ಕೋಳಿ ಗೂಡಿನಲ್ಲಿದ್ದ 21 ಹಾವಿನ ಮೊಟ್ಟೆಗಳ ರಕ್ಷಣೆ

ಕೋಳಿ ಗೂಡಿನಲ್ಲಿ  ನಾಗರ ಹಾವು ಇರಿಸಿದ್ದ 21 ಮೊಟ್ಟೆ.
ಕೋಳಿ ಗೂಡಿನಲ್ಲಿ ನಾಗರ ಹಾವು ಇರಿಸಿದ್ದ 21 ಮೊಟ್ಟೆ.
Published on
ಬಾಳೆಹೊನ್ನೂರು: ಖಾಂಡ್ಯ ಹೋಬಳಿಯ ಬಿದರೆ ಗ್ರಾಮದ ಮೂರು ಮನೆಗಳ ಕೋಳಿ ಗೂಡಿನಲ್ಲಿ ಅವಿತಿದ್ದ ಮೂರು ನಾಗರ ಹಾವುಗಳನ್ನು ರಕ್ಷಿಸಿ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ.
ಬಿದರೆ ಗ್ರಾಮದ ದೇವರಾಜ್, ಬಿ.ಬಿ.ರಾಮೇಗೌಡ ಹಾಗೂ ನಾಗರತ್ನ ಎಂಬುವರ ಮನೆ ಕೋಳಿ ಗೂಡಿನಲ್ಲಿ ಬೇಸಿಗೆಯ ಕಾರಣವಾಗಿ ಪ್ರತ್ಯೇಕವಾಗಿ ಮೂರು ನಾಗರಹಾವುಗಳು ಅಡಗಿ ಕುಳಿತಿದ್ದು, ಮನೆಯವರಿಗೆ ಆತಂಕ ಉಂಟು ಮಾಡಿತ್ತು. ಒಂದು ಮನೆಯಲ್ಲಿದ್ದ ನಾಗರಹಾವು ಬರೋಬ್ಬರಿ 21 ಮೊಟ್ಟೆಗಳನ್ನು ಇಟ್ಟುಕೊಂಡು ಅಲ್ಲೇ ವಾಸವಾಗಿತ್ತು. ಮೂರು ಹಾವುಗಳನ್ನು ಸಹ ಬಾಳೆಹೊನ್ನೂರಿನ ಉರಗ ಪ್ರೇಮಿ ಆಲ್ಬರ್ಟ್ ಅವರು ಹಿಡಿದು ಎಲೆಕಲ್ಲು ಮೀಸಲು ಅರಣ್ಯಕ್ಕೆ ಬಿಟ್ಟರು. ಕೋಳಿ ಗೂಡಿನಲ್ಲಿದ್ದ 21 ಹಾವಿನ ಮೊಟ್ಟೆಗಳನ್ನು ರಕ್ಷಣೆ ಮಾಡಿದ್ದು, ಉರಗ ಪ್ರೇಮಿ ಆಲ್ಬರ್ಟ್ ಅವರು ಕೊಂಡೊಯ್ದಿದ್ದು, ಅವುಗಳು ಮರಿ ಮಾಡಿದ ಬಳಿಕ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗುವುದು ಎಂದು ಸ್ಥಳೀಯರಾದ ವಿ.ಸಿ.ರಘುಪತಿ ಬಿದರೆ ಪತ್ರಿಕೆಗೆ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net