ಪೌರ ಕಾರ್ಮಿಕರನ್ನು ಗೌರವಿಸಿ

ಎಳ್ಳಮಾವಾಸ್ಯೆ ಜಾತ್ರೆ ಯಶಸ್ವಿಯಾದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಪಪಂ ಕಾರ್ಯಾಲಯದಲ್ಲಿ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗೆ ಗೌರವಿಸಲಾಯಿತು. ಗೀತಾ ರಮೇಶ್, ಬಿ.ಗಣಪತಿ, ಡಿ.ರಾಜು, ಸೊಪ್ಪುಗುಡ್ಡೆ ರಾಘವೇಂದ್ರ ಇತರರಿದ್ದರು.
ಎಳ್ಳಮಾವಾಸ್ಯೆ ಜಾತ್ರೆ ಯಶಸ್ವಿಯಾದ ಹಿನ್ನೆಲೆಯಲ್ಲಿ ತೀರ್ಥಹಳ್ಳಿಯ ಪಪಂ ಕಾರ್ಯಾಲಯದಲ್ಲಿ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗೆ ಗೌರವಿಸಲಾಯಿತು. ಗೀತಾ ರಮೇಶ್, ಬಿ.ಗಣಪತಿ, ಡಿ.ರಾಜು, ಸೊಪ್ಪುಗುಡ್ಡೆ ರಾಘವೇಂದ್ರ ಇತರರಿದ್ದರು.
Published on
ತೀರ್ಥಹಳ್ಳಿ: ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪೌರ ಕಾರ್ಮಿಕರನ್ನು ಗೌರವಿಸುವುದು ಅತ್ಯಂತ ಪುಣ್ಯದ ಕಾರ್ಯ ಎಂದು ಪಪಂ ಪ್ರಭಾರ ಅಧ್ಯಕ್ಷೆ ಗೀತಾ ರಮೇಶ್ ಹೇಳಿದರು.
ಇಲ್ಲಿನ ಎಳ್ಳಮಾವಾಸ್ಯೆ ಜಾತ್ರೆ ಯಶಸ್ವಿಯಾಗಿ ಮುಕ್ತಾಯಗೊಳ್ಳುವುದಕ್ಕೆ ಪ್ರಮುಖ ಕಾರಣರಾಗಿರುವ ಪೌರ ಕಾರ್ಮಿಕರು ಮತ್ತು ಸಿಬ್ಬಂದಿಗೆ ಪಪಂ ಕಾರ್ಯಾಲಯದಲ್ಲಿ ಗೌರವ ಸಲ್ಲಿಸಿ ಮಾತನಾಡಿದರು.
 ಈ ವರ್ಷದ ಜಾತ್ರೆಗೆ ನಿರೀಕ್ಷೆಗೂ ಮೀರಿ ಜನರು ಸೇರಿದ್ದರೂ ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳಿಗೆ ಕಿಂಚಿತ್ತು ಕೊರತೆಯಾಗದಂತೆ ಕಾರ್ಯನಿರ್ವಹಣೆ ಮಾಡಿರುವುದು ಪ್ರಶಂಸನೀಯ. ಜಾತ್ರೆಯ ಯಶಸ್ಸಿನಲ್ಲಿ ಪೌರ ಕಾರ್ಮಿಕರ ಶ್ರಮವೂ ಕಾರಣವಾಗಿದೆ ಎಂದು ಹೇಳಿದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ ಮಾತನಾಡಿ, ನಾಗರಿಕ ವ್ಯವಸ್ಥೆಗೆ ಮೂಲ ಕಾರಣ ಪೌರ ಕಾರ್ಮಿಕರ ನಿಸ್ವಾರ್ಥವಾದ ಸೇವೆ ಎಂಬುದನ್ನು ಮರೆಯುವಂತಿಲ್ಲ. ವರ್ಷಪೂರ್ತಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಈ ವರ್ಗದ ನೌಕರರಿಗೆ ಸರ್ಕಾರದಿಂದ ಒಂದಿಷ್ಟು ಸೌಲಭ್ಯಗಳು ದೊರೆಯುತ್ತಿದೆಯಾದರೂ ಆರೋಗ್ಯ ರಕ್ಷಣೆ ಬಗ್ಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸುವಲ್ಲಿ ಸರ್ಕಾರ ನಿರ್ಣಯ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಪಪಂ ಮುಖ್ಯಾಧಿಕಾರಿ ಡಿ.ರಾಜು, ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ, ಶಬನಂ, ಸಂದೇಶ್ ಜವಳಿ, ಜ್ಯೋತಿ ಮೋಹನ್, ಜಯಪ್ರಕಾಶ್ ಶೆಟ್ಟಿ, ರವೀಶ್‌ಭಟ್, ರತ್ನಾಕರ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಜ್ಯೋತಿಗಣೇಶ್, ಮಂಜುಳಾ ನಾಗೇಂದ್ರ, ವಿಲಿಯಂ ಮಾರ್ಟಿಸ್, ಡಾ. ಅನಿಲ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net