ಪಿಯುಸಿ ಶಿಕ್ಷಣ ಭವಿಷ್ಯ ನಿರ್ಮಾಣಕ್ಕೆ ದಾರಿ

ಶೃಂಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿ ಆಶ್ವಿತಾ ಮತ್ತು ತಾಯಿಯನ್ನು ಗೌರವಿಸಲಾಯಿತು. ಎಚ್.ಕೆ.ಸುಬ್ರಹ್ಮಣ್ಯ, ಪ್ರಕಾಶ್, ವಾಸುದೇವ್, ವೀಣಾ, ಮಾನಸಾ, ಶೋಭಾ ಇತರರಿದ್ದರು.
ಶೃಂಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿ ಆಶ್ವಿತಾ ಮತ್ತು ತಾಯಿಯನ್ನು ಗೌರವಿಸಲಾಯಿತು. ಎಚ್.ಕೆ.ಸುಬ್ರಹ್ಮಣ್ಯ, ಪ್ರಕಾಶ್, ವಾಸುದೇವ್, ವೀಣಾ, ಮಾನಸಾ, ಶೋಭಾ ಇತರರಿದ್ದರು.
Published on
ಶೃಂಗೇರಿ: ಅವಕಾಶಗಳು ಬಂದಾಗ ಸದುಪಯೋಗಪಡಿಸಿಕೊಂಡು ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂಬುದಕ್ಕೆ ಗ್ರಾಮೀಣ ಪ್ರತಿಭೆಯಾದ ಕಾಲೇಜಿನ ವಿದ್ಯಾರ್ಥಿನಿ ಅಶ್ವಿತಾ ಜಪಾನ್ ಪ್ರವಾಸ ಮಾಡಿಬಂದಿರುವುದು ನಿದರ್ಶನ ಎಂದು ಹೊಳೆಕೊಪ್ಪ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶಿವಕುಮಾರ್ ಹೇಳಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಕಾಲೇಜಿನಲ್ಲಿಯೂ ಉತ್ತಮ ಪಾಠ ನಡೆಯುತ್ತಿದ್ದರೂ ಖಾಸಗಿ ಕಾಲೇಜುಗಳ ಮೇಲೆ ವ್ಯಾಮೋಹ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಪಿಯುಸಿಯನ್ನು ಗಂಭೀರವಾಗಿ ಪರಿಗಣಿಸಿ, ವ್ಯಾಸಂಗ ಮಾಡಬೇಕು. ಇದು ಭವಿಷ್ಯದ ದಾರಿಯನ್ನು ತೋರಿಸುತ್ತದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಪುದುವಾಳ್ ಮಾತನಾಡಿ, ಕಾಲೇಜು ಎಲ್ಲ ಕ್ಷೇತ್ರದಲ್ಲೂ ಸಾಧನೆ ಮಾಡಿದೆ. ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾಗಿರುವ 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಿದ್ದು ಕಾಲೇಜು ಸಮಿತಿಯಿಂದ ಶುಲ್ಕ ಭರಿಸಲಾಗುತ್ತದೆ ಎಂದರು.
ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ವಿದ್ಯಾರ್ಥಿ ವಿನಿಮಯ ಯೋಜನೆಯಡಿ ಜಪಾನ್‌ಗೆ ಅಧ್ಯಯನ ಪ್ರವಾಸ ಕೈಗೊಂಡ ಆಶ್ವಿತಾ ಅವರನ್ನು ಗೌರವಿಸಲಾಯಿತು.
 ಕಾಲೇಜು ಸಮಿತಿ ಸದಸ್ಯರಾದ ಎಚ್.ಕೆ.ಸುಬ್ರಹ್ಮಣ್ಯ, ವೀಣಾ, ಮಾನಸಾ, ಪ್ರಾಧ್ಯಾಪಕರಾದ ಪೂರ್ಣಿಮಾ, ಪ್ರಕಾಶ್, ವಾಸುದೇವ್, ಮಹೇಶ್ ಕಾಕತ್ಕರ್, ಶೋಭಾ, ಝರೀನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net