ಪತ್ರಿಕೆಗಳಿಂದ ಜನರಲ್ಲಿ ಸಾಮಾಜಿಕ ಕಳಕಳಿ

ಕಡೂರಿನ ದೊಡ್ಡಪಟ್ಟಣಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆಯನ್ನು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಿಗಣೆಹಳ್ಳಿ ನೀಲಕಂಠಪ್ಪ ವಿತರಿಸಿದರು. ಕಲೀಮುಲ್ಲಾ, ರಂಗಸ್ವಾಮಿ, ಜಗದೀಶ್ ಇತರರಿದ್ದರು
ಕಡೂರಿನ ದೊಡ್ಡಪಟ್ಟಣಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆಯನ್ನು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಿಗಣೆಹಳ್ಳಿ ನೀಲಕಂಠಪ್ಪ ವಿತರಿಸಿದರು. ಕಲೀಮುಲ್ಲಾ, ರಂಗಸ್ವಾಮಿ, ಜಗದೀಶ್ ಇತರರಿದ್ದರು
Published on
 ಕಡೂರು: ಮಕ್ಕಳು ಕಲಿಕೆ ಹಂತದಲ್ಲಿ ಪಠ್ಯಪುಸ್ತಕದ ಜತೆಗೆ ಪತ್ರಿಕೆಗಳನ್ನೂ ಓದುವುದರಿಂದ ಸಾಮಾಜಿಕ ಕಳಕಳಿ ಹೊಂದಬಹುದು ಎಂದು ಕಡೂರು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಿಗಣೆಹಳ್ಳಿ ನೀಲಕಂಠಪ್ಪ ತಿಳಿಸಿದರು.
ದೊಡ್ಡ ಪಟ್ಟಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜಯವಾಣಿ ವಿದ್ಯಾರ್ಥಿಮಿತ್ರ ಪತ್ರಿಕೆಯನ್ನು ಮಕ್ಕಳಿಗೆ ವಿತರಿಸಿ ಮಾತನಾಡಿದ ಅವರು, ಪತ್ರಿಕಾ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಿದೆ ಎಂದರೆ ಅದಕ್ಕೆ ಮೂಲ ಕಾರಣ ಡಾ. ವಿಜಯ ಸಂಕೇಶ್ವರ  ಅವರು ಎಂದು ಬಣ್ಣಿಸಿದರು.
ವಿದ್ಯಾರ್ಥಿಗಳಿಗೆ ಗುರಿ ಮುಖ್ಯ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ಜೀವನದಲ್ಲಿ ಯಶಸ್ಸು ದೊರೆಯುತ್ತದೆ. ಸರ್ಕಾರಿ ಶಾಲೆಗಳಲ್ಲಿ ಓದಿದ ಅನೇಕರು ದೇಶದ ಅತ್ಯುನ್ನತ ವ್ಯಕ್ತಿಗಳಾಗಿ ಹೊರಹೊಮ್ಮಿದ್ದು ಅದಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ದತ್ತು ಅವರೇ ಪ್ರಮುಖ ಉದಾಹರಣೆ. ಪತ್ರಿಕೆಗಳು ನಿಖರ, ಸ್ಪಷ್ಟ ಮಾಹಿತಿ ನೀಡುತ್ತಿದ್ದು, ಬೇರೆ ಯಾವುದೇ ಸಮೂಹ ಮಾಧ್ಯಮಗಳಿಗಿಂತಲೂ ವಿಭಿನ್ನವಾಗಿ ಪ್ರಕಟವಾಗುತ್ತಿವೆ ಎಂದು ತಿಳಿಸಿದರು.
ವಿದ್ಯಾರ್ಥಿಮಿತ್ರ ಪತ್ರಿಕೆಯಲ್ಲಿ ಬರುವ ಅಂಶಗಳು ಕಲಿಕೆಗೆ ಸಹಕಾರಿ ಆಗುವುದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಆಗುವಂಥ  ವಿಷಯಗಳು ಪ್ರಕಟವಾಗುತ್ತಿವೆ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಲ್ಲಿ ಎಂಥ ಕಠಿಣ ಪರೀಕ್ಷೆಗಳಲ್ಲೂ ಸುಲಭವಾಗಿ ಯಶಸ್ಸು ಕಾಣಬಹುದು ಎಂದು ತಿಳಿಸಿದರು.
ಪ್ರಾಚಾರ್ಯ ಕಲೀಮುಲ್ಲಾ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪತ್ರಿಕೆಗಳು ಬಹಳ ಮುಖ್ಯ ಪಾತ್ರವಹಿಸುತ್ತವೆ. ಪತ್ರಿಕೆಗಳು  ಶೈಕ್ಷಣಿಕವಾಗಿ ಉಪಯೋಗವಾಗುವ ರೀತಿಯಲ್ಲಿ ಪ್ರಕಟವಾಗುತ್ತಿದ್ದು, ಅದಕ್ಕೆ ವಿಜಯವಾಣಿ ವಿದ್ಯಾರ್ಥಿಮಿತ್ರ ಸಂಚಿಕೆ ಉತ್ತಮ ಉದಾಹರಣೆ. ಇಂಥ ಪತ್ರಿಕೆಗಳಿಂದ ಕಲಿಕೆಯ ವೇಗ ಹೆಚ್ಚಿಸಿಕೊಳ್ಳಬಹುದು. ಪತ್ರಿಕೆಗಳನ್ನೇ ಓದಿ ಅನೇಕರು ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಕಟ್ಟೆಹೊಳೆಯಮ್ಮ ಪ್ರೌಢಶಾಲೆ, ಆಲಘಟ್ಟ  ಸರ್ಕಾರಿ ಪ್ರೌಢಶಾಲೆ, ಪಂಚೆಹೊಸಳ್ಳಿ ಶಾಲಾ ಮಕ್ಕಳಿಗೂ ವಿದ್ಯಾರ್ಥಿ ಮಿತ್ರ ಪತ್ರಿಕೆ ವಿತರಿಸಲಾಯಿತು. ಮುಖ್ಯಶಿಕ್ಷಕರಾದ ಧರಣೇಶ್, ಕೃಷ್ಣಮೂರ್ತಿ, ಶಿಕ್ಷಕರಾದ ರಂಗಸ್ವಾಮಿ, ಜಗದೀಶ್, ಶ್ರೀನಿವಾಸ್, ಚಂದ್ರಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net