ಕೌಟುಂಬಿಕ ಸಮಸ್ಯೆ ಸರಿಪಡಿಸಿದರೆ ದೇವರ ಶ್ರೀರಕ್ಷೆ (Former Minister Motamma)

ಮೂಡಿಗೆರೆ ಸಂಚಿಹೊನ್ನಮ್ಮ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಮೋಟಮ್ಮ ಭಾಗವಹಿಸಿದ್ದರು. ಎಚ್.ಟಿ.ನಾಗರತ್ನಮ್ಮ, ಭಾನುಮತಿ, ದೇವಕಿ, ಎಚ್.ಟಿ.ವರಮಹಾಲಕ್ಷ್ಮೀ, ನಾಗಮಣಿ, ಬಿಂದು, ಭಾರತಿ ಈಶ್ವರ, ಪೂರ್ಣಿಮಾ, ಬಿ.ಕೆ.ಜಯಮ್ಮ, ಸುಧಾ ಮಂಜುನಾಥ್ ಇತರರಿದ್ದರು.
ಮೂಡಿಗೆರೆ ಸಂಚಿಹೊನ್ನಮ್ಮ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಮೋಟಮ್ಮ ಭಾಗವಹಿಸಿದ್ದರು. ಎಚ್.ಟಿ.ನಾಗರತ್ನಮ್ಮ, ಭಾನುಮತಿ, ದೇವಕಿ, ಎಚ್.ಟಿ.ವರಮಹಾಲಕ್ಷ್ಮೀ, ನಾಗಮಣಿ, ಬಿಂದು, ಭಾರತಿ ಈಶ್ವರ, ಪೂರ್ಣಿಮಾ, ಬಿ.ಕೆ.ಜಯಮ್ಮ, ಸುಧಾ ಮಂಜುನಾಥ್ ಇತರರಿದ್ದರು.
Published on
ಮೂಡಿಗೆರೆ: ದಂಪತಿ ಮಧ್ಯೆ ಕೌಟುಂಬಿಕ ಸಮಸ್ಯೆ ಎದುರಾದಾಗ ಅದನ್ನು ಸರಿಪಡಿಸಿ ಒಂದುಗೂಡಿಸಿದವರಿಗೆ ದೇವರ ಶ್ರೀರಕ್ಷೆ ದೊರೆಯುತ್ತದೆ ಎಂದು ಮಾಜಿ ಸಚಿವೆ ಮೋಟಮ್ಮ ಹೇಳಿದರು.
ಸಂಚಿಹೊನ್ನಮ್ಮ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ನೊಂದ ಮಹಿಳೆಯರ ಕಣ್ಣೀರೊರೆಸಲು ಸರ್ಕಾರ ಪ್ರತಿ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರವನ್ನು 25 ವರ್ಷದ ಹಿಂದೆ ಆರಂಭಿಸಿದೆ. ಕೌಟುಂಬಿಕ ಕಲಹ ಉಂಟಾದಲ್ಲಿ ಪೊಲೀಸ್ ಠಾಣೆ ಅಥವಾ ನ್ಯಾಯಾಲಯದ ಮೊರೆ ಹೋಗುವ ಮೊದಲು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಸಂಪರ್ಕಿಸಬೇಕು. ಸಾಂತ್ವನ ಕೇಂದ್ರದಿಂದ ನೋಟಿಸ್ ಕಳಿಸಿ ಉಭಯ ತಂಡಗಳನ್ನು ಕರೆಸಿಕೊಳ್ಳಲಾಗುವುದು. ಕೌನ್ಸೆಲಿಂಗ್ ಮೂಲಕ ಅವರ ಮನವೊಲಿಸಿ ಕೌಟುಂಬಿಕ ಕಲಹ ಸೇರಿದಂತೆ ಇತರ ಪ್ರಕರಣವನ್ನು ಇತ್ಯರ್ಥಪಡಿಸಲಾಗುವುದು. ಇದರಿಂದ ಬಹುತೇಕ ನೊಂದ ಮಹಿಳೆಯರಿಗೆ ನ್ಯಾಯ ದೊರಕಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷೆ ಎಚ್.ಟಿ.ನಾಗರತ್ನಮ್ಮ ಮಾತನಾಡಿ, ನೊಂದವರ ಪರವಾಗಿ ಧ್ವನಿ ಎತ್ತುವ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವುದು ಪುಣ್ಯದ ಕೆಲಸ. ಈ ಸಂಸ್ಥೆ ಮೂಲಕ ನೊಂದವರ ಕಣ್ಣೀರು ಒರೆಸಲು ಪ್ರಯತ್ನಿಸಲಾಗುವುದು. ತ್ವರಿತವಾಗಿ ನ್ಯಾಯ ಒದಗಿಸುವುದು ಈ ಸಂಸ್ಥೆಯ ಪ್ರತಿಯೊಬ್ಬ ಸದಸ್ಯರ ಜವಾಬ್ದಾರಿ. ನೊಂದವರು ಸಂಚಿ ಹೊನ್ನಮ್ಮ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು. 
ಕಾರ್ಯದರ್ಶಿ ಎಚ್.ಟಿ.ಭಾನುಮತಿ, ಸದಸ್ಯರಾದ ದೇವಕಿ, ಎಚ್.ಟಿ.ವರಮಹಾಲಕ್ಷ್ಮೀ, ನಾಗಮಣಿ, ಬಿಂದು, ಭಾರತಿ ಈಶ್ವರ, ಪೂರ್ಣಿಮಾ, ಬಿ.ಕೆ.ಜಯಮ್ಮ, ಸುಧಾ ಮಂಜುನಾಥ್, ಶಾರದಾ, ಕಲ್ಯಾಣಿ, ಭವಿಷ್ಯಾ, ಮಹೇಶ್ವರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net