ಕನ್ನಡ ಭಾಷೆಗೆ ಎಸ್.ಜಾನಕಿ ಕೊಡುಗೆ ಅನನ್ಯ

ಶೃಂಗೇರಿ ಕನ್ನಡ ಭವನದಲ್ಲಿ ಎಸ್.ಜಾನಕಿ ಅವರ ನುಡಿನಮನ ಕಾರ್ಯಕ್ರಮ ನಡೆಯಿತು. ಮೋಹನ್‌ಕುಮಾರ್, ಸುನೀತಾ, ನಿರ್ಮಲಾ, ಮಂಜುನಾಥ್ ಗೌಡ ಇದ್ದರು.
ಶೃಂಗೇರಿ ಕನ್ನಡ ಭವನದಲ್ಲಿ ಎಸ್.ಜಾನಕಿ ಅವರ ನುಡಿನಮನ ಕಾರ್ಯಕ್ರಮ ನಡೆಯಿತು. ಮೋಹನ್‌ಕುಮಾರ್, ಸುನೀತಾ, ನಿರ್ಮಲಾ, ಮಂಜುನಾಥ್ ಗೌಡ ಇದ್ದರು.
Published on
ಶೃಂಗೇರಿ: ಗಾನಕೋಗಿಲೆ ಎಸ್.ಜಾನಕಿ ಅವರು ಕನ್ನಡ ಭಾಷೆಗೆ ಸಂಗೀತದ ಮೂಲಕ ನೀಡಿದ ಕೊಡುಗೆ ಅನನ್ಯ ಎಂದು ಪುಷ್ಪಗಿರಿ ಪ್ರತಿಷ್ಠಾನದ ಸಂಸ್ಥಾಪಕ ಮೋಹನ್‌ಕುಮಾರ್ ತಿಳಿಸಿದರು.
ಕನ್ನಡಭವನದಲ್ಲಿ ಸೀನಿಯರ್ ಚೇಂಬರ್ ಹಾಗೂ ಪುಷ್ಪಗಿರಿ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆಂಧ್ರಪ್ರದೇಶದಲ್ಲಿ ಜನಿಸಿದ ಅಭಿಜ್ಞಾತ ಕಲಾವಿದೆ ಎಸ್.ಜಾನಕಿ ಅವರು ಹಾಡಿದ ಗೀತೆಗಳಲ್ಲಿ ಹಲವಾರು ಗೀತೆಗಳು ಇಂದಿಗೂ ಅಮರ. ಅವರ ಕನ್ನಡ ಪ್ರೇಮ ಸರ್ವರಿಗೂ ಮಾದರಿ ಎಂದರು.
ಸೀನಿಯರ್ ಚೇಂಬರ್ ಉಪಾಧ್ಯಕ್ಷ ಎಂ.ಛಾಯಾಪತಿ ಮಾತನಾಡಿ, ಗಾನಸರಸ್ವತಿ ಎಂದೇ ಗುರುತಿಸಲ್ಪಟ್ಟ ಎಸ್.ಜಾನಕಿ ಅವರು ಸಾರಸ್ವತ ಲೋಕಕ್ಕೆ ಇಂಪಾದ ಸ್ವರ ಮಾಧುರ್ಯದ ಮೂಲಕ ಕೊಡುಗೆ ನೀಡಿ ಮರೆಯಾದರೂ ಅವರು ಹಾಡಿನ ಮೂಲಕ ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಅವರ ಸರಳ ವ್ಯಕ್ತಿತ್ವ, ಪ್ರತಿಭೆ ಗುರುತಿಸಿ ನೀಡುತ್ತಿದ್ದ ಪ್ರೋತ್ಸಾಹ ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿ  ಎಂದರು.
ಸೀನಿಯರ್ ಚೇಂಬರ್ ಮಾರ್ಗದರ್ಶಿ ಜಿ.ಎಂ.ಶ್ರೀಧರ್ ಗಂಡಘಟ್ಟ ಅವರು ಗಾಯನದ ಮೂಲಕ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಸೀನಿಯರ್ ಚೇಂಬರ್ ಅಧ್ಯಕ್ಷ ಮಂಜುನಾಥ್ ಗೌಡ ಉದ್ಘಾಟಿಸಿದರು. ಶಿಕ್ಷಕರಾದ ಸುನೀತಾ ನವೀನ್ ಗೌಡ, ನಿರ್ಮಲಾ, ಜಿಲ್ಲಾ ಕಸಾಪ ಸಂಚಾಲಕ ಎಚ್.ಎಸ್.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net