ಆರ್ಥಿಕ ಸದೃಢತೆಗೆ ಸಂಜೀವಿನಿ ಒಕ್ಕೂಟ

.ಕಣಬೂರು ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟ ಆಯೋಜಿಸಿದ್ದ ವಾರ್ಡ್ ಸಭೆಯಲ್ಲಿ ವಿಶಾಲ ಆರ್.ಶೆಟ್ಟಿ, ಶಿವಮ್ಮ, ಮಮತಾ, ಪ್ರೇಮಲತಾ, ಶಾಹಿದಾಬಾನು, ತೆರೇಸಾ ಜಾಯ್, ಸ್ಟೆಲ್ಲಾ, ಶಾಂತಾ, ಜಯಶ್ರೀ, ಜಯಂತಿ, ಸರಸ್ವತಿ ಮತ್ತಿತರರಿದ್ದರು.
.ಕಣಬೂರು ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟ ಆಯೋಜಿಸಿದ್ದ ವಾರ್ಡ್ ಸಭೆಯಲ್ಲಿ ವಿಶಾಲ ಆರ್.ಶೆಟ್ಟಿ, ಶಿವಮ್ಮ, ಮಮತಾ, ಪ್ರೇಮಲತಾ, ಶಾಹಿದಾಬಾನು, ತೆರೇಸಾ ಜಾಯ್, ಸ್ಟೆಲ್ಲಾ, ಶಾಂತಾ, ಜಯಶ್ರೀ, ಜಯಂತಿ, ಸರಸ್ವತಿ ಮತ್ತಿತರರಿದ್ದರು.
Published on
ಬಾಳೆಹೊನ್ನೂರು: ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಸಂಜೀವಿನಿ ಒಕ್ಕೂಟಗಳು ಸಹಕಾರಿ ಎಂದು ಬಿ.ಕಣಬೂರು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಶಾಲಾ ಆರ್. ಶೆಟ್ಟಿ ಹೇಳಿದರು.
ಶಿವನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿ.ಕಣಬೂರು ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟ ಆಯೋಜಿಸಿದ್ದ ವಾರ್ಡ್ ಸಭೆಯಲ್ಲಿ ಮಾತನಾಡಿ, ಎನ್.ಆರ್.ಪುರ ತಾಲೂಕಿನಲ್ಲಿ 14 ಸಂಜೀವಿನಿ ಒಕ್ಕೂಟಗಳಿದ್ದು ಬಿ.ಕಣಬೂರು ಸಂಜೀವಿನಿ ಒಕ್ಕೂಟವು ತಾಲೂಕಿಗೆ ಮಾದರಿ ಒಕ್ಕೂಟವಾಗಿ ಇತ್ತೀಚೆಗೆ ಆಯ್ಕೆಯಾಗಿದೆ. ಸಂಜೀವಿನಿ ಒಕ್ಕೂಟದಲ್ಲಿ ಮಹಿಳೆಯರಿಗೆ ಹಲವು ಸವಲತ್ತುಗಳಿದ್ದು ಇವುಗಳನ್ನು ಸದುಪಯೋಗಪಡಿಸಿಕೊಂಡಲ್ಲಿ ಮಹಿಳೆಯರು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗಲಿದೆ.
ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ತಲುಪಿಸುವುದು ಒಕ್ಕೂಟದ ಕರ್ತವ್ಯವಾಗಿದೆ. ಈ ಕಾರ್ಯವನ್ನು ಒಕ್ಕೂಟ ಅಚ್ಚುಕಟ್ಟಾಗಿ ನಿರ್ವಹಿಸಲಿದೆ ಎಂದು ತಿಳಿಸಿದರು.
ಒಕ್ಕೂಟದ ಸದಸ್ಯರಾದ ಶಿವಮ್ಮ, ಮಮತಾ, ಪ್ರೇಮಲತಾ, ಶಾಹಿದಾ ಬಾನು, ತೆರೇಸಾ ಜಾಯ್, ಸ್ಟೆಲ್ಲಾ, ಶಾಂತಾ, ಜಯಶ್ರೀ, ಜಯಂತಿ, ಸರಸ್ವತಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net