ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದ್ದು, ಪ್ರಸ್ತುತ ಸೊಪ್ಪಿನಬೆಟ್ಟ ಎಂಬ ನೆಪ ಒಡ್ಡಿ ಹಕ್ಕುಪತ್ರ ನೀಡುತ್ತಿಲ್ಲ. ಇದರಿಂದ ಸಾವಿರಾರು ಅರ್ಜಿಗಳು ಬಾಕಿ ಉಳಿದಿದ್ದು, ರೈತರ ಕುಟುಂಬಗಳು ನೂರಾರು ವರ್ಷಗಳಿಂದ ಜಾನುವಾರುಗಳಿಗೆ ಸೊಪ್ಪು ತರಲು ಜಮೀನಿನ ಪಕ್ಕದ ಕಾಡುಜಾಗವನ್ನು ಬಳಸಿಕೊಳ್ಳುತ್ತಾ ಬಂದಿರುತ್ತಾರೆ. ಅದನ್ನು ಸೊಪ್ಪಿನ ಹಾಡ್ಯ ಎಂದು ಕರೆಯಾಗುತ್ತಿದ್ದು, ಅಧಿಕಾರಿಗಳು ಎಲ್ಲ ದಾಖಲೆಗಳಲ್ಲಿ ಸೊಪ್ಪಿನಬೆಟ್ಟ ಎಂದು ನಮೂದಿಸಿದ್ದಾರೆ ಎಂದು ದೂರಿದರು.