ಮೇ 5ರಂದು ಶೃಂಗೇರಿ ಬಂದ್

ಶೃಂಗೇರಿ ತಾಲೂಕಿನಲ್ಲಿ ಬ್ರಾಹ್ಮಣ ಸಂಘಟನೆಯಿಂದ ಏರ್ಪಡಿಸಿದ್ದ ಬಂದ್ ಪೂರ್ವಭಾವಿ ಸಭೆಯಲ್ಲಿ ಸುಮಂಗಲಿ ಆನಂದಸ್ವಾಮಿ ಮಾತನಾಡಿದರು. ಬಿ.ಎಲ್.ರವಿಕುಮಾರ್, ವಿವೇಕಾನಂದ, ಶ್ರೀಧರ್ ರಾವ್ ಇತರರಿದ್ದರು.
ಶೃಂಗೇರಿ ತಾಲೂಕಿನಲ್ಲಿ ಬ್ರಾಹ್ಮಣ ಸಂಘಟನೆಯಿಂದ ಏರ್ಪಡಿಸಿದ್ದ ಬಂದ್ ಪೂರ್ವಭಾವಿ ಸಭೆಯಲ್ಲಿ ಸುಮಂಗಲಿ ಆನಂದಸ್ವಾಮಿ ಮಾತನಾಡಿದರು. ಬಿ.ಎಲ್.ರವಿಕುಮಾರ್, ವಿವೇಕಾನಂದ, ಶ್ರೀಧರ್ ರಾವ್ ಇತರರಿದ್ದರು.
Published on
ಶೃಂಗೇರಿ: ಸಿಇಟಿಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ತಾಲೂಕು ಬ್ರಾಹ್ಮಣ ಮಹಾಸಭಾದಿಂದ ಮೇ 5ರಂದು ಶೃಂಗೇರಿ ಬಂದ್ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಮಹಾಭಲ ಬೀಡೆ ತಿಳಿಸಿದರು. 
ಬಂದ್ ಹಿನ್ನೆಲೆಯಲ್ಲಿ ಭಾನುವಾರ ವಿವಿಧ ಸಂಘಟನೆ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬೆಳಗ್ಗೆ 9ರಿಂದ 12ರವರೆಗೆ ಬಂದ್ ಹಾಗೂ ಪ್ರತಿಭಟನಾ ಮೆರವಣಿಗೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ನಡೆಯಲಿದೆ. ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ ಮಾತನಾಡಿ, ಇದು ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ಅವಮಾನವಾಗಿರದೆ ಹಿಂದು ಧರ್ಮಕ್ಕೆ ಮಾಡಿದ ಅಪಮಾನ. ಸರ್ಕಾರಕ್ಕೆ ಕಳೆದ ವರ್ಷವೇ ಇಂಥ ಪ್ರಕರಣದ ಬಗ್ಗೆ ದೂರು ನೀಡಿದ್ದರೂ ಮತ್ತೆ ಅದೇ ಘಟನೆ ನಡೆದಿರುವುದು ವಿಷಾಧನೀಯ ಎಂದು ಹೇಳಿದರು. ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಬಿ.ಎಲ್.ರವಿಕುಮಾರ್, ಸುಂಕುರ್ಡಿ ವಿವೇಕಾನಂದ, ಶ್ರೀಧರರಾವ್, ಮಾಧವರಾವ್, ರಾಮಮೂರ್ತಿ, ಗಿರಿಜಾಲಕ್ಷ್ಮೀ, ಆನಂದಸ್ವಾಮಿ, ವೆಂಕಟಕೃಷ್ಣಯ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net