ಶೃಂಗೇರಿ: ತಾಲೂಕಿನ ವಿದ್ಯಾರಣ್ಯಪುರ ಶ್ರೀರಾಮ ದೇವಸ್ಥಾನದ ಸೀತಾಕಲ್ಯಾಣ ಮಹೋತ್ಸವ ಮಾ.28ರ ಸಂಜೆ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ನೆರವೇರಲಿದೆ. ಶ್ರೀರಾಮ ಸೇವಾ ಸಮಿತಿಯಿಂದ ಶ್ರೀರಾಮ ವಸಂತ ನವರಾತ್ರಿ ಪ್ರಯುಕ್ತ ಅಂದು ಬೆಳಗ್ಗೆ ಕಲ್ಪೋಕ್ತ ಪೂಜೆ, ಶ್ರೀ ಮದ್ರಾಮಾಯಣ ಪಾರಾಯಣ, ರಾಮದೇವರ ಪ್ರತಿಷ್ಠಾಪನಾ ವರ್ಧಂತಿ, ರಾಮನವಮಿ, ಶ್ರೀರಾಮ ಪಟ್ಟಾಭಿಷೇಕ, ರಾಮತಾರಕ ಹೋಮ ಹಾಗೂ ಸಂಜೆ ಬೀದಿ ಉತ್ಸವ, ಭಜನೆ, ಅಷ್ಟಾವಧಾನ ಸೇವೆ ನಡೆಯಲಿದೆ. ಮಾ.29ರಂದು ಸತ್ಯಗಣಪತಿ ವ್ರತ, ಸತ್ಯನಾರಾಯಣ ವ್ರತ ಹಾಗೂ ಸಂಜೆ ಶ್ರೀ ಹನುಮದುತ್ಸವ ಧಾರ್ಮಿಕ ಆಚರಣೆಯೊಂದಿಗೆ ಸಂಪನ್ನಗೊಳ್ಳಲಿದೆ.