ರೇಣುಕನಗರ ಅಯ್ಯಪ್ಪಸ್ವಾಮಿ ದೀಪೋತ್ಸವಕ್ಕೆ ಚಾಲನೆ

ಬಾಳೆಹೊನ್ನೂರಿನ ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ 33ನೇ ವರ್ಷದ ಅನ್ನದಾನ, ದೀಪೋತ್ಸವ ಹಾಗೂ ಉತ್ಸವಕ್ಕೆ ಚಾಲನೆ ದೊರೆಯಿತು. ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್, ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ ಮತ್ತಿತರರಿದ್ದರು.
ಬಾಳೆಹೊನ್ನೂರಿನ ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ 33ನೇ ವರ್ಷದ ಅನ್ನದಾನ, ದೀಪೋತ್ಸವ ಹಾಗೂ ಉತ್ಸವಕ್ಕೆ ಚಾಲನೆ ದೊರೆಯಿತು. ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್, ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ ಮತ್ತಿತರರಿದ್ದರು.
Published on
ಬಾಳೆಹೊನ್ನೂರು: ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ 33ನೇ ವರ್ಷದ ಅನ್ನದಾನ, ದೀಪೋತ್ಸವ ಹಾಗೂ ಅಯ್ಯಪ್ಪ ಉತ್ಸವ ಕಾರ್ಯಕ್ರಮಕ್ಕೆ ಗುರುವಾರ ವಿಧ್ಯುಕ್ತ ಚಾಲನೆ ದೊರೆಯಿತು.
ರೇಣುಕನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ 33 ವರ್ಷಗಳಿಂದ ನೆರವೇರಿಸಿಕೊಂಡು ಬರುತ್ತಿರುವ ಅಯ್ಯಪ್ಪಸ್ವಾಮಿ ಉತ್ಸವದ ಅಂಗವಾಗಿ ಗುರುವಾರ ಬೆಳಗ್ಗೆ ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್ ನೇತೃತ್ವದಲ್ಲಿ ಪಟ್ಟಣದ ಭದ್ರಾನದಿಯಿಂದ ಕನ್ನಿಸ್ವಾಮಿಗಳು ಆಗ್ರೋದಕ ತರುವುದರೊಂದಿಗೆ ಕಾರ್ಯಕ್ರಮಗಳು ಆರಂಭವಾಯಿತು. ನಂತರ ಉಷಾ ಪೂಜೆ, ಶ್ರೀ ಸ್ವಾಮಿಯವರ ಅಷ್ಟೋತ್ತರ, ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಕಾರ್ಯ ನಡೆಯಿತು.  
ಅಯ್ಯಪ್ಪಸ್ವಾಮಿ ದೀಪೋತ್ಸವ ಅಂಗವಾಗಿ ಪ್ರಸನ್ನ ಗಣಪತಿ ಕಲಾತಂಡದ ಕಲಾವಿದರಾದ ಶ್ರುತಿ ಸುನೀಲ್ ಪ್ರಭು, ಪ್ರಕಾಶ್ ಆಚಾರ್ಯ, ಸುಧಾಕರ್, ಲೀಲಾ ರವಿಕುಮಾರ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಸಂಜೆ ರೇಣುಕನಗರದ ಗಣಪತಿ ದೇವಸ್ಥಾನದಿಂದ ಹೊರಟ ಶ್ರೀ ಅಯ್ಯಪ್ಪ ಸ್ವಾಮಿಯ ರಾಜಬೀದಿ ಉತ್ಸವವು ಕೊಪ್ಪಲು ಚೌಡೇಶ್ವರಿ ದೇವಸ್ಥಾನದವರೆಗೆ ಸಾಗಿ, ಬಳಿಕ ಎನ್.ಆರ್.ಪುರ ರಸ್ತೆಯ ಕೆರೆ ಚೌಡೇಶ್ವರಿ ದೇವಸ್ಥಾನದ ಮೂಲಕ ಸಾಗಿ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ನೂರಾರು ಮಾಲಾಧಾರಿಗಳು, ಭಕ್ತರು ಪಾಲ್ಗೊಂಡಿದ್ದರು. 
 ಉತ್ಸವದಲ್ಲಿ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ, ಗೌರವಾಧ್ಯಕ್ಷ ಎಂ.ಆರ್.ರವೀಂದ್ರ, ಪ್ರಧಾನ ಕಾರ್ಯದರ್ಶಿ ರವೀಂದ್ರಾಚಾರ್, ಖಜಾಂಚಿ ಬಿ.ಜಗದೀಶ್ಚಂದ್ರ, ಉಪಾಧ್ಯಕ್ಷ ನಾಗರಾಜ್ ದುರ್ಗಾಂಭ, ಸಹದೇವ್ ಸಾಗರ್, ರವಿ, ಸಹ ಕಾರ್ಯದರ್ಶಿ ಚೇತನ್ ಆಚಾರ್ಯ, ರಾಕೇಶ್, ರಮೇಶ್ ಕೋಟಿ, ಸಹ ಖಜಾಂಚಿ ಸಂದೀಪ್ ಶೆಟ್ಟಿ, ಸಂಚಾಲಕರಾದ ಎಚ್.ಆರ್.ಆನಂದ್, ಪ್ರಭಾಕರ್ ಪ್ರಣಸ್ವಿ, ಸುರೇಂದ್ರ ಕಿಣಿ, ಪ್ರಕಾಶ್ ಬನ್ನೂರು, ನಟರಾಜ್, ಮದನ್, ಮಂಜುನಾಥ್ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net