ರಂಭಾಪುರಿ ಶ್ರೀಗಳ ಏಪ್ರಿಲ್ ಪ್ರವಾಸ

ರಂಭಾಪುರಿ ಶ್ರೀ
ರಂಭಾಪುರಿ ಶ್ರೀ
Published on
ಬಾಳೆಹೊನ್ನೂರು: ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಏಪ್ರಿಲ್ ತಿಂಗಳಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ ತಿಳಿಸಿದ್ದಾರೆ.
ಏ.2ರಂದು ಪೌರ್ಣಿಮೆ ಅಂಗವಾಗಿ ಬಾಳೆಹೊನ್ನೂರು ಪೀಠದಲ್ಲಿ ವಾಸ್ತವ್ಯವಿದ್ದು ಭಕ್ತರಿಗೆ ದರ್ಶನಾಶೀರ್ವಾದ ನೀಡುವರು. 4ರಂದು ಬೆಳಗ್ಗೆ 11 ಗಂಟೆಗೆ ಚನ್ನಗಿರಿಯಲ್ಲಿ ನೂತನ ಹಿರೇಮಠದ ಕಟ್ಟಡ ಉದ್ಘಾಟನೆ, ಧರ್ಮ ಸಮಾರಂಭ, ಸಂಜೆ 5 ಗಂಟೆಗೆ ಶಿವಮೊಗ್ಗ ತಾಲೂಕು ವೀರಣ್ಣನ ಬೆನವಳ್ಳಿಯಲ್ಲಿ ಧರ್ಮ ಸಮಾರಂಭ, 5ರಂದು ಜಗಳೂರಿನಲ್ಲಿ ಶ್ರೀ ರೇಣುಕಾಚಾರ್ಯರ ಜಯಂತಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
6ರಂದು ಅಜ್ಜಂಪುರ ತಾಲೂಕು ಚನ್ನಾಪುರದಲ್ಲಿ ರೇಣುಕಾಚಾರ್ಯ ಜಯಂತಿ ಸಮಾರಂಭ, 7ರಂದು ತರೀಕೆರೆ ತಾಲೂಕು ಹಳೆಯೂರಿನಲ್ಲಿ ಇಷ್ಟಲಿಂಗ ಪೂಜೆ, 8ರಂದು ಶಿಗ್ಗಾವಿ ತಾಲೂಕು ಅರಟಾಳ ಗ್ರಾಮದಲ್ಲಿ ಧರ್ಮ ಸಮಾರಂಭ, 9ರಂದು ಸಿಂದಗಿ ತಾಲೂಕು ಕನ್ನೊಳ್ಳಿಯಲ್ಲಿ ಪ್ರವಚನ ಸಮಾರಂಭ ಉದ್ಘಾಟನೆ, 11ರಂದು ಆಲಮೇಲ ತಾಲೂಕಿನ ಮೊರಟಗಿಯಲ್ಲಿ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನ ಕಳಸಾರೋಹಣ ಸಮಾರಂಭದ ಸಾನ್ನಿಧ್ಯ ವಹಿಸುವರು.
12 ಮತ್ತು 13ರಂದು ಮಹಾರಾಷ್ಟ್ರದ ವೇಳಾಪುರದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ, 15ರಂದು ಸುರಪುರ ತಾಲೂಕು ದೇವಾಪುರದಲ್ಲಿ ನೂತನ ಶಾಲಾ ಕಟ್ಟಡ ಉದ್ಘಾಟನೆ, 17ರಂದು ಚನ್ನಗಿರಿ ತಾಲೂಕು ಮೇಳನಾಯಕನಕಟ್ಟಿಯಲ್ಲಿ ಇಷ್ಟಲಿಂಗ ಪೂಜೆ, 18ರಂದು ಶಿಕಾರಿಪುರದಲ್ಲಿ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಳ್ಳುವರು.  
19ರಂದು ದಾವಣಗೆರೆ ತಾಲೂಕು ದೊಗ್ಗಳ್ಳಿಯಲ್ಲಿ ಕರಿಯಮ್ಮ ದೇವಸ್ಥಾನ ಉದ್ಘಾಟನೆ, 20ರ ಬೆಳಗ್ಗೆ 10 ಗಂಟೆಗೆ ಹರಿಹರ ತಾಲೂಕು ಮಲೆಬೆನ್ನೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಷ್ಟಲಿಂಗ ಪೂಜೆ, ಅಂದು ಸಂಜೆ 5 ಗಂಟೆಗೆ ಚನ್ನಗಿರಿ ತಾಲೂಕು ಚಿರದೋಣಿಯಲ್ಲಿ ಧರ್ಮ ಜಾಗೃತಿ ಸಮಾರಂಭ, 21ರಂದು ಚಿರದೋಣಿಯಲ್ಲಿ ವೀರಭದ್ರೇಶ್ವರ ಮೂರ್ತಿ ಪ್ರತಿಷ್ಠಾಪನೆ, 22ರ ಬೆಳಗ್ಗೆ 11 ಗಂಟೆಗೆ ಬೈಲಹೊಂಗಲ ತಾಲೂಕು ಸಂಗೊಳ್ಳಿಯಲ್ಲಿ ಗ್ರಾಮದೇವತೆ ಕಳಸಾರೋಹಣ, ಸಂಜೆ 5 ಗಂಟೆಗೆ ಮುಂಡರಗಿ ತಾಲೂಕು ಬಸಾಪುರದಲ್ಲಿ ಪುರ ಪ್ರವೇಶ-ಧರ್ಮ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. 
23ರಂದು ಹಗರಿಬೊಮ್ಮನಹಳ್ಳಿ ತಾಲೂಕು ಗಿರಿಗೊಂಡನಹಳ್ಳಿಯಲ್ಲಿ ದೇವಸ್ಥಾನ ಉದ್ಘಾಟನೆ, 24ರಂದು ಗೌರಿಬಿದನೂರು ತಾಲೂಕು ಗುಡಿಬಂಡೆಯಲ್ಲಿ ಇಷ್ಟಲಿಂಗ ಪೂಜೆ, 25ರಂದು ಬೆಂಗಳೂರು ರೇಣುಕಾಚಾರ್ಯ ವಿದ್ಯಾಸಂಸ್ಥೆಯಲ್ಲಿ ರೇಣುಕಾಚಾರ್ಯ ಜಯಂತಿ, 26ರಂದು ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ಕೋಲ್ಡ್ ಸ್ಟೋರೇಜ್ ಉದ್ಘಾಟನೆ, 27, 28ರಂದು ಹುಬ್ಬಳ್ಳಿ ತಾಲೂಕು ಸುಳ್ಳ ಗ್ರಾಮದಲ್ಲಿ ಮಂಗಲ ಭವನ ಉದ್ಘಾಟನೆ, 29ರಂದು ಶಿವಮೊಗ್ಗದಲ್ಲಿ ಶಿವಾಲಯ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net