ಭಾರತೀಯ ಸಂಸ್ಕೃತಿ ಎಲ್ಲರಿಗೂ ಮಾದರಿ

ಜಯಪುರ ಮಕ್ಕಿಕೊಪ್ಪ ಶ್ರೀ ಸತ್ಯಸಾಯಿ ಶಾರದಾನಿಕೇತನಂ ಮಂದಿರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಗಣೇಶ್ ಶಾಸ್ತ್ರೀ, ಜಯವಂತ ಭಟ್ ಇತರರಿದ್ದರು.
ಜಯಪುರ ಮಕ್ಕಿಕೊಪ್ಪ ಶ್ರೀ ಸತ್ಯಸಾಯಿ ಶಾರದಾನಿಕೇತನಂ ಮಂದಿರದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಗಣೇಶ್ ಶಾಸ್ತ್ರೀ, ಜಯವಂತ ಭಟ್ ಇತರರಿದ್ದರು.
Published on
ಜಯಪುರ: ನಮ್ಮ ದೇಶದ ಸಂಸ್ಕೃತಿ ಇಡೀ ಜಗತ್ತಿಗೆ ಮಾದರಿ. ವಿದೇಶಿಯರು ನಮ್ಮ ಸಂಸ್ಕೃತಿ ಕಲಿತು ಅವರ ಶೈಲಿಯಲ್ಲಿ ನಮಗೆ ಹೇಳಿಕೊಡಲು ಪ್ರಯತ್ನಿಸಿದರೆ ಅದನ್ನೇ ನಾವು ಸತ್ಯವೆಂದು ನಂಬುತ್ತೇವೆ ಎಂದು ವಿದ್ವಾನ್ ಗಣೇಶ್ ಶಾಸ್ತ್ರೀ ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಶೃಂಗೇರಿ ಯೋಜನಾ ವ್ಯಾಪ್ತಿಯ ಜಯಪುರ ವಲಯದಿಂದ ಜಯಪುರ ಮಕ್ಕಿಕೊಪ್ಪ ಶ್ರೀ ಸತ್ಯಸಾಯಿ ಶಾರದಾನಿಕೇತನಂ ಮಂದಿರದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.
ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂದು ಹೇಳಿಕೊಡುವುದೇ ಧರ್ಮ. ಕುಟುಂಬವನ್ನು ಚೆನ್ನಾಗಿ ನೋಡಿಕೊಂಡು ಸಮಾಜಕ್ಕೆ ನೆರವಾಗುವುದೇ ಪುಣ್ಯದ ಕೆಲಸ. ಆಧುನಿಕ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ, ದೇವರ ಪೂಜೆ, ಹಿರಿಯರಿಗೆ ಗೌರವ ಕೊಡುವುದನ್ನು ಮಕ್ಕಳಿಗೆ ಹೇಳಿಕೊಡಬೇಕು. ಪವಿತ್ರ ಗ್ರಂಥ ಭಗವದ್ಗೀತೆ ಎಲ್ಲರ ಮನೆಯಲ್ಲೂ ಇರಬೇಕು ಎಂದರು.
ಜಯಪುರದ ಪಿಎಸಿಎಸ್ ಅಧ್ಯಕ್ಷ ಡಿ.ಬಿ.ರಾಜೇಂದ್ರ, ಜಯಪುರ ಶ್ರೀ ಸಾಯಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಯವಂತ ಭಟ್, ದಾನಿ  ಶಾಂತಕುಮಾರ್ ಜೈನ್, ಸುರೇಶ್, ಸಚ್ಚಿದಾನಂದ, ಶೇಖರ್, ಮನೋಹರ್, ಸುಬ್ರಹ್ಮಣ್ಯ, ರಮೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net