_1775648455675.webp?w=480&auto=format%2Ccompress&fit=max)
_1775648455675.webp?w=480&auto=format%2Ccompress&fit=max)
ತರೀಕೆರೆ: ಹಳಿಯೂರು ಗ್ರಾಮದ ಶ್ರೀಬಸವೇಶ್ವರ ಸ್ವಾಮಿ ದೇಗುಲಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ನಂತರ ಭಕ್ತರೊಬ್ಬರ ಮನೆಗೆ ತೆರಳಿ ಇಷ್ಟಲಿಂಗ ಪೂಜೆ ನೆರವೇರಿಸಿದರು. ಯಡೆಯೂರು ಶ್ರೀ ರೇಣುಕ ಶಿವಾಚಾರ್ಯರು, ಹುಣಸಘಟ್ಟ ಹಾಲುಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯರು, ಬೀರೂರು ರಂಭಾಪುರಿ ಶಾಖಾ ಮಠದ ಶ್ರೀ ರುದ್ರಮುನಿ ಶಿವಾಚಾರ್ಯರು, ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯರು, ಮಾಜಿ ಶಾಸಕ ಡಿ.ಎಸ್.ಸುರೇಶ್, ಗ್ರಾಮಸ್ಥರಾದ ರುದ್ರಪ್ಪ, ಹಿಮರಾಜು, ವೇದಮೂರ್ತಿ, ಅಮೃತಾಪುರ ದೇಗುಲ ಅರ್ಚಕ ಎಸ್.ಆರ್.ಪ್ರಭುಸ್ವಾಮಿ ಮತ್ತಿತರರಿದ್ದರು.