ಭಾರತೀಯ ಸಂಸ್ಕೃತಿಗೆ ಕೂಡುಕುಟುಂಬ ಪದ್ಧಯಿಯೇ ತಳಹದಿ

ಅಡ್ಡಗದ್ದೆ ಮಂಡಲದ ಕಾವಡಿ ಕೆ.ಎಂ.ಗೋಪಾಲ್ ಕೃಷಿಕ್ಷೇತ್ರದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಹಾಸನದ ಸಾಮಾಜಿಕ ಕಾರ್ಯಕರ್ತ ಮಹಿಪಾಲ್ ದಿಕ್ಸೂಚಿ ಭಾಷಣಮಾಡಿದರು. ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ, ಕೆ.ಶ್ರೀಕಾಂತ್, ರಾಘವೇಂದ್ರ, ಕೆ.ಎಂ.ಗೋಪಾಲ್ ಇದ್ದರು.
ಅಡ್ಡಗದ್ದೆ ಮಂಡಲದ ಕಾವಡಿ ಕೆ.ಎಂ.ಗೋಪಾಲ್ ಕೃಷಿಕ್ಷೇತ್ರದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ಹಾಸನದ ಸಾಮಾಜಿಕ ಕಾರ್ಯಕರ್ತ ಮಹಿಪಾಲ್ ದಿಕ್ಸೂಚಿ ಭಾಷಣಮಾಡಿದರು. ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ, ಕೆ.ಶ್ರೀಕಾಂತ್, ರಾಘವೇಂದ್ರ, ಕೆ.ಎಂ.ಗೋಪಾಲ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹರಿಹರಪುರ ಮಠ
  • ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ

ಶೃಂಗೇರಿ: ಭಾರತೀಯ ಸಂಸ್ಕೃತಿಗೆ ಮೌಲ್ಯಯುತ ಕುಟುಂಬ ವ್ಯವಸ್ಥೆ ಆಧಾರವಾಗಿದೆ. ಕೂಡುಕುಟುಂಬದ ಪರಿಕಲ್ಪನೆ ಪ್ರಸ್ತುತ ಕಡಿಮೆಯಾಗಿದ್ದು ಮನೆಯನ್ನು ಸುವ್ಯವಸ್ಥೆ ಮಾಡುವತ್ತ ಹಿಂದೂಗಳ ಚಿತ್ತ ಹರಿಯಬೇಕಿದೆ ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.

ಅಡ್ಡಗದ್ದೆ ಮಂಡಲ ಕಾವಡಿಯ ಕೃಷಿಕ ಕೆ.ಎಂ.ಗೋಪಾಲ್ ಅವರ ಕೃಷಿಕ್ಷೇತ್ರದಲ್ಲಿ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹಿಂದೂ ಸಮಾಜ ಮಹಾವೃಕ್ಷ. ಇದರಲ್ಲಿ ರೆಂಬೆ-ಕೊಂಬೆಗಳು ಬಹಳಷ್ಟಿದ್ದು ನನ್ನ ಕೊಂಬೆ ಶ್ರೇಷ್ಠ ಎಂಬುದನ್ನು ಬದಿಗಿಟ್ಟು ಮಹಾವೃಕ್ಷದ ಕೊಂಬೆಗಳು ಒಂದೇ ಎಂಬ ಭಾವ ನಮ್ಮಲ್ಲಿ ಪರಿಮೂಡಬೇಕಿದೆ ಎಂದರು.

ಸತ್ಯ ಒಂದೇ, ಮಾರ್ಗಗಳು ಅನೇಕ. ದೇವರು ಒಬ್ಬನೇ ನಾಮ ಹಲವು ಎಂದು ಒಪ್ಪಿಗೊಂಡ ಶ್ರೇಷ್ಠ ಸಮಾಜ ನಮ್ಮದಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ರೂಪಿಸಿದ ಹಿಂದೂ ಸಮಾಜದ ತಳಪಾಯ ಇನ್ನಷ್ಟು ಗಟ್ಟಿಯಾಗಬೇಕು. ಆಂತರಿಕ ಅಸಮಾನತೆ ಬದಿಗಿಟ್ಟು ಸಿದ್ಧಾಂತಗಳ ಜತೆ ಹಿಂದೂ ಸಮುದಾಯ ಚೆನ್ನಾಗಿರಬೇಕು ಎಂಬ ಮನೋಭಾವ ನಮ್ಮಲ್ಲಿರಬೇಕು. ನಮ್ಮ ರೆಂಬೆ-ಕೊಂಬೆಗಳ ಬಗ್ಗೆ ಮಾತ್ರ ಯೋಚಿಸದೆ ಮಹಾವೃಕ್ಷಕ್ಕೆ ನೀರು ಎರೆಯಬೇಕು. ಗೊಬ್ಬರ ಹಾಕಬೇಕು. ಪ್ರಸ್ತುತ ಮರದ ಮೂಲಬೇರುಗಳನ್ನು ನಾವು ಮರೆತ್ತಿದ್ದೇವೆ. ಪರಸ್ಪರ ಕಚ್ಚಾಟ, ಅಸೂಯೆ, ದ್ವೇಷಗಳನ್ನು ಬೆಳೆಸಿದಾಗ ದುಷ್ಟಶಕ್ತಿಗಳು ಸಮಾಜದಲ್ಲಿ ಜಾಗೃತವಾಗುತ್ತವೆ ಎಂದು ಎಚ್ಚರಿಸಿದರು.

