ಗುಂಡಿಗೆ ತ್ಯಾಜ್ಯ ಹಾಕಲು ವಿರೋಧ

ಚಿಕ್ಕಮಗಳೂರು ನಗರಸಭೆಯಿಂದ ಸಕ್ಕಿಂಗ್ ಯಂತ್ರ ತರೆಸಿ ಶೌಚಗೃಹದ ಗುಂಡಿ ಸ್ವಚ್ಛಗೊಳಿಸುತ್ತಿರುವುದು.
ಚಿಕ್ಕಮಗಳೂರು ನಗರಸಭೆಯಿಂದ ಸಕ್ಕಿಂಗ್ ಯಂತ್ರ ತರೆಸಿ ಶೌಚಗೃಹದ ಗುಂಡಿ ಸ್ವಚ್ಛಗೊಳಿಸುತ್ತಿರುವುದು.
Published on
ಆಲ್ದೂರು: ಪಟ್ಟಣದ ಹೃದಯಭಾಗದಲ್ಲಿನ ಸಾರ್ವಜನಿಕ ಶೌಚಗೃಹದ ಗುಂಡಿಯನ್ನು ಚಿಕ್ಕಮಗಳೂರು ನಗರಸಭೆಯಿಂದ ಸಕ್ಕಿಂಗ್ ಯಂತ್ರ ತರಿಸಿ ಒಂದು ಲೋಡ್ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಿದ್ದು ಸಾರ್ವಜನಿಕರ ಬಳಕೆಗೆ ಅನುಕೂಲವಾಗಿದೆ. ತ್ಯಾಜ್ಯ ತುಂಬಿಕೊಂಡು ಸಾರ್ವಜನಿಕ ಶೌಚಗೃಹ ಬಂದ್ ಮಾಡಲಾಗಿತ್ತು. ಈ ಸಂಬಂಧ ಜೂನ್ 2 ರಂದು ಆಲ್ದೂರಲ್ಲಿ ಸಾರ್ವಜನಿಕ ಶೌಚಗೃಹ ಬಂದ್ ಶೀರ್ಷಿಕೆಯಲ್ಲಿ ವಿಜಯವಾಣಿ ವರದಿ ಪ್ರಕಟಿಸಿ ಗಮನಸೆಳೆದಿತ್ತು. ಮೂಗು ಮುಚ್ಚಿಕೊಂಡು ತೆರಳುತ್ತಿದ್ದ ಸಾರ್ವಜನಿಕರು ಇದೀಗ ನಿಟ್ಟುಸಿರುಬಿಟ್ಟಿದ್ದಾರೆ.
ಆದರೆ ಸ್ವಚ್ಛಗೊಳಿಸಿದ ತ್ಯಾಜ್ಯವನ್ನು ಗ್ರಾಪಂ ಗೋಮಾಳ ಜಾಗದಲ್ಲಿ ಗುಂಡಿ ತೆಗೆದು ಹಾಕಲು ವಾಹನವನ್ನು ತೆಗೆದುಕೊಂಡು ಹೋದ ಸಂದರ್ಭದಲ್ಲಿ ದೊಣಗುಡಿಗೆಯ ಕೆಲವು ಗ್ರಾಮಸ್ಥರು ಇದಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ಶೌಚಗೃಹದ ಗುಂಡಿಯನ್ನು ಸ್ವಚ್ಛಗೊಳಿಸಲು ತೊಂದರೆಯಾಗುತ್ತಿದೆ ಎಂದು ಗ್ರಾಪಂ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ .
ಸಕ್ಕಿಂಗ್ ಯಂತ್ರ ವಾಪಾಸ್:  ಶೌಚಗೃಹದ ಗುಂಡಿ ತುಂಬಿಕೊಂಡು ದುರ್ನಾತ ಬೀರುತ್ತಿದೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ  ಗ್ರಾ ಪಂ ವ್ಯಾಪ್ತಿಯ ಗೋಮಾಳ ಜಾಗವನ್ನು ಗುರುತಿಸಿ ಜೆಸಿಬಿ ಯಂತ್ರದ ಮೂಲಕ ಗೋಮಾಳ ಜಾಗದಲ್ಲಿ ಗುಂಡಿ ತೆಗೆದು ತ್ಯಾಜ್ಯವನ್ನು ಡಂಪಿಂಗ್ ಮಾಡಲು ಹೋದ ಸಂದರ್ಭದಲ್ಲಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನಗರಸಭೆಯ ಸಕ್ಕಿಂಗ್ ಯಂತ್ರವನ್ನು ವಾಪಾಸ್ ಕಳುಹಿಸಲಾಯಿತು. ಈ ಬಗ್ಗೆ ತಹಸೀಲ್ದಾರ್ ಗಮನಕ್ಕೆ ತರಲಾಗಿದ್ದು  ಮುಂದಿನ ಬಾರಿ ಸಾರ್ವಜನಿಕರು ಅಡ್ಡಿಪಡಿಸಿದರೆ ಅಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ಶೌಚಗೃಹದ ಬಾಗಿಲು ತೆಗೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಆಲ್ದೂರು ಗ್ರಾಪಂ ಆಡಳಿತಾಧಿಕಾರಿ ಟಿ.ಆರ್.ರುದ್ರಪ್ಪ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net