ವಿದ್ಯಾರ್ಥಿಗೆ ನ್ಯಾಯ ಕೊಡಿಸುವ ಭರವಸೆ

ಶೃಂಗೇರಿಯ ಬಿಆರ್‌ವಿ ಪ್ರೌಢಶಾಲೆ ವಿದ್ಯಾರ್ಥಿ ರಾಮದತ್ತ ಶರ್ಮ ಅವರ ಮನೆಗೆ ತೆರಳಿ ಕಡಿಮೆ ಅಂಕ ಬಂದಿರುವ ಬಗ್ಗೆ ನ್ಯಾಯ ದೊರಕಿಸಿಕೊಡುವುದಾಗಿ ಶಾಲಾ ಸಮಿತಿ ಭರವಸೆ ನೀಡಿತು. ಅಂಬಲಮನೆ ಸುಬ್ರಹ್ಮಣ್ಯ, ತ್ಯಾಗರಾಜ್, ಮಹೇಶ್ವರಪ್ಪ ಇದ್ದರು.
ಶೃಂಗೇರಿಯ ಬಿಆರ್‌ವಿ ಪ್ರೌಢಶಾಲೆ ವಿದ್ಯಾರ್ಥಿ ರಾಮದತ್ತ ಶರ್ಮ ಅವರ ಮನೆಗೆ ತೆರಳಿ ಕಡಿಮೆ ಅಂಕ ಬಂದಿರುವ ಬಗ್ಗೆ ನ್ಯಾಯ ದೊರಕಿಸಿಕೊಡುವುದಾಗಿ ಶಾಲಾ ಸಮಿತಿ ಭರವಸೆ ನೀಡಿತು. ಅಂಬಲಮನೆ ಸುಬ್ರಹ್ಮಣ್ಯ, ತ್ಯಾಗರಾಜ್, ಮಹೇಶ್ವರಪ್ಪ ಇದ್ದರು.
Published on
ಶೃಂಗೇರಿ: ಪಟ್ಟಣದ ರಾಮಕೃಷ್ಣ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ರಾಮದತ್ತ ಶರ್ಮ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯದಲ್ಲಿ ಶೇ.90 ಅಂಕ ಗಳಿಸಿದ್ದು ಇಂಗ್ಲಿಷ್‌ನಲ್ಲಿ ಕಡಿಮೆ ಅಂಕ ಲಭಿಸಿದ್ದು ವಿದ್ಯಾರ್ಥಿ ಹಾಗೂ ಪಾಲಕರು ಆತಂಕಗೊಂಡಿದ್ದಾರೆ.
ಈಗಾಗಲೇ ಇಂಗ್ಲಿಷ್ ಪತ್ರಿಕೆಯ ಸ್ಕ್ಯಾನ್ ಪತ್ರಿಕೆ ತರಿಸಿದ್ದು ಅದರಲ್ಲಿ 72 ಅಂಕ ಎಂದು ನಮೂದಿಸಲಾಗಿದೆ. ಲಿತಾಂಶದಲ್ಲಿ ಕೇವಲ 28 ಅಂಕ ಪರಿಗಣಿಸಲಾಗಿದೆ. ಇದರಿಂದ ವಿದ್ಯಾರ್ಥಿ 44 ಅಂಕದಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಪರೀಕ್ಷಾ ಮಂಡಳಿಗೆ ದೂರು ನೀಡಲಾಗಿದೆ. ವಿದ್ಯಾರ್ಥಿಯ ಮನೆಗೆ ತೆರಳಿದ ಶಾಲಾ ಸಮಿತಿಯವರು ಧೈರ್ಯ ತುಂಬಿ, ಇಲಾಖೆ ಮೂಲಕ ನ್ಯಾಯ ಕೊಡಿಸುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ತ್ಯಾಗರಾಜ್, ಅಂಬಲಮನೆ ಸುಬ್ರಹ್ಮಣ್ಯ, ಮುಖ್ಯ ಶಿಕ್ಷಕ ಮಹೇಶ್ವರಪ್ಪ, ಗ್ರಾಮಸ್ಥರಾದ ಕೆ.ಆರ್.ವೆಂಕಟೇಶ್, ಮನೋಜ್‌ಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net