ಹಿಂದೂಗಳಲ್ಲಿ ಸ್ವಾಭಿಮಾನ ಕಡಿಮೆಯಾಗುತ್ತಿದೆ. ಅನುಮಾನದ ತಡೆಗೋಡೆ ಆಕಾಶದ ಎತ್ತರಕ್ಕೆ ಏರಿದೆ. ಹೃದಯಗಳಿಂದ ಪರಸ್ಪರ ನಂಬಿಕೆ, ವಿಶ್ವಾಸದಿಂದ ಬದುಕುತ್ತಿದ್ದ ಹಿಂದೂ ಸಮಾಜ ರಾಷ್ಟ್ರೀಯತೆ, ಏಕತೆಗಾಗಿ ಒಂದಾಗುವ ಕ್ಷಣ ನಮ್ಮ ಮುಂದಿದೆ. ನಾವು ಒಗ್ಗಟ್ಟಿನಿಂದ ಇದ್ದರೆ ಮಾತ್ರ ಮುನ್ನಡೆ ಸಾಧಿಸಲು ಸಾಧ್ಯವಾಗುತ್ತದೆ. ರಾಜತಾಂತ್ರಿಕ ವ್ಯವಸ್ಥೆಯಲ್ಲಿ  ಒಡೆದು ಆಳುವ ನೀತಿ ಹೆಚ್ಚಾಗಿದೆ.ಹಿಂದೂ ಸಮಾಜದಲ್ಲಿ ಸಮಸ್ಯೆಯಿದೆ. ಕಾಲಿಗೆ ಗಾಯವಾದರೆ ಮುಲಾಮು ಹಚ್ಚಿಕೊಳ್ಳಬೇಕು. ಉಪ್ಪು, ಖಾರ ಹಚ್ಚುವ ಪ್ರಕ್ರಿಯೆ ನಮ್ಮಲ್ಲಿರಬಾರದು ಎಂದು ಹೇಳಿದರು.

ಪಾಲಕರು ಹತ್ತನೇ ತರಗತಿ ತನಕ ಮಕ್ಕಳನ್ನು ಮನೆಯಲ್ಲಿ ಬೆಳೆಸಬೇಕು. ಅವರನ್ನು ಹಾಸ್ಟೆಲ್‌ಗೆ ಸೇರಿಸಬಾರದು. ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ, ದೇಶದ ಸಮಗ್ರತೆ, ರಾಷ್ಟ್ರೀಯತೆ ಕುರಿತು ಶಿಕ್ಷಣ ನೀಡಬೇಕು. ಆತ್ಮವಿಶ್ವಾಸ ತುಂಬಿಸಬೇಕು. ಆಗ ಮಾತ್ರ ಅವರು ಹಿಮಾಲಯ ಪರ್ವತವನ್ನು ಕೆಚ್ಚೆದೆಯಿಂದ ಹತ್ತಬಹುದು. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ನಿರ್ಧಾರವಾಗುವುದು ಸಂಖ್ಯೆಗಳ ಆಧಾರದ ಮೇಲೆ ಎಂಬ ಅರಿವು ನಮ್ಮಲ್ಲಿ ಇರಬೇಕು. ಹಿಂದೂ ಸಮಾಜದ ಕುಟುಂಬ ಒಂದೇ ಮಕ್ಕಳು ಸಾಕು ಎಂಬ ಮನೋಭಾವ ಬೆಳೆಸಿಕೊಂಡಿದೆ. ಭಾರತ ಭಾರತವಾಗಿ ಉಳಿಯಬೇಕಿದ್ದರೆ ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಕನಿಷ್ಠ ಮೂರಾಗಬೇಕು. ಮಕ್ಕಳು ದೇಶದ ನಿಜವಾದ ಆಸ್ತಿ. ಅಂತಹ ಆಸ್ತಿಗಳಿಗೆ ಮೌಲ್ಯವನ್ನು ಕಲಿಸಿದಾಗ ಮಾತ್ರ ಭಾರತ ಬೆಳಗಲಿದೆ ಎಂದು ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.

