ಇರಾನ್, ಅಮೆರಿಕದಲ್ಲಿ ಶಾಂತಿ ನೆಲೆಸಬೇಕಿದೆ

ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜತೆಯಾಗಿ ಆಗಮಿಸಿದರು.
ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜತೆಯಾಗಿ ಆಗಮಿಸಿದರು.
Published on
ಬಾಳೆಹೊನ್ನೂರು: ಇರಾನ್-ಅಮೆರಿಕ-ಇಸ್ರೇಲ್ ಮಧ್ಯೆೆ ಯುದ್ಧ ನೋವಿನ ಸಂಗತಿಯಾಗಿದ್ದು ಎಲ್ಲೂ ಇಂತಹದ್ದು ನಡೆಯಬಾರದು. ಬಾಂಬ್ ದಾಳಿಗೆ 70 ಶಾಲಾ ಮಕ್ಕಳು ಮೃತಪಟ್ಟಿದ್ದಾರೆ. ಪಕ್ಕದ ಅರಬ್ ದೇಶದಿಂದಲೂ ಯಾರೂ ಹೊರ ದೇಶಕ್ಕೆ ಹೋಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಇರಾನ್-ಅಮೆರಿಕ-ಇಸ್ರೇಲ್ ಯುದ್ಧದಿಂದ ಅರ್ಧ ಪ್ರಪಂಚಕ್ಕೇ ಯಾರೂ ಪ್ರಯಾಣ ಮಾಡಲು ಆಗುತ್ತಿಲ್ಲ. ಎರಡ್ಮೂರು ದಿನಗಳ ಹಿಂದೆ ಯಾರೂ ಪ್ರಯಾಣ ಮಾಡದಂತೆ ಸೂಚನೆ ನೀಡಲಾಗಿತ್ತು. ಅಲ್ಲಿ ಶಾಂತಿ ಮೂಡಬೇಕು. ನಾವೆಲ್ಲ ಶಾಂತಿಗಾಗಿ ಪಠಣ ಮಾಡಬೇಕಿದ್ದು ಶಾಂತಿಯಿಂದಲೇ ನಮ್ಮ ಜನರನ್ನು ಉಳಿಸಿಕೊಳ್ಳಬೇಕಿದೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ರಂಭಾಪುರಿ ಅಜ್ಜಯ್ಯನವರು ಯಾವಾಗಲೂ ಹೇಳುತ್ತಿದ್ದರು ಎಂದು ರಂಭಾಪುರಿ ಪೀಠದಲ್ಲಿ ಸುದ್ದಿಗಾರರಿಗೆ ಹೇಳಿದರು.
ಯುದ್ಧದ ಸಂದರ್ಭದಲ್ಲಿ ಯಾರ ಆಸ್ತಿಪಾಸ್ತಿಗೂ ಹಾನಿಯಾಗಬಾರದು. ಇದು ನಮ್ಮ ಮೂಲ ಉದ್ದೇಶವಾಗಿದ್ದು, ಕೇಂದ್ರ ಸರ್ಕಾರಕ್ಕೂ ಒತ್ತಾಯ ಮಾಡುತ್ತಿದ್ದು, ನಮ್ಮ ದೇಶದ ಎಲ್ಲ ಪ್ರಜೆಗಳಿಗೂ ಒಳ್ಳೆಯದಾಗಬೇಕು. ಭಾರತಕ್ಕೆ ದೊಡ್ಡ ಗಂಡಾಂತರ ಬಂದಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಸಂದೇಶವನ್ನು ಬೇರೆ ದೇಶಗಳಿಗೆ ಕಳಿಸಬೇಕಿದ್ದು ಅಮೆರಿಕಕ್ಕೂ ಸಂದೇಶ ತಲುಪಬೇಕಿದೆ. ಅಮೆರಿಕ ಯುದ್ಧವನ್ನು ನಿಲ್ಲಿಸಬೇಕಿದ್ದು ಶಾಂತಿ ಮಾತುಕತೆ ಮಾಡಬೇಕಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net