ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ

ಕಡೂರಿನ ಸಖರಾಯಪಟ್ಟಣದ ಕಲ್ಮರುಡೇಶ್ವರ ಬಡಾವಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ನಡೆಯಿತು. ದಾಕ್ಷಯಣಮ್ಮ, ಉಮೇಶ್, ರಘು, ಕವಿತಾ, ನಟರಾಜು, ಅಶೋಕ್, ಉಷಾ, ಸುಚಿತ್ರಾ, ಕೀರ್ತಿ ಇದ್ದರು.
ಕಡೂರಿನ ಸಖರಾಯಪಟ್ಟಣದ ಕಲ್ಮರುಡೇಶ್ವರ ಬಡಾವಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ನಡೆಯಿತು. ದಾಕ್ಷಯಣಮ್ಮ, ಉಮೇಶ್, ರಘು, ಕವಿತಾ, ನಟರಾಜು, ಅಶೋಕ್, ಉಷಾ, ಸುಚಿತ್ರಾ, ಕೀರ್ತಿ ಇದ್ದರು.
Published on
ಕಡೂರು: ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಸರ್ಕಾರಿ ಶಾಲೆಗಳು ಮಾಡುತ್ತಿವೆ ಎಂದು ಅಕ್ಷರದಾಸೋಹ ಸಹಾಯಕ ನಿರ್ದೇಶಕ ದೇವರಾಜ್ ತಿಳಿಸಿದರು.
ಸಖರಾಯಪಟ್ಟಣದ ಕಲ್ಮುರಡೇಶ್ವರ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಮರ್ಪಕ ಶಿಕ್ಷಣ ಒದಗಿಸಲು ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದರಲ್ಲೂ ಕಡಿಮೆಯಿಲ್ಲ ಎಂದರು. 
ಮುಖ್ಯಶಿಕ್ಷಕ ರಾಜು ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಹಕಾರದಿಂದ ಪ್ರಥಮವಾಗಿ ನಮ್ಮ ಶಾಲೆಯಲ್ಲಿ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಅರಿಶಿನಗುಪ್ಪೆ ಶಾಲೆ ಮುಖ್ಯಶಿಕ್ಷಕ ಚಂದ್ರಪ್ಪ ಮಾತನಾಡಿ, ಶಾಲೆಯಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿದ ತೃಪ್ತಿ ಇದೆ ಎಂದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಮಾತನಾಡಿ, ಕಲ್ಮರಡಿಮಠದ ಶಾಲೆ ಯಾವುದೇ ಖಾಸಗಿ ಶಾಲೆಗೂ ಕಡಿಮೆಯಿಲ್ಲ. ಇದು ಸರ್ವ ಜನಾಂಗೀಯ ಶಾಂತಿಯ ತೋಟವಾಗಿ ಮಾರ್ಪಟ್ಟಿದೆ ಎಂದರು. ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಾದ ಚಂದ್ರಪ್ಪ ಮತ್ತು ಶೋಭಾ ಅವರನ್ನು ಹಿರಿಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಗುರುವಂದನೆ ಸಲ್ಲಿಸಿದರು. 
ಗ್ರಾಪಂ ಮಾಜಿ ಅಧ್ಯಕ್ಷೆ ದಾಕ್ಷಾಯಣಮ್ಮ, ಇಸಿಒ ಉಮೇಶ್, ಸಿಆರ್‌ಪಿ ರಘು, ಕವಿತಾ, ನಟರಾಜು, ಶಿಕ್ಷಕರ ಸಂಘದ ಅಶೋಕ್, ಎಸ್‌ಡಿಎಂಸಿ ಅಧ್ಯಕ್ಷೆ ಉಷಾ, ಸುಚಿತ್ರಾ, ಕೀರ್ತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net