ಸರ್ವಜ್ಞ ಮಹಾನ್ ಮಾನವತಾವಾದಿ

ಮೂಡಿಗೆರೆ ತಾಲೂಕು ಕಚೇರಿಯಲ್ಲಿ ನಡೆದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ಅಶ್ವಿನಿ, ಪುರುಷೋತ್ತಮ್, ಕೆ.ಟಿ.ಹರೀಶ್, ನಾಗರಾಜ್, ನಾಗೇಶ್, ಯಾಕೂಬ್ ಗೋಣಿಗದ್ದೆ, ಮಹಮ್ಮದ್ ಜುಬೇರ್, ಜಗದೀಶ್ ಇತರರಿದ್ದರು.
ಮೂಡಿಗೆರೆ ತಾಲೂಕು ಕಚೇರಿಯಲ್ಲಿ ನಡೆದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಸ್.ಅಶ್ವಿನಿ, ಪುರುಷೋತ್ತಮ್, ಕೆ.ಟಿ.ಹರೀಶ್, ನಾಗರಾಜ್, ನಾಗೇಶ್, ಯಾಕೂಬ್ ಗೋಣಿಗದ್ದೆ, ಮಹಮ್ಮದ್ ಜುಬೇರ್, ಜಗದೀಶ್ ಇತರರಿದ್ದರು.
Published on
ಮೂಡಿಗೆರೆ: ದಾರ್ಶನಿಕ ಸರ್ವಜ್ಞ ಅವರು ಜಗತ್ತಿಗೆ ಐಕ್ಯತೆ, ಭ್ರಾತೃತ್ವ, ಸಾಮಾಜಿಕ ಬದ್ಧತೆ, ಸಹಬಾಳ್ವೆಯನ್ನು ಕಲಿಸಿದರು ಎಂದು ತಹಸೀಲ್ದಾರ್ ಎಸ್.ಅಶ್ವಿನಿ ಹೇಳಿದರು. 
ಸಂತಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತನ್ನ ವಚನಗಳ ಮೂಲಕ ಲೋಕಕ್ಕೆ ಜ್ಞಾನದ ಬೆಳಕನ್ನು ನೀಡಿದ ಸರ್ವಜ್ಞರ ಜೀವನಶೈಲಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕಾಗಿದೆ. ಮಕ್ಕಳಿಗೆ ಸರ್ವಜ್ಞ ಅವರ ಬಗ್ಗೆ ಶಾಲಾ ಪಠ್ಯದಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು. 
ಶಿಕ್ಷಣ ಇಲಾಖೆ ಸಿಆರ್‌ಪಿ ಪುರುಷೋತ್ತಮ್ ಮಾತನಾಡಿ, ಸರ್ವಜ್ಞನ ಇತಿಹಾಸದ ಬಗ್ಗೆ ತಿಳಿದುಕೊಂಡಷ್ಟೂ ಮುಗಿಯಲಾರದು. ಆಧುನಿಕ ಯುಗಕ್ಕೆ ಸರ್ವಜ್ಞ ಅವರ ವ್ಯಕ್ತಿತ್ವದ ಪರಿಚಯವೇ ಇಲ್ಲದಂತಾಗಿದೆ. ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಲು ಪ್ರತಿಯೊಬ್ಬರೂ  ಪ್ರಯತ್ನಿಸಬೇಕು ಎಂದು ತಿಳಿಸಿದರು. 
ಕುಂಬಾರ ಯಾನೆ ಕುಲಾಲ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ.ಹರೀಶ್, ಗೌರವಾಧ್ಯಕ್ಷ ನಾಗರಾಜ್, ನಾಗೇಶ್ ಹೆಮ್ಮಕ್ಕಿ, ಮುಖಂಡರಾದ ಯಾಕೂಬ್ ಗೋಣಿಗದ್ದೆ, ಮಹಮ್ಮದ್ ಜುಬೇರ್, ಜಗದೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net