ಶಿಕ್ಷಣ, ಸಂಸ್ಕಾರದಿಂದ ವ್ಯಕ್ತಿತ್ವ ನಿರ್ಮಾಣ

ಎನ್.ಆರ್.ಪುರದ ಡಿಸಿಎಂಸಿ ಶಾಲೆಯಲ್ಲಿ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಸ್ಪೂರ್ತಿ ಕಾರ್ಯಕ್ರಮದಲ್ಲಿ  ವಾಗ್ಮಿ ಎನ್.ಆರ್.ದಾಮೋದರಶರ್ಮ ಅವರನ್ನು ಸನ್ಮಾನಿಸಲಾಯಿತು. ರಾಜಗೋಪಾಲಜೋಷಿ, ಡಾ.ಕೆ.ಪಿ.ಅಂಶುಮಂತ್, ಕಣಿವೆ ವಿನಯ್, ಎಲ್.ಎಂ.ಸತೀಶ್, ಎಸ್.ಎಸ್.ಶಾಂತಕುಮಾರ್, ಕಟಗಳಲೆ ಲೋಕೇಶ್, ಪಿ.ಕೆ.ಬಸವರಾಜ್, ಪದ್ಮಾ ರಮೇಶ್, ರಕ್ಷಿತ್ ಇದ್ದರು.
ಎನ್.ಆರ್.ಪುರದ ಡಿಸಿಎಂಸಿ ಶಾಲೆಯಲ್ಲಿ ಏರ್ಪಡಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಸ್ಪೂರ್ತಿ ಕಾರ್ಯಕ್ರಮದಲ್ಲಿ ವಾಗ್ಮಿ ಎನ್.ಆರ್.ದಾಮೋದರಶರ್ಮ ಅವರನ್ನು ಸನ್ಮಾನಿಸಲಾಯಿತು. ರಾಜಗೋಪಾಲಜೋಷಿ, ಡಾ.ಕೆ.ಪಿ.ಅಂಶುಮಂತ್, ಕಣಿವೆ ವಿನಯ್, ಎಲ್.ಎಂ.ಸತೀಶ್, ಎಸ್.ಎಸ್.ಶಾಂತಕುಮಾರ್, ಕಟಗಳಲೆ ಲೋಕೇಶ್, ಪಿ.ಕೆ.ಬಸವರಾಜ್, ಪದ್ಮಾ ರಮೇಶ್, ರಕ್ಷಿತ್ ಇದ್ದರು.
Published on
ಎನ್.ಆರ್.ಪುರ: ಹಸಿದ ಹೊಟ್ಟೆಗೆ ಅನ್ನ ಸಿಕ್ಕಿದರೆ ಹೊಟ್ಟೆ ತುಂಬುತ್ತದೆ. ಜ್ಞಾನದ ಹಸಿವಿಗೆ ಮೌಲ್ಯಯುತ ಶಿಕ್ಷಣ, ಸಂಸ್ಕಾರ, ಬುದ್ಧಿವಂತಿಕೆ, ತಿಳಿವಳಿಕೆ ದೊರೆತರೆ ಅಂತಹವರು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬಾಳುತ್ತಾರೆ ಎಂದು ಮೂಡಬಿದ್ರೆಯ ವಾಗ್ಮಿ ಎನ್.ಆರ್.ದಾಮೋದರಶರ್ಮ ತಿಳಿಸಿದರು.
 ಶನಿವಾರ ಪಟ್ಟಣದ ಡಿಸಿಎಂಸಿ ಶಾಲಾ ಆವರಣದಲ್ಲಿ ರೋಟರಿ ಕ್ಲಬ್, ಡಿಸಿಎಂಸಿ ಪ್ರೌಢಶಾಲೆ, ಶಿಕ್ಷಣ ಇಲಾಖೆ, ಶೃಂಗೇರಿ ಶಾರದಾ ಪೀಠ, ತಾಲೂಕು ಒಕ್ಕಲಿಗರ ಸಂಘ, ಹಳೇ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ತಾಲೂಕಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪರೀಕ್ಷೆ ಎದುರಿಸುವುದು ಹೇಗೆ?, ಸಂಸ್ಕಾರ, ಸಂಸ್ಕೃತಿಯೊಂದಿಗೆ ಶಿಕ್ಷಣದ ಬಗ್ಗೆ ಉಪನ್ಯಾಸ ನೀಡಿದರು.
