ಸಂಸೆ ಗ್ರಾಪಂನಲ್ಲಿ ಮೂರು ದಶಕಗಳ ಬಳಿಕ ನಿವೇಶನ ಹಂಚಿಕೆ

ಕಳಸ ತಾಲೂಕಿನ ಸಂಸೆ ಗ್ರಾಪಂಯಲ್ಲಿ ನಿವೇಶನ ಹಂಚಿಕೆಯನ್ನು ಲಾಟರಿ ಎತ್ತುವ ಮೂಲಕ ನಡೆಸಲಾಯಿತು. ಚೇತನ್, ವಿಠಲ, ಲಕ್ಷ್ಮಣ್, ಮೆಹಬೂಬ್ ಇತರರಿದ್ದರು.
ಕಳಸ ತಾಲೂಕಿನ ಸಂಸೆ ಗ್ರಾಪಂಯಲ್ಲಿ ನಿವೇಶನ ಹಂಚಿಕೆಯನ್ನು ಲಾಟರಿ ಎತ್ತುವ ಮೂಲಕ ನಡೆಸಲಾಯಿತು. ಚೇತನ್, ವಿಠಲ, ಲಕ್ಷ್ಮಣ್, ಮೆಹಬೂಬ್ ಇತರರಿದ್ದರು.
Published on
 ಕಳಸ: ಸಂಸೆ ಗ್ರಾಪಂ ವ್ಯಾಪ್ತಿಯ ನಿವೇಶನರಹಿತ ಕುಟುಂಬಗಳಿಗೆ ಮೂರು ದಶಕಗಳ ಬಳಿಕ ನಿವೇಶನ ಹಂಚಿಕೆ ಮಾಡುವ ಮೂಲಕ ಆಡಳಿತ ಹೊಸ ಆಶಾಕಿರಣ ಮೂಡಿಸಿದೆ.
ಸಂಸೆ ಗ್ರಾಪಂ ವ್ಯಾಪ್ತಿಯ ಸರ್ವೇ ನಂ.294ರಲ್ಲಿರುವ 2.35 ಎಕರೆ ಭೂಮಿಯಲ್ಲಿ ಒಟ್ಟು 46 ನಿವೇಶನಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ. ನಿವೇಶನಕ್ಕಾಗಿ ಒಟ್ಟು 73 ಅರ್ಜಿಗಳು ಸಲ್ಲಿಕೆಯಾಗಿದ್ದರೂ ಲಭ್ಯವಿದ್ದ ನಿವೇಶನಗಳ ಸಂಖ್ಯೆ 46 ಮಾತ್ರವಾಗಿದ್ದ ಕಾರಣ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಇತರ ಅರ್ಹರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.
ಸಂಸೆ ಗ್ರಾಪಂ ವ್ಯಾಪ್ತಿಯಲ್ಲಿ 30 ವರ್ಷಗಳಿಂದ ಯಾವುದೇ ನಿವೇಶನ ಹಂಚಿಕೆ ನಡೆದಿರಲಿಲ್ಲ. ಪರಿಣಾಮವಾಗಿ ಎಸ್ಟೇಟ್‌ಗಳ ಲೈನ್ ಮನೆಗಳಲ್ಲಿ ಹಾಗೂ ಬಾಡಿಗೆ ಮನೆಗಳಲ್ಲಿ ಹಲವು ದಶಕಗಳಿಂದ ವಾಸಿಸುತ್ತಿದ್ದ ನೂರಾರು ಕಾರ್ಮಿಕ ಕುಟುಂಬಗಳು ಸ್ವಂತ ಸೂರಿನ ಕನಸನ್ನು ಹೊತ್ತು ಬದುಕುತ್ತಿದ್ದರು. ಈ ಕನಸು ನನಸಾಗಬೇಕೆಂದು ಹಲವು ಬಾರಿ ಟೆಂಟ್ ಹಾಕಿ ಪ್ರತಿಭಟನೆ ನಡೆಸಿ ಸರ್ಕಾರ ಹಾಗೂ ಆಡಳಿತದ ಗಮನ ಸೆಳೆದಿದ್ದರು.
 ಹೋರಾಟದ ಫಲವಾಗಿ ಇದೀಗ 46 ಕುಟುಂಬಗಳಿಗೆ ನಿವೇಶನ ದೊರೆತಿದ್ದು ಹಲವು ವಷರ್ಗಳಿಂದ ಸ್ವಂತ ಜಾಗ ಎಂಬ ಕನಸು ಕಂಡಿದ್ದ ಕುಟುಂಬಗಳ ಮುಖದಲ್ಲಿ ಸಂತಸ ಮೂಡಿದೆ. ನಿವೇಶನ ಹಂಚಿಕೆ ಕಾರ್ಯಕ್ರಮದ ವೇಳೆ ಅನೇಕ ಫಲಾನುಭವಿಗಳ ಕಣ್ಣಲ್ಲಿ ಕಂಡ ಸಂತೋಷ ಮತ್ತು ಭವಿಷ್ಯದ ಭರವಸೆ ವಿಶೇಷವಾಗಿತ್ತು. ಅಲ್ಲದೆ ನಿವೇಶನ ಸಿಗದ ಫಲಾನುಭವಿಗಳಿಗೆ ನಿರಾಸೆ ಆಯಿತು.
 ಪಂಚಾಯಿತಿ ಆಡಳಿತಾಧಿಕಾರಿ ಚೇತನ್, ಅಭಿವೃದ್ಧಿ ಅಧಿಕಾರಿ ವಿಠಲ, ರೆವಿನ್ಯೂ ಇನ್ಸ್‌ಪೆಕ್ಟರ್ ಲಕ್ಷ್ಮಣ್, ಗ್ರಾಮ ಲೆಕ್ಕಾಧಿಕಾರಿ ಮೆಹಬೂಬ್, ಜಿಲ್ಲಾ ವಸತಿ ನೋಡಲ್ ಅಧಿಕಾರಿ ಜಿತೇಂದ್ರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net