ಪ್ರಕೃತಿಯಲ್ಲಿ ದೈವತ್ವ ಕಾಣುತ್ತಿರುವ ಹಿಂದೂ ಧರ್ಮ ಜಗತ್ತಿನ ಶ್ರೇಷ್ಠ ಧರ್ಮ. ಮತಗಳ ಆಧಾರದಲ್ಲಿ ಹಿಂದೂ ಧರ್ಮ ಪ್ರಾರಂಭಗೊಂಡಿಲ್ಲ. ವಿಶ್ವಕ್ಕೆ ಉನ್ನತ ಮೌಲ್ಯ ನೀಡಿದ್ದು  ಧರ್ಮ. ನಾವಿಬ್ಬರು ನಮಗಿಬ್ಬರು ಎಂದು ಹಿಂದೂಗಳಿಗೆ ಕಟ್ಟುನಿಟ್ಟು ಮಾಡಲಾಗಿದೆ. ಹಿಂದೂಸ್ತಾನದಲ್ಲಿ ಹಿಂದೂ ಧರ್ಮವನ್ನು ಕುಬ್ಜವಾಗಿ ಮಾಡಲಾಗಿದೆ. ದೇಶದಲ್ಲಿ ಹುಟ್ಟಿದ ನಾವು ಪುಣ್ಯವಂತರು. ನಾವು ಉಸಿರಾಡಲು, ದೇವಾಲಯಕ್ಕೆ ನಿರ್ಭೀತಿಯಿಂದ ಹೋಗಲು ಇರುವ ದೇಶ ಎಂದರೆ ಭಾರತ ಒಂದೇ. ಹಿಂದೂ ಸಮಾಜೋತ್ಸವ ಮಾಡವುದು ಹಿಂದೂ ರಾಷ್ಟ್ರ ಕಟ್ಟಲು ಅಲ್ಲ. ನಮ್ಮ ದೇಶ ಯಾವತ್ತಿಗೂ ಹಿಂದೂ ರಾಷ್ಟ್ರವಾಗಿ ಉಳಿದಿದೆ. ಋಷಿ ಮುನಿಗಳ ತಪಸ್ಸಿನ ಶಕ್ತಿ, ಮಹನೀಯರು ನೀಡಿ ಹೋದ ಅಧ್ಯಾತ್ಮದ ತಳಹದಿ ಮೇಲೆ ಹಿಂದೂ ರಾಷ್ಟ್ರ ನಿಂತಿದೆ. ನಾವು ಬದಲಾಗಬೇಕು. ನಮ್ಮೊಳಗಿನ ಸ್ವಾರ್ಥ ಭಾವ ಕಿತ್ತೆಸೆದು ನಾವು ಒಂದೇ ಎಂಬ ಭಾವ ಮೂಡಬೇಕು. ಭವಿಷ್ಯದ ಬೆಳಕಾದ ಮಕ್ಕಳಿಗೆ ಸುದೃಢವಾದ ಹಿಂದೂ ರಾಷ್ಟ್ರ ನೀಡಿ ಹೋಗುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹಾಸನದ ಸಾಮಾಜಿಕ ಕಾರ್ಯಕರ್ತ ಮಹಿಪಾಲ್ ಹೇಳಿದರು.

ಅಡ್ಡಗದ್ದೆಯಿಂದ ಕಾವಡಿ ತನಕ ಬೈಕ್ ಜಾಥಾದ ಮೂಲಕ ಶ್ರೀಗಳನ್ನು ಬರ ಮಾಡಿಕೊಳ್ಳಲಾಯಿತು. ಆಯೋಜನಾ ಸಮಿತಿ ಅಧ್ಯಕ್ಷ ಚೋಳರಮನೆ ಪ್ರದೀಪ್, ಸದಸ್ಯರಾದ ಕೆ.ಎಂ.ಗೋಪಾಲ್, ಟಿ.ಕೆ.ಪರಾಶರ, ಸುಮಂಗಲಿ ಆನಂದಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net