ರಸ್ತೆ ಬದಿ ವ್ಯಾಪಾರಿಗಳ ತೆರವು

 ಕಡೂರಿನ ಎಪಿಎಂಸಿ ಪ್ರವೇಶದ್ವಾರದ ರಸ್ತೆ ಬದಿ ತರಕಾರಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ಪಿಎಸ್‌ಐ ಸಜಿತ್ ಕುಮಾರ್ ತಿಳಿವಳಿಕೆ ನೋಟಿಸ್ ನೀಡಿದರು. ರೇಣುಕಾ ಪ್ರಸಾದ್, ರಾಘವೇಂದ್ರ, ಮಧು ಇದ್ದರು.
ಕಡೂರಿನ ಎಪಿಎಂಸಿ ಪ್ರವೇಶದ್ವಾರದ ರಸ್ತೆ ಬದಿ ತರಕಾರಿ ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ಪಿಎಸ್‌ಐ ಸಜಿತ್ ಕುಮಾರ್ ತಿಳಿವಳಿಕೆ ನೋಟಿಸ್ ನೀಡಿದರು. ರೇಣುಕಾ ಪ್ರಸಾದ್, ರಾಘವೇಂದ್ರ, ಮಧು ಇದ್ದರು.
Published on
ಕಡೂರು: ಸುಗಮ ಸಂಚಾರಕ್ಕೆ ಅಡಚಣೆಯಾಗುವಂತೆ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದವರನ್ನು ಪೊಲೀಸರು ಸೋಮವಾರ ತೆರವುಗೊಳಿಸಿದರು. ಪ್ರತಿ ಸೋಮವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುವ ಸಂತೆ ಮೈದಾನದಲ್ಲಿ ಎಪಿಎಂಸಿ ಪ್ರವೇಶದ್ವಾರದಿಂದ ಬಸವೇಶ್ವರ ವೃತ್ತದವರೆಗೂ ತರಕಾರಿ, ಹಣ್ಣುಗಳು, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳನ್ನು ರಸ್ತೆಯ ಎರಡೂ ಬದಿ ಹಾಕಿಕೊಂಡು ವ್ಯಾಪಾರ ಮಾಡುವವರು ಹೆಚ್ಚಾಗಿತ್ತು. ಇದರಿಂದ ಪ್ರತಿ ಸೋಮವಾರ ರಸ್ತೆಯಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲಾಗದ ಪರಿಸ್ಥಿತಿ ಎದುರಾಗುತ್ತಿತ್ತು. ಇದನ್ನು ಮನಗಂಡ ಪೊಲೀಸರು ರಸ್ತೆ ಬದಿ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡುತ್ತಿರುವವರು ಮತ್ತೆ ರಸ್ತೆಬದಿ ವ್ಯಾಪಾರ ಮಾಡಿದರೆ ದಂಡ ವಿಧಿಸುವ ಎಚ್ಚರಿಕೆ ನೀಡಿ ಅಂಗಡಿಗಳನ್ನು ತೆರವುಗೊಳಿಸಿದರು. 
 ಪಿಎಸ್‌ಐ ಸಜಿತ್ ಕುಮಾರ್ ಮಾತನಾಡಿ, ರೈತರು, ವ್ಯಾಪಾರಿಗಳು ಮಾರಾಟ ಮಾಡಲು ನಮ್ಮ ಆಕ್ಷೇಪಣೆಯಿಲ್ಲ. ಎಪಿಎಂಸಿಯ ವಿಶಾಲ ಆವರಣದಲ್ಲಿ ವ್ಯಾಪಾರ ಮಾಡಲು ಅಡ್ಡಿಯಿಲ್ಲ. ಆದರೆ ಅನಧಿಕೃತವಾಗಿ ರಸ್ತೆ ಪಾದಚಾರಿ ಮಾರ್ಗವನ್ನು ವ್ಯಾಪಾರಕ್ಕಾಗಿ ಉಪಯೋಗಿಸಿ ಸಾರ್ವಜನಿಕರಿಗೆ ತೊಂದರೆ ಮಾಡುವುದು ಸರಿಯಲ್ಲ. ಈ ಕುರಿತು ವ್ಯಾಪಾರಿಗಳಿಗೆ ತಿಳಿವಳಿಕೆ ನೀಡಿ ಸೂಚನೆ ನೀಡಲಾಗಿದೆ.  ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ಮಾತ್ರ ನಮ್ಮ ಉದ್ದೇಶ ಎಂದರು. ಸಿಬ್ಬಂದಿ ರೇಣುಕಾ ಪ್ರಸಾದ್, ರಾಘವೇಂದ್ರ, ಮಧು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net