ಕೇರಳಂ ಹಿಂದೂ ಸಮಾಜದಿಂದ ಪಿತೃ ತರ್ಪಣ

ಎನ್.ಆರ್.ಪುರದ ಕೇರಳಂ ಹಿಂದೂ ಸಮಾಜದಿಂದ ಕೇರಳಂ ಸಂಪ್ರದಾಯದಂತೆ ರಾವೂರಿನ ಭದ್ರಾ ಹಿನ್ನೀರಿನಲ್ಲಿ ಪಿತೃ ತರ್ಪಣ ಕಾರ್ಯಕ್ರಮವು ಪುರೋಹಿತರ ನೇತೃತ್ವದಲ್ಲಿ ನಡೆಯಿತು.
ಎನ್.ಆರ್.ಪುರದ ಕೇರಳಂ ಹಿಂದೂ ಸಮಾಜದಿಂದ ಕೇರಳಂ ಸಂಪ್ರದಾಯದಂತೆ ರಾವೂರಿನ ಭದ್ರಾ ಹಿನ್ನೀರಿನಲ್ಲಿ ಪಿತೃ ತರ್ಪಣ ಕಾರ್ಯಕ್ರಮವು ಪುರೋಹಿತರ ನೇತೃತ್ವದಲ್ಲಿ ನಡೆಯಿತು.
Published on

ಎನ್.ಆರ್.ಪುರ: ಕೇರಳಂ ಹಿಂದೂ ಸಮಾಜದಿಂದ ಕೇರಳಂ ಸಂಪ್ರದಾಯದಂತೆ ರಾವೂರಿನ ಭದ್ರಾ ಹಿನ್ನೀರಿನಲ್ಲಿ ಪಿತೃ ತರ್ಪಣ ಕಾರ್ಯಕ್ರಮ ಪುರೋಹಿತರ ನೇತೃತ್ವದಲ್ಲಿ ಬುಧವಾರ ನಡೆಯಿತು. ಶೆಟ್ಟಿಕೊಪ್ಪ ಗುರುಸ್ವಾಮಿ ಸೌಂದರ್ಯ ರಾಜನ್ ಹಾಗೂ ಕೆರೆಮನೆ ಗುರುಸ್ವಾಮಿ ರಾಜನ್ ಅವರು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪಿತೃ ತರ್ಪಣ ನಡೆಸಿಕೊಟ್ಟರು. ಪಿತೃ ತರ್ಪಣ ಕಾರ್ಯದಲ್ಲಿ ಎನ್.ಆರ್.ಪುರ, ತೀರ್ಥಹಳ್ಳಿ, ತರೀಕೆರೆ, ಶಿವಮೊಗ್ಗ, ಬಾಳೆಹೊನ್ನೂರು ಭಾಗದ ಕೇರಳ ಹಿಂದೂ ಸಮಾಜದವರು ಭಾಗವಹಿಸಿದ್ದರು. ಎನ್.ಆರ್.ಪುರ ತಾಲೂಕು ಕೇರಳಂ ಹಿಂದೂ ಸಮಾಜ ಸಂಘದ ಅಧ್ಯಕ್ಷ ಪಿ.ಆರ್.ಸುಕುಮಾರ್, ಕಾರ್ಯದರ್ಶಿ ಕೆ.ಎನ್.ಅಶೋಕ್, ಖಜಾಂಚಿ ಮುರಳಿ, ಉಪಾಧ್ಯಕ್ಷರಾದ ಗಿರೀಶ್, ಸುಧಾಕರ ಆಚಾರ್, ಸಹ ಕಾರ್ಯದರ್ಶಿ ಪಿ.ಕೆ.ಸಜಿ, ನಿರ್ದೇಶಕರಾದ ಭಾರತಿ ಅರವಿಂದ ಆಚಾರ್, ಸುನೀತಾ, ಲತಾ, ಸುಜಾತಾ ಇತರರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net