ಕೆಂಪೇಗೌಡರು ಉತ್ತಮ ಸಮಾಜ ಸುಧಾರಕ

 ಹೇರೂರು ಗ್ರಾಪಂ ದೂಬ್ಳದಲ್ಲಿ ಕೆಂಪೇಗೌಡ ಜಯಂತಿ ಆಚರಿಸಲಾಯಿತು. ಪ್ರಮುಖರಾದ ಕಿಬ್ಳಿ ಪ್ರಸನ್ನಕುಮಾರ್, ವಿಜೇಂದ್ರ, ವರುಣ್, ನಿರೀಕ್ಷಿತ್, ನಾಗರಾಜ್, ರಕ್ಷಿತ್, ಸುಕುಮಾರ್ ಇತರರಿದ್ದರು.
ಹೇರೂರು ಗ್ರಾಪಂ ದೂಬ್ಳದಲ್ಲಿ ಕೆಂಪೇಗೌಡ ಜಯಂತಿ ಆಚರಿಸಲಾಯಿತು. ಪ್ರಮುಖರಾದ ಕಿಬ್ಳಿ ಪ್ರಸನ್ನಕುಮಾರ್, ವಿಜೇಂದ್ರ, ವರುಣ್, ನಿರೀಕ್ಷಿತ್, ನಾಗರಾಜ್, ರಕ್ಷಿತ್, ಸುಕುಮಾರ್ ಇತರರಿದ್ದರು.
Published on
ಜಯಪುರ: ನಾಡಪ್ರಭು ಕೆಂಪೇಗೌಡರು ಉತ್ತಮ ಆಡಳಿತಗಾರ ಮಾತ್ರವಲ್ಲ, ಈ ದೇಶ ಕಂಡ ಅತ್ಯುತ್ತಮ ಇಂಜಿನಿಯರ್, ನೀರಾವರಿ ತಜ್ಞ ಹಾಗೂ ಉತ್ತಮ ಸಾಮಾಜಿಕ ಸುಧಾರಕ. ಹೀಗಾಗಿ ಬೆಂಗಳೂರಿನಂಥ ವ್ಯವಸ್ಥಿತ ನಗರ ಕಟ್ಟಲು ಸಾಧ್ಯವಾಯಿತು ಎಂದು ಯುವ ಒಕ್ಕಲಿಗ ವೇದಿಕೆ ಗೌರವಾಧ್ಯಕ್ಷ ಕಿಬ್ಳಿ ಪ್ರಸನ್ನಕುಮಾರ್ ಹೇಳಿದರು.
ಹೇರೂರು ಗ್ರಾಪಂ ದೂಬ್ಳದಲ್ಲಿ ಹೇರೂರು ಯುವ ಒಕ್ಕಲಿಗ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,   ಸಮಾಜ ಸುಧಾರಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಕೆಂಪೇಗೌಡರ ಆದರ್ಶಗಳನ್ನು ಯುವ ಸಮುದಾಯ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯದರ್ಶಿ ಬಿ.ಎಲ್.ವರುಣ್ ಮಾತನಾಡಿ, ಕೆಂಪೇಗೌಡರು ವ್ಯವಸ್ಥಿತವಾಗಿ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದರು. ಎಲ್ಲ ಸಮುದಾಯಗಳ ಜನರ ಅಭಿವೃದ್ಧಿಗಾಗಿ ಶ್ರಮಿಸಿದರು ಎಂದರು.
ಮುಖಂಡ ಕುಕ್ಕುಡಿಗೆ ರವೀಂದ್ರ ಮಾತನಾಡಿ, ಕೆಂಪೇಗೌಡರ ಜಯಂತಿ ಆಚರಣೆ ಜತೆಗೆ ಯುವ ಒಕ್ಕಲಿಗ ವೇದಿಕೆ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಹಾಗೂ ಆಸ್ಪತ್ರೆಗೆ ಅಗತ್ಯ ವಸ್ತು ನೀಡುವ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಜಯಪುರದ ಸರ್ಕಾರಿ ಆಸ್ಪತ್ರೆಗೆ ಗಡಿಯಾರ ಹಾಗೂ ಬಿಪಿ ತಪಾಸಣೆ ಯಂತ್ರವನ್ನು ಹಾಗೂ ರೋಗಿಗಳಿಗೆ ಬ್ರೆಡ್ ಹಾಗೂ ಹಣ್ಣು ವಿತರಿಸಲಾಯಿತು. ಜಯಪುರ ಸರ್ಕಾರಿ ಬಾಲಕರ ವಸತಿನಿಲಯಕ್ಕೆ ಗಡಿಯಾರ, ವಿದ್ಯಾರ್ಥಿಗಳಿಗೆ ಟೋಪಿ, ಚಾಪೆ ಮತ್ತು ಜಯಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ಹೇರೂರು ಯುವ ಒಕ್ಕಲಿಗ ವೇದಿಕೆ ಅಧ್ಯಕ್ಷ ವಿಜೇಂದ್ರ ನಿಡವಾನೆ, ಖಜಾಂಚಿ ಎಸ್.ನಿರೀಕ್ಷಿತ್, ಸಂಚಾಲಕರಾದ ನಾಗರಾಜ್, ರಕ್ಷಿತ್ ಹೇರೂರು, ಪರಿವಾರದ ಹಿರಿಯ ಮುಖಂಡರು, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net