ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಅಭಿಯಾನ ಹಾಗೂ ಮಲೇರಿಯಾ ನಿರ್ಮೂಲನೆ ಕುರಿತ ಪೂರ್ವಭಾವಿ ಸಭೆ ನಡೆಸಲಾಯಿತು. ಡಾ. ಪ್ರವೀಣ್, ಸನತ್ ಶೆಟ್ಟಿ, ತಿಮ್ಮಯ್ಯ, ಕಾಶಪ್ಪ, ವೆಂಕಟೇಶ್, ಭಗವಾನ್ ಇದ್ದರು.
ಬಾಳೆಹೊನ್ನೂರು: ಪಲ್ಸ್ ಪೋಲಿಯೋ ಅಭಿಯಾನವನ್ನು ಸಂಘ ಸಂಸ್ಥೆಗಳು ಯಶಸ್ವಿಗೊಳಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರವೀಣ್ ಹೇಳಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಪಲ್ಸ್ ಪೋಲಿಯೋ ಅಭಿಯಾನ ಹಾಗೂ ಮಲೇರಿಯಾ ನಿರ್ಮೂಲನೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜೂ.28ರಂದು ವಿವಿಧ ಕಡೆಗಳಲ್ಲಿ ನಡೆಸಲಿದ್ದು 28, 30ರಂದು ಮನೆ ಭೇಟಿ, ಸಂಚಾರಿ ವಾಹನದ ಮೂಲಕ ಅಭಿಯಾನ ನಡೆಯಲಿದ್ದು ಇದಕ್ಕೆ 5 ವರ್ಷದೊಳಗಿನ ಎಲ್ಲ ಮಕ್ಕಳನ್ನು ಕರೆತಂದು ಲಸಿಕೆ ಹಾಕಿಸಿಕೊಂಡು ಪಾಲಕರು ಸಹಕರಿಸಬೇಕಿದೆ ಎಂದರು.
ಪೋಲಿಯೋ ಅಭಿಯಾನ ಯಶಸ್ವಿಗೊಳ್ಳಲು ಸರ್ಕಾರದೊಂದಿಗೆ ಸಂಘ ಸಂಸ್ಥೆಗಳ ಸಹಕಾರವೂ ಅಗತ್ಯವಾಗಿದೆ. ಸರ್ಕಾರಿ ಇಲಾಖೆ ಹಾಗೂ ಖಾಸಗಿ ವ್ಯಕ್ತಿಗಳ ವಾಹನಗಳನ್ನು ಅಭಿಯಾನದಂದು ಇಲಾಖೆಗೆ ನೀಡಿ ಸಹಕಾರ ನೀಡಬೇಕು ಎಂದರು.
ಜೆಸಿಐ ಅಧ್ಯಕ್ಷ ಬಿ.ಎಸ್.ಸನತ್ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ತಿಮ್ಮಯ್ಯ, ಪಿಡಿಒ ಕಾಶಪ್ಪ, ಕೆ.ಟಿ.ವೆಂಕಟೇಶ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭಗವಾನ್ ಮತ್ತಿತರರಿದ್ದರು.