ಮುಳುಗಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಿ

ಎನ್.ಆರ್.ಪುರ ತಾಲೂಕಿನ ಭದ್ರಾ ಮುಳುಗಡೆ ಸಂತ್ರಸ್ತರು ಕೊಪ್ಪ ಉಪವಲಯ ಅರಣ್ಯಾಧಿಕಾರಿ ಇ.ಶಿವಶಂಕರ್‌ಗೆ ಮನವಿ ಸಲ್ಲಿಸಿದರು. ಡಾ. ಕೆ.ಪಿ.ಅಂಶುಮಂತ್, ಡಿ.ಜಯರಾಮ್, ಗವಿಯಪ್ಪ, ಚಂದ್ರ, ರಮೇಶ, ಬಾಬು ಇತರರಿದ್ದರು.
ಎನ್.ಆರ್.ಪುರ ತಾಲೂಕಿನ ಭದ್ರಾ ಮುಳುಗಡೆ ಸಂತ್ರಸ್ತರು ಕೊಪ್ಪ ಉಪವಲಯ ಅರಣ್ಯಾಧಿಕಾರಿ ಇ.ಶಿವಶಂಕರ್‌ಗೆ ಮನವಿ ಸಲ್ಲಿಸಿದರು. ಡಾ. ಕೆ.ಪಿ.ಅಂಶುಮಂತ್, ಡಿ.ಜಯರಾಮ್, ಗವಿಯಪ್ಪ, ಚಂದ್ರ, ರಮೇಶ, ಬಾಬು ಇತರರಿದ್ದರು.
Published on
ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಪಂ ವ್ಯಾಪ್ತಿಯ ಬೈರಾಪುರ ಗ್ರಾಮದಲ್ಲಿ ವಾಸವಾಗಿರುವ ಭದ್ರಾ ಮುಳುಗಡೆ ಸಂತ್ರಸ್ತರು ಜಮೀನಿನ ಸಮಸ್ಯೆ ಬಗೆಹರಿಸುವಂತೆ ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ನೇತೃತ್ವದಲ್ಲಿ ಕೊಪ್ಪ ಉಪವಲಯ ಅರಣ್ಯಾಧಿಕಾರಿ ಶಿವಶಂಕರ್ ಹಾಗೂ ತಹಸೀಲ್ದಾರ್ ನೂರುಲ್ ಹುದಾ ಅವರಿಗೆ ಮನವಿ ಸಲ್ಲಿಸಿದರು.
ನಾವು ಭದ್ರಾ ಮುಳುಗಡೆ ಸಂತ್ರಸ್ತರಾಗಿ ಬೈರಾಪುರ ಗ್ರಾಮದ ಸರ್ವೇ ನಂ.37ರಲ್ಲಿ ವಾಸವಾಗಿದ್ದೇವೆ. 1956-57ರಲ್ಲಿ ಸರ್ಕಾರದಿಂದ ಭದ್ರಾ ಮುಳುಗಡೆಯಿಂದ ಜಮೀನು ಕಳೆದುಕೊಂಡ ರೈತರಿಗೆ ಸರ್ಕಾರ ಸರ್ವೇ ನಂ.37ರಲ್ಲಿ 6371.31 ಎಕರೆ ಅರಣ್ಯ ಮತ್ತು 379.28 ಎಕರೆ ಕಂದಾಯ ಎಂದು ಪರಿಗಣಿಸಲಾಗಿದೆ. ಅದರಂತೆ ಭದ್ರಾ ಮುಳುಗಡೆಯಿಂದ ಜಮೀನು ಕಳೆದುಕೊಂಡ ರೈತರಿಗೆ 224 ಎಕರೆ ಮಂಜೂರು ಮಾಡಿರುತ್ತಾರೆ. ಅದರಂತೆ ರೈತರು ಸರ್ವೇ ನಂ.37ರಲ್ಲಿ ಸಾಗುವಳಿ ಮಾಡಿಕೊಂಡಿದ್ದೇವೆ. ಇತ್ತೀಚಿನ ದಿನಗಳಲ್ಲಿ 37 ರೈತರ ಜಮೀನು ಪೋಡಿಯಾಗಿರುತ್ತದೆ. ಆದರೆ 13 ರೈತರಿಗೆ ಪಹಣಿಯಲ್ಲಿ ಪೋಡಿ ನಂ. ಇಂಡೀಕರಣವಾಗಿದೆ. ಇನ್ನುಳಿದ 24 ರೈತರಿಗೆ ಪಹಣಿಯಲ್ಲಿ ಪೋಡಿ ನಂ. ಇಂಡೀಕರಣವಾಗಿಲ್ಲ. ಇದನ್ನು ಸರಿಪಡಿಸಿಕೊಡುವಂತೆ ಹಲವಾರು ವರ್ಷಗಳಿಂದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಗ್ರಾಮಸ್ಥರಾದ ಡಿ.ಜಯರಾಮ್, ಗವಿಯಪ್ಪ, ಚಂದ್ರ, ರಮೇಶ, ಬಾಬು, ಗ್ರಾಪಂ ಮಾಜಿ ಸದಸ್ಯರಾದ ನರೇಂದ್ರ, ದೇವಂತ್ ಗೌಡ, ಮುಖಂಡ ಬಿಳಾಲ್‌ಮನೆ ಉಪೇಂದ್ರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net