ತರೀಕೆರೆ ಪಿರ್ಕಾರ್ಡ್ ಬ್ಯಾಂಕ್‌ಗೆ ಕಿರಣ್‌ಕುಮಾರ್ ಅಧ್ಯಕ್ಷ

ತರೀಕೆರೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ  ಕಿರಣ್‌ಕುಮಾರ್ ಅವರನ್ನು ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್ ಅಭಿನಂದಿಸಿದರು.
ತರೀಕೆರೆ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಕಿರಣ್‌ಕುಮಾರ್ ಅವರನ್ನು ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್ ಅಭಿನಂದಿಸಿದರು.
Published on
ತರೀಕೆರೆ: ಪಟ್ಟಣದ ಪಿರ್ಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಎಚ್.ಎಂ.ಕಿರಣ್‌ಕುಮಾರ್ ಅವಿರೋಧ ಆಯ್ಕೆಯಾದರು. ಹಿಂದಿನ ಅಧ್ಯಕ್ಷ ಎ.ಎಂ.ಯೋಗೀಶ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಿರಣ್ ಕುಮಾರ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಇಲಾಖೆ ಸಹಾಯಕ ಉಪ ನಿಬಂಧಕಿ ಆರ್.ಸುನಂದಮ್ಮ ನೂತನ ಅಧ್ಯಕ್ಷರ ಆಯ್ಕೆ ಪ್ರಕಟಿಸಿದರು.
ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್ ಮಾತನಾಡಿ, 35ವರ್ಷಗಳಿಂದಲೂ ನಿರ್ದೇಶಕರ ನಡುವಿನ ಪರಸ್ಪರ ಹೊಂದಾಣಿಕೆಯಿಂದ ಅವಿರೋಧ ಪ್ರಕ್ರಿಯೆ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. 1978ನೇ ಸಾಲಿನಲ್ಲಿ ಉತ್ತಮ ಬ್ಯಾಂಕ್ ರಾಜ್ಯಪ್ರಶಸ್ತಿ ಪಡೆದುಕೊಂಡಿರುವ ಪಟ್ಟಣದ ಪಿಕಾರ್ಡ್ ಬ್ಯಾಂಕ್ ಸಾಕಷ್ಟು ರೈತರಿಗೆ ಸಾಲ ಸೌಲಭ್ಯ ಕಲ್ಪಿಸಿ ಆರ್ಥಿಕವಾಗಿ ಸದೃಢಗೊಳಿಸಿದ್ದು, ಕಳೆದ ವರ್ಷದಿಂದ ಲಾಭದತ್ತ ಮುಖಮಾಡಿ ಪ್ರಸ್ತುತ 10 ಕೋಟಿ ರೂ. ಸಾಲ ನೀಡಿದೆ ಎಂದರು.
ನೂತನ ಅಧ್ಯಕ್ಷ ಎಚ್.ಎಂ.ಕಿರಣ್‌ಕುಮಾರ್ ಮಾತನಾಡಿ, ಅತಿ ದೊಡ್ಡ ಮತ್ತು ಸಣ್ಣ ಸೇರಿ ಒಟ್ಟು 173 ರೈತರಿಗೆ ಬ್ಯಾಂಕ್ ಸಾಲ ನೀಡಿದೆ. ಸಿಕ್ಕ ಅಧಿಕಾರವನ್ನು ಬ್ಯಾಂಕ್‌ನ ಸರ್ವಾಂಗೀಣ ಅಭಿವದ್ಧಿಗೆ ಬಳಸಿಕೊಳ್ಳಲಾಗುವುದು. ಹೊಸ ಕಟ್ಟಡ ಮತ್ತು ಮಳಿಗೆ ನಿರ್ಮಿಸಲು ಯೋಜನೆ ರೂಪಿಸಲಾಗುವುದು ಎಂದರು.
ಉಪಾಧ್ಯಕ್ಷ ಸಿ.ಎಚ್.ದಿವಾಕರ್‌ಮೂರ್ತಿ, ನಿರ್ದೇಶಕರಾದ ಎಚ್.ಆರ್.ನಾಗರಾಜ್, ಕೆ. ಚಂದ್ರಶೇಖರಪ್ಪ, ಆರ್.ತಮ್ಮಯ್ಯ, ಬಿ.ಎಸ್.ನಾಗರಾಜ, ಡಿ.ಪ್ರೀತಮ್, ಜಿಲ್ಲಾ ಬ್ಯಾಂಕ್ ವ್ಯವಸ್ಥಾಪಕ ಎಚ್.ಜಿ.ಪುಟ್ಟರಾಜು ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net