 ನಮ್ಮ ಬುದ್ಧಿವಂತಿಕೆಯನ್ನು ಒಳ್ಳೆಯದಕ್ಕೆ ಉಪಯೋಗಿಸಬೇಕು. ಯುವಜನರಿಗೆ ಸುಸಂಸ್ಕೃತ ಭಾರತ ಕಟ್ಟುವ ಜವಾಬ್ದಾರಿ ಇದೆ. ಯುವಜನರು ಉತ್ತಮ ಗ್ರಂಥಗಳನ್ನು ಓದಬೇಕು. ಪರೀಕ್ಷೆಗಳಲ್ಲಿ ಅನುತ್ತೀರ್ಣರಾದಾಗ ಆತಂಕಗೊಳ್ಳದೆ ಮತ್ತೆ ಪ್ರಯತ್ನ ಮಾಡಿ ಜಯಶೀಲರಾಗಬೇಕು ಎಂದರು.
ರೋಟರಿ 3182ರ ಉಪ ರಾಜ್ಯಪಾಲ ರಾಜಗೋಪಾಲ ಜೋಷಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಉತ್ತಮ ದೇಶ ಕಟ್ಟಿದ ತೃಪ್ತಿ ರೋಟರಿ ಸಂಸ್ಥೆಗೆ ಇದೆ. ಈಗಿನ ಶಿಕ್ಷಣ ದೈನಂದಿನ ಬದುಕು ಕಲಿಸುತ್ತಿಲ್ಲ. ಕೇವಲ ಶಿಕ್ಷಣವೇ ಜೀವನವಲ್ಲ. ಮಕ್ಕಳು ಸಂಸ್ಕಾರವಂತರಾಗಿ ಬದುಕಿ ದೇಶದ ಮುಂದಿನ ಆಸ್ತಿಯಾಗಬೇಕು ಎಂದು ಕರೆ ನೀಡಿದರು.
ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಡಿಸಿಎಂಸಿ ಪ್ರೌಢ ಶಾಲೆಯು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದೆ. ಮಕ್ಕಳು ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು. ಕಲಿಕೆಗೆ ಅಂತ್ಯವಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದರು.
ಬಿಇಒ ಶಬಾನಾ ಅಂಜುಮ್ ಮಾತನಾಡಿ, ರೋಟರಿ ಸಂಸ್ಥೆಯು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಕಣಿವೆವಿನಯ್, ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್,  ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಖಜಾಂಚಿ ಕಟಗಳಲೆ ಲೋಕೇಶ್, ಸಹ ಕಾರ್ಯದರ್ಶಿ ಪಿ.ಕೆ.ಬಸವರಾಜ್,ಪ್ರಾಚಾರ್ಯೆ ಪದ್ಮಾ ರಮೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಕ್ಷಿತ್, ಮುಖ್ಯಶಿಕ್ಷಕಿ ಲೆವಿನಾಜೂಲಿಯಾನಡಿಕೋಸ್ಟ, ಶಿಕ್ಷಣ ಸಂಯೋಜಕಿ ತೃಪ್ತಿ ಅಮರ್, ಮಧುರ ಮಂಜುನಾಥ್ ಇದ್ದರು.
ಎನ್.ಆರ್.ದಾಮೋದರಶರ್ಮ ಹಾಗೂ ರಾಜಗೋಪಾಲ ಜೋಷಿ ಅವರನ್ನು ಸನ್ಮಾನಿಸಲಾಯಿತು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net