ತಾಲೂಕಿನಿಂದ 22 ಕಿ.ಮೀ. ದೂರದಲ್ಲಿರುವ ಕೆರೆಕಟ್ಟೆ ಗ್ರಾಪಂನ ಭಲೇಕಡಿ ಗ್ರಾಮಸ್ಥರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದು, ಗ್ರಾಮಸ್ಥರು ಒಂದು ಬೆಂಕಿಪೊಟ್ಟಣ ಬೇಕಾದರೂ ಗ್ರಾಮದ ಕಚ್ಚಾರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ತಲುಪಲು ಸುಮಾರು 7 ಕಿ.ಮೀ. ಸಾಗಬೇಕು. ಪಡಿತರ ತರಲು, ಆರೋಗ್ಯ ಸಮಸ್ಯೆ ಎದುರಾದರೆ ಆಸ್ಪತ್ರೆಗೆ ಬರಲು ಕೆರೆಕಟ್ಟೆ ಅಥವಾ ನೆಮ್ಮಾರ್‌ಗೆ ಬರಬೇಕು. ಇಂತಹ ಸ್ಥಿತಿಯಿದ್ದರೂ ಜನಪ್ರತಿನಿಧಿಗಳು ಕಾಲುಸಂಕ ನಿರ್ಮಾಣಕ್ಕೆ ಕಾಳಜಿ ವಹಿಸುತ್ತಿಲ್ಲ.