ಮಳೆ ಬರುವ ಮುನ್ನ ಶಾಲೆಗೆ ಹೋಗುವ ರಸ್ತೆ ದುರಸ್ತಿಪಡಿಸಿ

ಸರ್ಕಾರಿ ಪ್ರೌಢಶಾಲೆಗೆ ತೆರಳುವ ರಸ್ತೆ ಗುಂಡಿ ಬಿದ್ದು, ಕಲ್ಲು,ಮಣ್ಣು ಕಾಣಿಸುತ್ತಿರುವುದು.
ಸರ್ಕಾರಿ ಪ್ರೌಢಶಾಲೆಗೆ ತೆರಳುವ ರಸ್ತೆ ಗುಂಡಿ ಬಿದ್ದು, ಕಲ್ಲು,ಮಣ್ಣು ಕಾಣಿಸುತ್ತಿರುವುದು.
Published on
ಆಲ್ದೂರು: ಸಾರ್ವಜನಿಕರಿಗೆ ಭದ್ರತೆ ನೀಡುವ ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು ವಿದ್ಯೆ ಕಲಿಯಲು ಶಾಲೆಗೆ ಹೋಗುವ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಮಳೆಗಾಲದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಕೇಸರಿನಲ್ಲಿಯೇ ಸಾಗುವ ಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಹೋಗುವ ರಸ್ತೆ ಡಾಂಬರೀಕರಣವಾಗಿ 30 ವರ್ಷಗಳು ಕಳೆದಿವೆ. ಮುಖ್ಯರಸ್ತೆಯಿಂದ ಕೇವಲ 100 ಮೀಟರ್ ದೂರದಲ್ಲಿ ಶಾಲೆಗೆ ಸಾಗುವ ರಸ್ತೆ ನಿರ್ಮಿಸಿ ಕೊಡುವಂತೆ ಶಾಲೆ ಆಡಳಿತ ಮಂಡಳಿ ಜನಪ್ರತಿನಿಧಿಗಳಿಗೆ ಸಾಕಷ್ಟು ಬಾರಿ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಹೌದು ಪಟ್ಟಣದಲ್ಲಿರುವ ಏಕೈಕ ಸರ್ಕಾರಿ ಪ್ರೌಢಶಾಲೆ ಶಾಲೆಗೆ ಗ್ರಾಮೀಣ ಭಾಗದಿಂದ ನೂರಾರು ವಿದ್ಯಾರ್ಥಿಗಳು ಶಾಲೆಗೆ ಈ ಗುಂಡಿ ರಸ್ತೆಯಲ್ಲೇ ಸಾಗಬೇಕಿದೆ. ರಸ್ತೆಗೆ ಹಾಕಿರುವ ಡಾಂಬರ್ ಕಿತ್ತು ಹೋಗಿ ಜಲ್ಲಿ ಕಲ್ಲು ಕಾಣುತ್ತಿವೆ. ಮಳೆಗಾಲದಲ್ಲಿ ಶಾಲೆಗೆ ಬರುವ ವಿದ್ಯಾರ್ಥಿಗಳು ಕೆಸರಿನಲ್ಲೇ ನಡೆದುಕೊಂಡು ಸಾಗಬೇಕು.
ಈ ರಸ್ತೆಯ ಮೂಲಕ 100 ಮೀಟರ್ ಮುಂದೆ ಸಾಗಿದರೆ ಪೊಲೀಸ್ ಸಿಬ್ಬಂದಿ ವಸತಿ ಗೃಹಗಳಿವೆ. ಪ್ರತಿನಿತ್ಯ ಪೊಲೀಸ್ ಸಿಬ್ಬಂದಿಗಳು ಈ ಗುಂಡಿಮಯ ರಸ್ತೆಯಲ್ಲೇ ಸಾಗಬೇಕಿದೆ. ರಾತ್ರಿ ಪಾಳಿ ಕೆಲಸ ಮಾಡುವ ಸಿಬ್ಬಂದಿ ಬೈಕ್ ನಲ್ಲಿ ಸಾಗುವ ಸಂದರ್ಭದಲ್ಲಿ ಗುಂಡಿ ತಪ್ಪಿಸಲು ಹೋಗಿ ಆಯಾ ತಪ್ಪಿಬಿದ್ದು ಗಾಯಗೊಂಡಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿ ಕೂಡ ಈ ಸಮಸ್ಯೆಯಿಂದ ಹೊರತಾಗಿಲ್ಲ, ಗರ್ಭಿಣಿ ಮಹಿಳಾ ಪೊಲೀಸ್ ಸಿಬ್ಬಂದಿ ಈ ರಸ್ತೆಯಲ್ಲಿ ಸಾಗಲು ಹೆದರಿ ಬೈಕ್‌ಗಳಲ್ಲಿ ಸಂಚರಿಸುವುದನ್ನು ಬಿಟ್ಟಿದ್ದಾರೆ.
ವಸತಿ ನಿಲಯದಿಂದ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಲು ನಡೆದು ಕೊಂಡೆ ಸಾಗುವ ಪರಿಸ್ಥಿತಿನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲ. ಪಾಳು ಬಿದ್ದಿರುವ ಪ್ರವಾಸಿ ಮಂದಿರ, ರಸ್ತೆಯ ಎರಡೂ ಬದಿಗಳಲ್ಲಿ ಗಿಡ, ಗಂಟಿಗಳು ಬೆಳೆದು ನಿಂತಿವೆ. ಸಾರ್ವಜನಿಕರ ಸಮಸ್ಯೆಗೆ ಧ್ವನಿಯಾಗುವ ಪೊಲೀಸ್ ಸಿಬ್ಬಂದಿಗಳ ಸಮಸ್ಯೆಯನ್ನೇ ಕೇಳುವವರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net