ಮಕ್ಕಳಿಗೆ ಕನ್ನಡ ಭಾಷೆಯ ಅರಿವು

ಪಂಚನಹಳ್ಳಿ ಸ್ನೇಹ ವಿದ್ಯಾ ಸಂಸ್ಥೆಯಲ್ಲಿ ನುಡಿ ನಿತ್ಯೋತ್ಸವ ಕಾರ್ಯಕ್ರಮವನ್ನು ಸಂಸ್ಥೆಯ ಖಜಾಂಚಿ ಶಾಲಿನಿ ಉದ್ಘಾಟಿಸಿದರು.  ಸಂತೋಷ್, ಎಂ.ಆರ್.ಪ್ರಕಾಶ್, ರಾಘವೇಂದ್ರ, ರಂಗನಾಥ ಇತರರಿದ್ದರು.
ಪಂಚನಹಳ್ಳಿ ಸ್ನೇಹ ವಿದ್ಯಾ ಸಂಸ್ಥೆಯಲ್ಲಿ ನುಡಿ ನಿತ್ಯೋತ್ಸವ ಕಾರ್ಯಕ್ರಮವನ್ನು ಸಂಸ್ಥೆಯ ಖಜಾಂಚಿ ಶಾಲಿನಿ ಉದ್ಘಾಟಿಸಿದರು. ಸಂತೋಷ್, ಎಂ.ಆರ್.ಪ್ರಕಾಶ್, ರಾಘವೇಂದ್ರ, ರಂಗನಾಥ ಇತರರಿದ್ದರು.
Published on
ಪಂಚನಹಳ್ಳಿ: ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ ಭಾಷೆ ಬಗ್ಗೆ ಅರಿವು ಮೂಡಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಜಿಲ್ಲಾ ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಂ. ಆರ್.ಪ್ರಕಾಶ್ ತಿಳಿಸಿದರು.        
ಪಂಚನಹಳ್ಳಿ  ಸ್ನೇಹ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನುಡಿ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ನೇಹ ಶಾಲೆ ದಿನಕ್ಕೊಂದು ವಿಚಾರ ಕರುನಾಡ ವಿಷಯ ಅಪಾರ ಎಂಬ ಶೀರ್ಷಿಕೆಯೊಂದಿಗೆ ನವೆಂಬರ್ ಪೂರ್ತಿ ಕನ್ನಡದ ಉತ್ಸವವನ್ನು ಅರ್ಥಪೂರ್ಣವಾಗಿ ಮಕ್ಕಳಿಗೆ ಕನ್ನಡ ರಾಜ್ಯೋತ್ಸವದ ಅರಿವು ಮೂಡಿಸುವುದರ ಮೂಲಕ ಆಚರಿಸಿದ್ದಾರೆ ಎಂದು ತಿಳಿಸಿದರು.
ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಗಂಗಾಧರಯ್ಯ ಮಾತನಾಡಿ, ಕನ್ನಡ ಶ್ರೀಮಂತ ಭಾಷೆಯಾಗಿದ್ದು ಕನ್ನಡ ಎಂದರೆ ಕಲೆ, ಜನಪದ, ಸಂಸ್ಕೃತ, ಸಂಸ್ಕಾರಯುತ ಭಾಷೆ ಎಂದರು.
ಸ್ನೇಹ ವಿದ್ಯಾ ಸಂಸ್ಥೆ ಕಾರ್ಯದರ್ಶಿ ರಾಘವೇಂದ್ರ ಮಾತನಾಡಿ, ಕನ್ನಡ ಭಾಷೆಯ ಬಗ್ಗೆ ಪಠ್ಯಪುಸ್ತಕಗಳ ವಿಷಯದ ಜತೆಗೆ ಪಠ್ಯೇತರ ಚಟುವಟಿಕೆಗಳಾದ ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಕವಿ ಪರಿಚಯ, ಇಂಥ ಸ್ಪರ್ಧೆಗಳನ್ನು ಏರ್ಪಡಿಸುವುದರಿಂದ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಮತ್ತು ಕನ್ನಡ ಭಾಷೆಯ ಬಗ್ಗೆ ಹೆಚ್ಚಿನ ವಿಚಾರಧಾರೆ ಪಡೆಯಬಹುದು. ರಾಜ್ಯೋತ್ಸವ ಪ್ರಯುಕ್ತ ಎತ್ತಿನ ಗಾಡಿಯ ಮೂಲಕ ಭುವನೇಶ್ವರಿಯ ಭಾವಚಿತ್ರ ಮೆರವಣಿಗೆ ಮಾಡಿರುವುದು ವಿಶೇಷ ಎಂದರು. ಗ್ರಾಪಂ ಅಧ್ಯಕ್ಷ ಸಂತೋಷ್, ಪಿಎಸ್‌ಐ  ಶಾಹಿದ್ ಅಫ್ರಿದಿ, ಜಯಸ್ವಾಮಿ, ರೇವಣ್ಣ, ರಂಗನಾಥ್, ಬಿಳಿಗಿರಿ ವಿಜಯಕುಮಾರ್, ಶಾಲಿನಿ, ಸಮಿತಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net