ಕಡೂರು ತಾಲೂಕಿನ ಸರಸ್ವತಿಪುರ ಗ್ರಾಮದ ಶ್ರೀ ಕೊಲ್ಲಾಪುರೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ರುದ್ರೇಗೌಡ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಎಸ್.ಕೆ. ಸುರೇಶ್, ಕೆಂಪಯ್ಯ, ತಮಟೇಗೌಡ, ಗಣೇಶ ಆಚಾರ್, ಸಂತೋಷ್, ಬೋಜೇಗೌಡ, ಎಸ್.ಎಲ್.ಮಂಜಪ್ಪ, ಶಿವಣ್ಣ ಮತ್ತಿತರರಿದ್ದರು.
ಕಡೂರು: ಭಕ್ತರ ನೆರವಿನಿಂದ ಸರಸ್ವತಿಪುರ ಗ್ರಾಮದ ಶಕ್ತಿ ದೇವತೆ ಶ್ರೀ ಕೊಲ್ಲಾಪುರೇಶ್ವರಿ ನೂತನ ದೇವಾಲಯವನ್ನು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ಕೊಲ್ಲಾಪುರೇಶ್ವರಿ ನೂತನ ದೇವಾಲಯ ಕಟ್ಟಡ ಸಮಿತಿ ಅಧ್ಯಕ್ಷ ರುದ್ರೇಗೌಡ ತಿಳಿಸಿದರು.
ಸರಸ್ವತಿ ಗ್ರಾಮದ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಸಮಿತಿ ಸದಸ್ಯರು ಹಾಗೂ ಗ್ರಾಮದ ಎಲ್ಲ ಮುಖಂಡರ ಸಹಮತದೊಂದಿಗೆ ಸಮಿತಿಗೆ ನೂತನ ಅಧ್ಯಕ್ಷರಾಗಲು ಅವಕಾಶ ನೀಡಿದ್ದು, ದೇವಿಯ ಸೇವಾ ಕಾರ್ಯಕ್ಕೆ ಹೆಚ್ಚು ತೊಡಗಿಸಿಕೊಳ್ಳಲಾಗುತ್ತದೆ. 6 ದಶಕದ ಇತಿಹಾಸ ಹೊಂದಿರುವ ಗ್ರಾಮದ ದೇವತೆಯ ನೂತನ ದೇಗುಲ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ದೇವಾಲಯಕ್ಕೆ ಯಾವುದೇ ಆದಾಯವಿಲ್ಲ. ಆದರೂ ಗ್ರಾಮದಲ್ಲಿರುವ ಎಲ್ಲ ಸಮುದಾಯದ ಭಕ್ತರು, ದಾನಿಗಳ, ಶಾಸಕ ಕೆ.ಎಸ್.ಆನಂದ್ ಹಾಗೂ ವಿಧಾನಪರಿಷತ್ ಸದಸ್ಯರ ಅನುದಾನದ ನೆರವು ಪಡೆಯಲಾಗುತ್ತದೆ. ನೂತನ ದೇವಾಲಯ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದರು.