ಎನ್.ಆರ್.ಪುರ: ತಾಲೂಕಿನ ವಿವಿಧೆಡೆ ಬುಧವಾರ ಋಗ್ ಉಪಾಕರ್ಮ ಅಂಗವಾಗಿ ಪುರೋಹಿತರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನ ನಡೆಯಿತು. ವಿಪ್ರರು ಯಜ್ಞೋಪವೀತ ಧಾರಣೆ ಮಾಡಿಸಿಕೊಂಡರು. ಅಗ್ರಹಾರದ ಗಾಯತ್ರಿ ದೇವಸ್ಥಾನದಲ್ಲಿ ವಿಪ್ರ ಮುಖಂಡರಾದ ಎನ್.ಶ್ರೀನಾಥ್, ಎಸ್.ಎನ್.ಸುರೇಶ್ ನೇತೃತ್ವ ಹಾಗೂ ಪ್ರಕಾಶ್ ಭಟ್ ಪೌರೋಹಿತ್ಯದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಸೀತೂರು ಗ್ರಾಪಂ ಕೊನೋಡಿ ರಾಮಚಂದ್ರಯ್ಯ ಅವರ ಮನೆಯಲ್ಲಿ ಉಪಾಕರ್ಮ ನಡೆಯಿತು. ಕೊನೋಡಿ, ಹಂಪಿನಮನೆ, ಬಾಳೆಕೊಪ್ಪ, ಹೊನ್ನೇಕೊಪ್ಪ, ಕುದುರೆಗುಂಡಿಯ ಒಟ್ಟು 31 ವಿಪ್ರರು ಜನಿವಾರ ಧಾರಣೆ ಮಾಡಿಕೊಂಡರು. ಕಾನೂರು ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಹಾಗೂ ಯಡಗರೆ ರಾಮನಾಥೇಶ್ವರ ದೇವಸ್ಥಾನದಲ್ಲೂ ಋಗ್ ಉಪಾಕರ್ಮ ನಡೆಯಿತು.