸ್ತುಗಳಿಂದ ದುಷ್ಪರಿಣಾಮ ಉಂಟಾಗುತ್ತದೆ. ದೇಹದಲ್ಲಿ ಆರೋಗ್ಯ ಸ್ಥಿತಿ ಏರುಪೇರಾಗಿ ಮಾರಣಾಂತಿಕ ಕಾಯಿಲೆ ಆವರಿಸಿಕೊಳ್ಳುತ್ತದೆ. ಸಾವು ಕೂಡ ಸಂಭವಿಸುತ್ತದೆ ಎಂದರು.
ಮಾದಕ ವಸ್ತುಗಳ ಮಾರಾಟ ಜಾಲ ಹೆಚ್ಚಾಗಿ ಶಿಕ್ಷಣ ಸಂಸ್ಥೆಗಳ ಆವರಣ ಮತ್ತು ಜನನಿಬಿಡ ಪ್ರದೇಶದಲ್ಲಿ ನಡೆಯುತ್ತದೆ. ಅಂಥ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಸಮವಸ್ತ್ರರಹಿತವಾಗಿ ಮುಫ್ತಿಯಲ್ಲಿ ನಿಯೋಜಿಸಲಾಗಿದೆ. ಸಾರ್ವಜನಿಕರು ಕೂಡ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ರೋಟರಿ ಅಧ್ಯಕ್ಷ ಬಿ.ಕೆ.ದಿನೇಶ್, ವಿನೋದ್‌ಕುಮಾರ್ ಶೆಟ್ಟಿ, ಎಚ್.ಕೆ.ಯೋಗೇಶ್, ಎಚ್.ಎ.ಆದರ್ಶ, ದೀಪಕ್ ದೊಡ್ಡಯ್ಯ, ಸಂತೋಷ್, ಬಿಂದು ಲೋಕೇಶ್, ಪ್ರಸಾದ್ ಬಕ್ಕಿ, ಅನುಷಾ ಇತರರಿದ್ದರು.