ಮೂಡಿಗೆರೆಯಲ್ಲಿ ರೆಸಾರ್ಟ್ ಮತ್ತು ಹೋಂ ಸ್ಟೇ ಬುಕಿಂಗ್‌ ಬಂದ್

ಮೂಡಿಗೆರೆಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಲ್ಲದೆ ಗೃಹ ಬಳಕೆ ಸಿಲಿಂಡರ್‌ಗಳನ್ನು ಮಾತ್ರ ಗ್ಯಾಸ್ ಕಂಪನಿ ವಾಹನ ಒಯ್ಯುತ್ತಿರುವುದು.
ಮೂಡಿಗೆರೆಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್‌ಗಳಿಲ್ಲದೆ ಗೃಹ ಬಳಕೆ ಸಿಲಿಂಡರ್‌ಗಳನ್ನು ಮಾತ್ರ ಗ್ಯಾಸ್ ಕಂಪನಿ ವಾಹನ ಒಯ್ಯುತ್ತಿರುವುದು.
Published on
ಮೂಡಿಗೆರೆ: ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ಉಂಟಾಗಿರುವ ಕೊರತೆಯಿಂದ ಪಟ್ಟಣದ ಹಲವು ಹೋಟೆಲ್ಗಳು ಶುಕ್ರವಾರದಿಂದ ಬಾಗಿಲು ಮುಚ್ಚತೊಡಗಿದೆ. ಹೋಟೆಲ್ ಕಾರ್ಮಿಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಇದು ರಂಜಾನ್ ಮತ್ತು ಯುಗಾದಿ ಹಬ್ಬದ ಮೇಲೆ ನೇರ ಪರಿಣಾಮ ಉಂಟಾಗಲಿದೆ.
ಅತಿಥಿ, ನ್ಯೂತಾಜ್, ಖಲೀಲ್ ಕಿಚನ್, ನವದುರ್ಗ, ದುರ್ಗಾಂಬ ಹೋಟೆಲ್ ಸೇರಿದಂತೆ ಪಟ್ಟಣದಲ್ಲಿ 10ಕ್ಕಿಂತ ಹೆಚ್ಚು ಹೋಟೆಲ್ಗಳು ಬಾಗಿಲು ಮುಚ್ಚಿದೆ. ಊಟ, ತಿಂಡಿ, ಕಾಫಿಗಾಗಿ ಹೋಟೆಲ್ಗಳನ್ನು ಅವಲಂಬಿಸುವ ಗ್ರಾಹಕರಿಗೆ ಆಹಾರ ಸಿಗದೆ ಕಂಗಾಲಾಗಿದ್ದಾರೆ. ಕೆಲ ಹೋಟೆಲ್ನಲ್ಲಿ ಸೌದೆಯಿಂದ ಅಡುಗೆ ತಯಾರಿಸಲಾಗುತ್ತಿದೆ. ಹೋಟೆಲ್ ಕಾರ್ಮಿಕರು ಕೆಲಸವಿಲ್ಲದೆ ಮನೆಯಲ್ಲಿದ್ದಾರೆ. ರಂಜಾನ್ ಮತ್ತು ಯುಗಾದಿ ಹಬ್ಬಗಳ ಆಚರಿಸುವವರು ಕೈಯಲ್ಲಿ ಬಿಡಿಗಾಸು ಇಲ್ಲದೆ ಹೇಗೆ ಹಬ್ಬ ಆಚರಿಸುವುದು ಎಂದು ಅಂಕದಲ್ಲಿದ್ದಾರೆ.
ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆ ಒಂದು ವಾರದಿಂದ ಸ್ಥಗಿತಗೊಂಡ ಬಳಿಕ ಹೋಟೆಲ್ ಮಾಲೀಕರಿಗೆ ದಿಕ್ಕು ತೋಚುತ್ತಿಲ್ಲ. ಬಾಡಿಗೆ ಕಟ್ಟಡದಲ್ಲಿ ಹೋಟೆಲ್ ನಡೆಸುವ ಕಾರಣ ಅಲ್ಲಿ ಸೌದೆ ಒಲೆಗೆ ಅವಕಾಶವಿಲ್ಲದೆ ಬಾಗಿಲು ಮುಚ್ಚುವುದು ಅನಿವಾರ್ಯವಾಗಿದೆ. ಹೋಟೆಲ್ ಬಂದ್ ನಿಂದ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದೆ. ತಾಲೂಕಿನಲ್ಲಿರುವ ರೆಸಾರ್ಟ್ ಮತ್ತು ಹೋಂ ಸ್ಟೇಗಳು ಮಾಂಸಹಾರಕ್ಕೆ ಪಟ್ಟಣದ ಹೋಟೆಲ್ಗಳನ್ನೇ ಅವಲಂಬಿಸಿದೆ. ಮಾಂಸಹಾರದ ಹೋಟೆಲ್ ಬಂದ್ ಆಗಿರುವುದರಿಂದ ರೆಸಾರ್ಟ್ ಮತ್ತು ಹೋಂ ಸ್ಟೇ ಗ್ರಾಹಕರಿಗೆ ಆಹಾರ ಪೂರೈಸಲು ಸಾಧ್ಯವಾಗಿಲ್ಲ. ಗ್ಯಾಸ್ ಸಿಲಿಂಡರ್ ಕೂಡ ಸಿಗದ ಕಾರಣ ಅಡುಗೆ ತಯಾರಿಸಲು ಆಗದೆ ಕೆಲ ರೆಸಾರ್ಟ್ ಮತ್ತು ಹೋಂಸ್ಟೇಗಳು ಆನ್‌ಲೈನ್ ಬುಕಿಂಗ್ ಸ್ಥಗಿತಗೊಳಿಸಿದೆ. ವಾರಾಂತ್ಯದಲ್ಲಿ ತಾಲೂಕಿನ ಎಲ್ಲ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು. ಈ ವಾರ ಮಾತ್ರ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net